Supreme Court: ಜಡ್ಜ್ ಮೇಲೆ 2 ಶೂ ಎಸೆದ ವಕೀಲ..! ಇತಿಹಾಸದಲ್ಲೇ ನಡೆದ ವಿಲಕ್ಷಣ ಘಟನೆ…!

ಸುಪ್ರೀಂ ಕೋರ್ಟ್‌ ಇತಿಹಾಸದಲ್ಲೇ ಹಿಂದೆಂದೂ ನಡೆಯದ ವಿಚಿತ್ರ ಹಾಗೂ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಇಂತಹ ಘಟನೆಯನ್ನು ಯಾರೊಬ್ಬರೂ ನಿರೀಕ್ಷೆ ಮಾಡಿರಲಿಲ್ಲ. ಕೋರ್ಟ್‌ ಹಾಲ್‌ನಲ್ಲಿ ಪ್ರತಿಷ್ಠಿತ ಹಾಗೂ ಗೌರವಾನ್ವಿತ ಹಾಗೂ ನ್ಯಾಯಾಂಗ ವ್ಯವಸ್ಥೇಯ ಪರಮೋಚ್ಛ ಹುದ್ದೆಯಾದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳೆ ತಲೆತಗ್ಗಿಸೋ ಘಟನೆಯೊಂದು ನಡೆದಿದೆ. 

ಸುಪ್ರೀಂ ಕೋರ್ಟ್‌ ನ್ಯಾಯ ಮೂರ್ತಿಗಳ ಮೇಲೆ ಶೂ ಎಸೆದಿರೋ ಘಟನೆ ನ್ಯಾಯಾಂಗ ವ್ಯವಸ್ಥೇಯೇ ಅಚ್ಚರಿ ಪಡುವಂತಾಗಿದೆ. ಸಿಜೆಐ ಬಿ.ಆರ್. ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿದ ಅನಿರೀಕ್ಷಿತ ಘಟನೆ ಸೋಮವಾರ ನಡೆದಿದ್ದು ಇಡೀ ಭಾರತದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಅಸಲಿಗೆ ಈ ರೀತಿ ಶೂ ಎಸೆದಿದ್ದು ವಿಚಾರಾಣಾಧೀನ ಆರೋಪಿಯೂ ಅಲ್ಲ. ತೀರ್ಪಿನಿಂದ ಅನ್ಯಾಯಕ್ಕೊಳಗಾದ ಸಂತ್ರಸ್ಥನೂ ಅಲ್ಲ. ಸಿಜೆಐ ಮೇಲೆ ಶೂ ಎಸೆಯುವ ಬಂಢ ಧೈರ್ಯ ಮಾಡಿದ್ದು ಸುಪ್ರೀಂ ಕೋರ್ಟ್‌ ವಕೀಲರು.

ಈ ವಕೀಲರು ಯಾರು..? ಯಾಕೆ ಜಡ್ಜ್‌ ಮೇಲೆ ಶೂ ಎಸೆದಿದ್ದು.? ಏನಿಷ್ಟು ಕೋಪ. ಆಕ್ರೋಶ.? ಅಸಲಿಗೆ ಕೋರ್ಟ್‌ ಹಾಲ್‌ನಲ್ಲಿ ನಡೆದ ಘಟನೆಯ ಬಗ್ಗೆ ಸಂಪೂರ್ಣವಾಗಿ ವಿವರಣೆ ನೋಡ್ತಾ ಹೋಗೋಣ. ಸೋಮವಾರ ಬೆಳಗ್ಗಿನ ಅವಧಿಯಲ್ಲಿ ಸಿಜೆಐ ಬಿ.ಆರ್‌. ಗವಾಯಿ ನೇತೃತ್ವದ ನ್ಯಾಯಪೀಠವು ಎಂದಿನಂತೆ ಪ್ರಕರಣಗಳ ವಿಚಾರಣೆ ನಡೆಸ್ತಾ ಇತ್ತು. ಈ ವೇಳೆ ವಕೀಲ ಕಿಶೋರ್ ರಾಕೇಶ್‌ ಎಂಬವರು ಬೆಳಿಗ್ಗೆ 11:35 ಕ್ಕೆ ಸ್ಪೋರ್ಟ್ಸ್‌ ಶೂಗಳೆರಡನ್ನು ನ್ಯಾಯಪೀಠದ ಸಮೀಪಕ್ಕೆ ಬಂದು ಶೂ ಕಳಚಿ ನ್ಯಾಯಮೂರ್ತಿಗಳತ್ತ ಎಸೆಯಲು ಮುಂದಾಗಿದ್ದಾರೆ. ಆದರೆ, ನ್ಯಾಯಾಲಯದಲ್ಲಿ ಹಾಜರಿದ್ದ ಭದ್ರತಾ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಮುಜುಗರದ ಘಟನೆ ತಪ್ಪಿದೆ.

