Dasara: ಮೈಸೂರು ದಸರಾ ಹಿನ್ನೆಲೆ ಏನು..! ರೋಚಕ ಅಂಶಗಳು.! ಶುರುವಾಗಿದ್ದೇಗೆ.!?
ಇಡೀ ವಿಶ್ವವೇ ಮೈಸೂರಿನ ಕಡೆ ತಿರುಗಿನೋಡುವಂತೆ ಮಾಡಿದ್ದು ದಸರಾ ಹಬ್ಬ. ಸಡಗರ, ಸಂಭ್ರಮ, ರಾಜರ ಕಾಲದಿಂದ ನಡೆದುಕೊಂಡು ಬಂದ ಆಚರಣೆಗಳು ತನುಮನ ಸೆಳೆದಿವೆ. ಹಾಗಾದ್ರೆ, ಈ ಹಬ್ಬವನ್ನು ಆಚರಿಸಲು ಕಾರಣವೇನು.? ಈ ನಾಡಹಬ್ಬ ಹುಟ್ಟಿದ್ದೇಗೆ.? ಹಿನ್ನೆಲೆ ಏನು ಅನ್ನೋದನ್ನು ನೋಡ್ತಾ ಹೋಗೋಣ.
ಮೈಸೂರಿನಲ್ಲಿ ಆಚರಿಸೋ ಈ ನವರಾತ್ರಿ ಹಬ್ಬಕ್ಕೆ ವಿಶೇಷ ಇತಿಹಾಸವಿದೆ. ಈ ಚರಿತ್ರೆಯೇ ಒಂದು ಅಮೋಘ. ಮೊದಲು ಶುರುವಾಗಿದ್ದು 14 ನೇ ಶತಮಾನದಲ್ಲಿ
- ಹೊಯ್ಸಳರ ನಂತರದ ವಿಜಯನಗರ ಸಾಮ್ರಾಜ್ಯದಲ್ಲಿ
- 1610 ರಲ್ಲಿ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವ ಆಚರಿಸಲಾಯಿತು
- ಮಹಾನವಮಿ ಉತ್ಸವ ಜೋರಾಗಿ ನಡೆಯುತ್ತಿತ್ತು.
- 1612 ರಲ್ಲಿ ಮೈಸೂರಿಗೆ ದಸರಾ ದರ್ಬಾರ್ ಶಿಫ್ಟ್
- ಶ್ರೀನಗರದ ಮೈಸೂರು ಸಂಸ್ಥಾನ ಮೈಸೂರಿಗೆ ಸ್ತಳಾಂತರ
- ಯದುವಂಶದ ಶ್ರೀರಾಜ ಒಡೆಯರ್ ಚಿನ್ನದ ಸಿಂಹಾಸನದ ಕೂತು ಆಚರಣೆ
- ಅಂದು 10 ದಿನಗಳ ನವರಾತ್ರಿ ಸಂಭ್ರಮ
- 1805ರಿಂದ 1969ರವರೆಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂದುವರಿಕೆ
- 1969ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಆಚರಣೆ
- 1970ರಲ್ಲಿ ರಾಜರು ಭಾಗವಹಿಸೋದಿಲ್ಲ ಎಂಬ ಘೋಷಣೆ
- ಪ್ರಧಾನಿ ಇಂದಿರಾಗಾಂಧಿ ರಾಜರು ಆನೆ ಮೇಲೆ ಕೂರುವಂತಿಲ್ಲ ಎಂಬ ಘೋಷಣೆ
- 1970ರಲ್ಲಿ ನಾನು ಸಿಂಹಾಸನದಲ್ಲಿ ಕುಳಿತುಕೊಳ್ಳುವುದಿಲ್ಲ, ದರ್ಬಾರನ್ನೂ ನಡೆಸುವುದಿಲ್ಲ ಎಂದು ಜಯಚಾಮರಾಜೇಂದ್ರ ಒಡೆಯರ್ ಘೋಷಣೆ.
- ಮರದ ಅಂಬಾರಿಯನ್ನು ಆನೆಯ ಮೇಲೆ ಇಟ್ಟು ಖಾಸಗಿ ದಸರಾ ಮೆರವಣಿಗೆ ನಡೆಸಲಾಯಿತು.
- 1970, 1971, 1972 ಹಾಗೂ 1973ರವರೆಗೆ ಪಟ್ಟದ ಕತ್ತಿ ಇಟ್ಟೇ ಅಂಬಾರಿ ಮೆರವಣಿಗೆ
- ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ರಾಜರ ಜತೆ ಚರ್ಚೆ ನಡೆಸಿ ಚಿನ್ನದ ಅಂಬಾರಿ ಮೆರವಣಿಗೆ ತೀರ್ಮಾನ