Mysuru: ರೈಲ್ವೇ ಪ್ಲಾಟ್ ಫಾರಂನಲ್ಲಿ ತಾಯಿ ಬಳಿ ಮಲಗಿದ್ದ ಗಂಡು ಮಗು ಕಳ್ಳತನ – ಮಹಿಳೆ ಬಂಧನ
ಆರು ತಿಂಗಳ ಗಂಡು ಮಗುವನ್ನು ಕದ್ದಯ್ಯುತ್ತಿದ್ದ ಮಹಿಳೆಯನ್ನು ರೈಲ್ವೇ ಪೊಲೀಸರು ಬಂಧಿಸಿ ಮಗುವನ್ನು ಪೋಷಕರಿಗೆ ಒಪ್ಪಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಬುಧವಾರ ರಾತ್ರಿ ಪೋಷಕರು ಮಗುವಿನೊಂದಿಗೆ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ ಬಳಿ ಮಲಗಿದ್ದರು. ಈ ವೇಳೆ ಮಹಿಳೆಯೊಬ್ಬಳು ಮಗುವನ್ನು ಕದ್ದುಕೊಂಡು ಹೋಗಿದ್ದಳು. ಪೋಷಕರು ನಿದ್ರೆಯಿಂದ ಎಚ್ಚರಗೊಂಡಗ ಮಗು ಕಾಣೆಯಾಗಿರುವುದು ಗೊತ್ತಾಗಿದೆ.
ತಾಯಿ ಆಕ್ರಂದನ ಕಂಡ ರೈಲ್ವೆ ಪೊಲೀಸರು ವಿಚಾರಿಸಿದ್ದಾಗ ಮಗು ಕಾಣೆ ಆಗಿರುವ ವಿಚಾರವನ್ನು ತಿಳಿಸಿದ್ದಾರೆ.
ತಕ್ಷಣವೇ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ನಡು ವಯಸ್ಸಿನ ಮಹಿಳೆ ಮಗುವನ್ನು ಅಪಹರಿಸಿದ್ದು ಗೊತ್ತಾಗಿದೆ. ಕಾರ್ಯಪ್ರವೃತ್ತರಾದ ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿದ್ದಾರೆ. ಹಾಸನ ಮೂಲದ 50 ವರ್ಷದ ನಂದಿನಿಯನ್ನು ಬಂಧಿಸಿದ ಪೊಲೀಸರು ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ.