Karuru Stampade: ಕರೂರು ದುರಂತಕ್ಕೆ ಕಾರಣಗಳೇನು.! ಅಸಲಿಗೆ ಆದ ಎಡವಟ್ಟುಗಳೇನು..!?

ಇಡೀ ದೇಶವೇ ಕಂಬನಿ ಮಿಡಿಯುತ್ತಿರೋ ಕರೂರು ದುರಂತಕ್ಕೆ ಅಸಲಿ ಕಾರಣಗಳೇನು ಅನ್ನೋ ಕುರಿತಾಗಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ನಟ ವಿಜಯ್‌ ಮೇಲೆ ಅನೇಕರು ಬೊಟ್ಟು ಮಾಡಿ ತೋರಿಸ್ತಾ ಇದ್ದರೆ. ನಟ ವಿಜಯ್‌ ಮಾತ್ರ ಸರ್ಕಾರವೇ ಕಾರಣ ಎಂದಿದ್ದಾರೆ. ಈಗಾಗ್ಲೇ ಮೃತ ಪಟ್ಟ ಕುಟುಂಬಗಳಿಗೆ ತಲಾ 20 ಲಕ್ಷ ಘೋಷಣೆ ಮಾಡಿರೋ ವಿಜಯ್‌ ಸಧ್ಯದಲ್ಲೇ ಪ್ರೆಸ್‌ ಮೀಟ್‌ ಮಾಡಿ ಕ್ಲಾರಿಟಿ ಕೊಡಲಿದ್ದಾರೆ. ಮೃತರ ಸಂಖ್ಯೆ ಒಂದು ಕಡೆ 40 ದಾಟಿದೆ.

100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸಂತ್ರಸ್ತರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಇಲ್ಲಿಯವರೆಗೆ 28 ಮಂದಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಆದರೆ ಈ ದುರಂತ, ಯಾರು ಮರೆಯಲಾದ ಭೀಕರ ಕಾಲ್ತುಳಿತಕ್ಕೆ ಕಾರಣಗಳೇನು ಅನ್ನೋದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

  • ವಿಜಯ್‌ ತಡವಾಗಿ ಆಗಮಿಸಿದ್ದು.
  • ತಾಳ್ಮೆ ಕಳೆದುಕೊಂಡಿದ್ದ ಜನ.
  • ಆರಂಭದಲ್ಲೇ ಮೂರ್ಛೆ ಹೋಗಿ ಉಸಿರಾಟದ ಸಮಸ್ಯೆ.
  • 10 ಸಾವಿರ ಜನರ ನಿರೀಕ್ಷೆ. ಸೇರಿದ್ದು 50 ಸಾವಿರ.
  • ಎರಡು ಕಡೆ ಅನುಮತಿ ಕೇಳಿದ್ದು, ಪೊಲೀಸರು ಈ ಚಿಕ್ಕ ಜಾಗಕ್ಕೆ ಅವಕಾಶ.
  • ಇಂತ ಜಾಗಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿದ್ದು.
  • ವಿಜಯ್ ನೋಡಲು ಗುಡಿಸಲು, ಟ್ರಾನ್ಸ್ಫಾರ್ಮ್ಗಳ ಮೇಲೇರಿದ ಜನ .
  • ಮಾತಾಡುವ ವೇಳೆ ಕರೆಂಟ್‌ ಆಫ್‌ ಆಗಿದ್ದು.
  • ಬಸ್‌ ಮೂವ್‌ ಆಗ್ತಿದ್ದ ಹಾಗೆ ಜನ ನೂಕುನುಗ್ಗಲು.
  • ಪೊಲೀಸರ ಲಾಠಿ ಚಾರ್ಜ್‌. ವಿಚಲಿತರಾದ ಜನ.
  • ದಿಕ್ಕಾಪಾಲಾಗಿ ಓಡಿದ ಜನ, ತಳ್ಳಾಟ ಶುರುವಾಗಿದ್ದು.

Rakesh arundi

Leave a Reply

Your email address will not be published. Required fields are marked *