Zero FIR: ಝೀರೋ ಎಫ್‌ಐಆರ್‌ ಎಂದರೇನು.?

ನಮ್ಮ ಅಪ್ಪನ ಕಾಲದಲ್ಲಿ ಪೊಲೀಸ್‌ ಸ್ಟೇಷನ್‌ ಮೆಟ್ಟಿಲು ಹತ್ತಿದರೆ ದೊಡ್ಡ ಅಪರಾಧ ಎಂಬಂತೆ ಭಾವಿಸ್ತಾ ಇದ್ದರು. ಇದೀಗ ಕಾನೂನಿನ ಅರಿವು ಎಲ್ಲರನ್ನು ಜಾಣರನ್ನಾಗಿ ಮಾಡಿದೆ. ಪೊಲೀಸರು ಕೇಸ್‌ ತೆಗೆದುಕೊಳ್ಳೋದಿಲ್ಲ ಎನ್ನುವ ಭಯವೇ ಬೇಡ. ಅಪರಾಧ ನಡೆದ ಲಿಮಿಟ್ಸ್‌ನಲ್ಲಿ ಮಾತ್ರ ದೂರು ಕೊಡಬೇಕು ಅನ್ನೋ ಆತಂಕವನ್ನು ಬಿಟ್ಟು ಎಫ್‌ಐಆರ್‌ ದಾಖಲಿಸಬಹುದು. ಇದನ್ನೇ ಝೀರೋ ಎಫ್‌ಐಆರ್‌ ಎಂದು ಕರೆಯುತ್ತೇವೆ.

ಏನಿದು ಝೀರೋ ಎಫ್‌ಐಆರ್‌.? ಎಷ್ಟು ಸಹಕಾರಿ

ಇದು ಅಪರಾಧ ನಡೆದ ಪ್ರದೇಶವನ್ನು ಲೆಕ್ಕಿಸದೆ ನೊಂದಾಯಿಸಲಾದ ಮೊದಲ ತನಿಖಾ ವರದಿ. ಅಂದ್ರೆ ಫರ್ಸ್ಟ್‌ ಇನ್ಫರ್ಮೇಷನ್‌ ರಿಪೋರ್ಟ್‌. ಇಂತಹ ಪ್ರಕರಣಗಳಲ್ಲಿ ಪೊಲೀಸರು ಇನ್ನು ಮುಂದೆ ಇದು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿಲ್ಲ ಎಂದು ಹೇಳಲು ಬರುವುದಿಲ್ಲ. ಈ ಎಫ್‌ಐಆರ್‌ ದಾಖಲಿಸಿದ ಮೇಲೆ ನಿಜವಾದ ನ್ಯಾಯವ್ಯಾಪ್ತಿಯನ್ನು ಹೊಂದಿರುವ ಪೊಲೀಸ್‌ ಠಾಣೆಗೆ ಈ ಕೇಸ್‌ನಾ ವರ್ಗಾವಣೆ ಮಾಡಲಾಗುತ್ತದೆ.

2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಕೇಸ್‌ ನಂತ್ರ ಜಡ್ಜ್‌ ವರ್ಮಾ ಸಮಿತಿಯ ನಿರ್ದೇಶನದಂತೆ ಇದನ್ನು ಪರಿಚಯ ಮಾಡಲಾಯ್ತು. ಇದರ ಉದ್ದೇಶವೇ, ಎಫ್‌ಐಆರ್‌ ಹಾಕಿ ಅಂತಾ ಒಬ್ಬ ಸಾಮಾನ್ಯ ಪ್ರಜೆ ಸ್ಟೇಷನ್‌ಗೆ ಬಂದಾಗ ಅಲೆದಾಡಬೇಕಾಗಿಲ್ಲ. ಪೊಲೀಸರ ದೌರ್ಜನ್ಯಕ್ಕೆ ಒಳಗಾಗಬೇಕಾಗಿಲ್ಲ. ನ್ಯಾಯ ಕೇಳಲು ಯಾರ ಕಾಲು ಹಿಡಿಯಬೇಕಾಗಿಲ್ಲ. ಕಾನೂನು ಎಲ್ಲವನ್ನು ಕೊಟ್ಟಿದೆ. ಬಳಸಿಕೊಳ್ಳಿ. ಇದೇ ನಮ್ಮ ಕಾನೂನು.

Rakesh arundi

Leave a Reply

Your email address will not be published. Required fields are marked *