ನ್ಯಾಯಮೂರ್ತಿಗಳಿಗೆ ಎಸೆದಂತ ಶೂ ಅವ್ರಿಗೆ ತಗುಲಲಿಲ್ಲ. ತಕ್ಷಣವೇ ಕಾರ್ಯಪ್ರವೃತ್ತರಾಗಿರೋ ಭದ್ರತಾ ಸಿಬ್ಬಂದಿ ವಕೀಲ ಕಿಶೋರ್‌ ರಾಕೇಶ್‌ರನ್ನು ತಡೆದು, ಕೋರ್ಟ್ ಹಾಲ್‌ನಿಂದ ಹೊರಕ್ಕೆ ಎಳೆದೊಯ್ದಿದ್ದಾರೆ. ಈ ವೇಳೆ ಆತ ‘ಸನಾತನ ಕಾ ಅಪಮಾನ್ ನಹೀ ಸಹೇಂಗೆ’ ಎಂದು ಹಿಂದಿಯಲ್ಲಿ ಕೂಗಾಡಿದ್ದಾನೆ. ಅಂದ್ರೆ ಸನಾತನ ಧರ್ಮಕ್ಕೆ ಅವಮಾನ ಆದ್ರೆ ಸಹಿಸೊಲ್ಲ ಎಂದು ಕೂಗಾಡಿರೋದು. ಇಂತದ್ದೊಂದು ವಿಲಕ್ಷಣ ಘಟನೆ ನಡೆದ್ರು ಕೂಡ ಬಿ.ಆರ್‌. ಗವಾಯಿ ಕಿಂಚಿತ್ತೂ ಡಿಸ್ಟರ್ಬ್‌ ಆಗದೇ ತುಂಬಾ ಕೂಲ್‌ ಆಗಿಯೇ ಸೆಷನ್ಸ್‌ ಕಂಟಿನ್ಯೂ ಮಾಡಿದ್ದಾರೆ.

ಇಷ್ಟೆಲ್ಲಾ ಘಟನೆ ನಡೆದ ಮೇಲೂ ಅಲ್ಲಿದ್ದ ಇತರ ವಕೀಲರನ್ನುದ್ದೇಶಿಸಿ ಮಾತನಾಡಿದ ಅವರು, “ಇಂತಹ ವಿಚಾರಗಳಿಂದ ನಿಮ್ಮ ಗಮನ ಬೇರೆಡೆಗೆ ಹೋಗದಂತೆ ನೋಡಿಕೊಳ್ಳಿ. ನಾವು ವಿಚಲಿತರಾಗಿಲ್ಲ. ಇದೆಲ್ಲವೂ ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ,” ಎಂದು ಗಟ್ಟಿ ದನಿಯಲ್ಲಿ ಹೇಳುವ ಮೂಲಕ ನ್ಯಾಯಾಲಯದ ಕಲಾಪವನ್ನು ಮುಂದುವರಿಸಿದ್ದಾರೆ.

ಇಂತಹ ಆಕ್ರೋಶ ರಾಕೇಶ್‌ ಕಿಶೋರ್‌ಗೆ ಯಾಕೆ..?
ಇತ್ತೀಚೆಗೆ ಸೆಪ್ಟೆಂಬರ್ 16 ರಂದು ಖಜುರಾಹೊ ದೇವಾಲಯ ಸಂಕೀರ್ಣದಲ್ಲಿರುವ ಜವಾರಿ ದೇವಾಲಯದಲ್ಲಿ ಶಿಥಿಲಗೊಂಡಿರುವ 7 ಅಡಿ ಎತ್ತರದ ವಿಷ್ಣು ವಿಗ್ರಹವನ್ನು ಪುನಃ ಸ್ಥಾಪನೆ ಮಾಡ್ಬೇಕು ಅನ್ನೋ ಕೇಸ್‌ಗೆ ಸಂಬಂಧಪಟ್ಟಂತೆ ಸಿಜೆಐ ಬಿ.ಆರ್‌. ಗವಾಯಿ ನೀಡಿದ್ದ ಹೇಳಿಕೆಯೇ ಈ ಘಟನೆಗೆ ಪ್ರಚೋದನೆ ನೀಡಿರಬಹುದು ಎನ್ನಲಾಗ್ತಿದೆ. ಆ ಪ್ರಕರಣವನ್ನು ವಜಾಗೊಳಿಸಿದ್ದೇ ಗವಾಯಿ ಮೇಲೆ ಕಿಶೋರ್‌ ರಾಕೇಶ್‌, ತಿರುಗಿ ಬೀಳಲು ಕಾರಣ ಇರಬಹುದು.

