Yeshwantpur – Karwar train: ಯಶವಂತಪುರ- ಕಾರವಾರ ಹಗಲು ರೈಲಿನ ಓಡಾಟ ರದ್ದತಿ: ಡಿಸೆಂಬರ್ 16ರ ವರೆಗೆ ವಿಸ್ತರಣೆ
ಯಶವಂತಪುರ ಹಾಗೂ ಕಾರವಾರ ನಡುವೆ ವಾರದಲ್ಲಿ ಮೂರು ದಿನ ಹಗಲಿನಲ್ಲಿ ಸಂಚರಿಸುತ್ತಿದ್ದ ಎಕ್ಸ್ಪ್ರೆಸ್ ರೈಲಿನ ರದ್ದತಿಯನ್ನು ಡಿಸೆಂಬರ್ 16ರ ವರೆಗೆ ವಿಸ್ತರಿಸಲು ದಕ್ಷಿಣ-ಪಶ್ಚಿಮ ರೈಲ್ವೆ (ನೈರುತ್ಯ ರೈಲ್ವೆ) ನಿರ್ಧರಿಸಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದ
ರೈಲು ಸಂಖ್ಯೆ 16515 ಯಶವಂತಪುರ-ಕಾರವಾರ ನಡುವೆ ಸೋಮವಾರ, ಬುಧವಾರ, ಶುಕ್ರವಾರ ಸಂಚರಿಸುತ್ತಿದ್ದ ರೈಲಿನ ಸಂಚಾರದ ರದ್ದತಿಯ ಅವಧಿಯನ್ನು ನವೆಂಬರ್ 3 ರಿಂದ ಡಿಸೆಂಬರ್ 15 ರವರೆಗೆ ವಿಸ್ತರಿಸಲಾಗಿದೆ.
16516 ಕಾರವಾರ- ಯಶವಂತಪುರ ನಡುವೆ ಪ್ರತಿ ಮಂಗಳವಾರ, ಗುರುವಾರ, ಶನಿವಾರ ಸಂಚರಿಸುತ್ತಿದ್ದ ರೈಲಿನ ಸಂಚಾರದ ರದ್ದತಿಯ ಅವಧಿಯನ್ನು ನವೆಂಬರ್ 4 ರಿಂದ ಡಿಸೆಂಬರ್ 16 ರವರೆಗೆ ವಿಸ್ತರಿಸಲಾಗಿದೆ.
ಇದರಿಂದ ಎರಡೂ ರೈಲುಗಳ ತಲಾ 19 ಟ್ರಿಪ್ಗಳು ರದ್ದಾಗಿವೆ. ಕಳೆದ ಜೂನ್ ಹಾಗೂ ಆಗಸ್ಟ್ ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉಂಟಾದ ಭೂಕುಸಿತ, ಗುಡ್ಡ ಕುಸಿತದಿಂದ ಹಗಲು ಸಂಚರಿಸುತ್ತಿದ್ದ ಈ ರೈಲಿನ ಸಂಚಾರವನ್ನು ರದ್ದು ಮಾಡಲಾಗಿತ್ತು. ಮಂಗಳೂರು-ಹಾಸನ ರೈಲ್ವೆ ಮಾರ್ಗದ ಸುಬ್ರಹ್ಮಣ್ಯ ರೋಡ್ ಹಾಗೂ ಸಕಲೇಶಪುರ ನಡುವೆ ರೈಲ್ವೆ ಮಾರ್ಗದಲ್ಲಿ ವಿದ್ಯುದ್ದೀಕರಣ ಕಾಮಗಾರಿ ಈಗ ನಡೆಯುತ್ತಿದ್ದು, ಅದನ್ನು ಪೂರ್ಣಗೊಳಿಸುವ ಉದ್ದೇಶದಿಂದ ರೈಲು ಸಂಚಾರದ ಅವಧಿಯನ್ನು 44 ದಿನಗಳ ಕಾಲ ವಿಸ್ತರಿಸಲಾಗಿದೆ ಎಂದು ನೈರುತ್ಯ ರೈಲ್ವೆಯ ಮೂಲಗಳು ತಿಳಿಸಿವೆ.