ಈ ಕೇಸ್‌ನಲ್ಲಿ ಬಿ.ಆರ್‌ ಗವಾಯಿ ಕೊಟ್ಟ ಆರ್ಡರ್‌ ಏನಿದೆ ಗೊತ್ತಾ..?

“ನೀವು ವಿಷ್ಣುವಿನ ಪರಮ ಭಕ್ತ ಎಂದು ಹೇಳಿಕೊಳ್ಳುತ್ತೀರಿ. ಈಗ ಹೋಗಿ ದೇವರ ಬಳಿಯೇ ಪ್ರಾರ್ಥಿಸಿ, ಆ ದೇವರೇ ಏನಾದರೂ ಮಾಡಲಿ,” ಎಂದು ಅರ್ಜಿದಾರರಿಗೆ ಮೌಖಿಕವಾಗಿ ಹೇಳಿದ್ದರು. ಅವರ ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಕಾರಣಕ್ಕಾಗಿಯೇ ರಾಕೇಶ್‌ ಕಿಶೋರ್‌ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿರೋ ಸಂಭವಗಳು ಇವೆ.

ಯಾರೂ ಈ ಕಿಶೋರ್‌ ರಾಕೇಶ್‌.?

ಪೊಲೀಸ್‌ ಮೂಲಗಳ ಪ್ರಕಾರ, ಅವರು ಮಯೂರ್ ವಿಹಾರ್ ಪ್ರದೇಶದ ನಿವಾಸಿ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ ನೋಂದಾಯಿತ ಸದಸ್ಯರಾಗಿದ್ದಾರೆ”

ಈ ವಿವಾದದ ನಂತರ, ಸಿಜೆಐ ಗವಾಯಿ ಅವರು ಸ್ಪಷ್ಟನೆಯನ್ನು ನೀಡಿ, “ನಾನು ಮಾಡಿದ ಕಾಮೆಂಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಒಂದು ನಿರ್ದಿಷ್ಟ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಯಾರೋ ನನಗೆ ಹೇಳಿದರು. ಆದರೆ ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ” ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ನಮಗೆ ನ್ಯೂಟನ್ ನಿಯಮ ತಿಳಿದಿತ್ತು ಪ್ರತಿಯೊಂದು ಕ್ರಿಯೆಗೂ ಸಮಾನ ಪ್ರತಿಕ್ರಿಯೆ ಇರುತ್ತದೆ, ಆದರೆ ಈಗ ಪ್ರತಿಯೊಂದು ಕ್ರಿಯೆಗೂ ಸಾಮಾಜಿಕ ಮಾಧ್ಯಮದಲ್ಲಿ ಅಸಮಾನ ಪ್ರತಿಕ್ರಿಯೆ ಇರುತ್ತದೆ” ಎಂದು ಅವರು ಹೇಳಿದರು. ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಕೂಡ ಇದಕ್ಕೆ ಸಮ್ಮತಿಸಿದರು. “ನಾವು ಪ್ರತಿದಿನ ಇದರಿಂದ ಬಳಲುತ್ತಿದ್ದೇವೆ. ಸಾಮಾಜಿಕ ಮಾಧ್ಯಮವು ಅನಿಯಂತ್ರಿತ ಕುದುರೆ, ಮತ್ತು ಅದನ್ನು ಪಳಗಿಸಲು ಯಾವುದೇ ಮಾರ್ಗವಿಲ್ಲ ಎಂದು ಹೇಳಿದ್ದಾರೆ.

Rakesh arundi

Leave a Reply

Your email address will not be published. Required fields are marked *