Viral Singer:ವೈರಲ್ ಹುಡುಗಿ ಊರು ತುಂಬಾ ಫೇಮಸ್..!ಹೂವಿನ ಬಾಣದ ಹುಡುಗಿಗೆ ಫುಲ್ ಡಿಮ್ಯಾಂಡ್
ಇಂದಿನ ಯುವ ಪೀಳಿಗೆಯ ಕ್ರೇಜ್ ನೋಡಿ ನಮ್ಮ ಸಮಾಜ ಯಾವ ದಿಕ್ಕಿಗೆ ಸಾಗ್ತಾ ಇದೆ ಅಂತಾ ಅಚ್ಚರಿ ವ್ಯಕ್ತಪಡಿಸ್ಬೇಕೋ. ಅಥವಾ ಜನರೇಷನ್ ಬದಲಾಗಿದೆ, ಅವ್ರ ಪ್ಯಾಷನ್ ನಾವು ಒಪ್ಪಿಕೊಳ್ಳಲೇಬೇಕು ಅಂತಾ ಮೌನವಾಗಿರಬೇಕೋ ಗೊತ್ತಾಗ್ತಿಲ್ಲ. ಇಂದಿನ ಫಾಸ್ಟ್ ಯುಗದಲ್ಲಿ ಯಾರು ಬೇಕಾದ್ರೂ ರಾತ್ರೋರಾತ್ರಿ ಫೇಮಸ್ ಆಗಬಹುದು. ಅದಕ್ಕೆ ಲಕ್ ಇರಬೇಕಷ್ಟೆ. ವರ್ಷಾನುಗಟ್ಟಲೆ ಕಷ್ಟಪಟ್ಟು ಸಂಗೀತ ಕಲಿತವ್ರೆ ಬದುಕು ಕಟ್ಟಿಕೊಳ್ಳಲು ಎಣಗಾಡ್ತಿದ್ದಾರೆ. ಇಂತಹ ಕಾಲದಲ್ಲಿ ಟೈಮ್ ಪಾಸ್‌ಗೆ ತಮಾಷೆಗೆ ಹಾಡಿದ ಹಾಡು ಇಂದು ವೈರಲ್ ಆಗಿದೆ. ಇಷ್ಟು ಮಾತ್ರವಲ್ಲದೆ, ಅನೇಕ ಕಾರ್ಯಕ್ರಮಗಳಿಗೆ ಗೆಸ್ಟ್ ಆಗಿ ಆಫರ್ ಬರ್ತಿದೆ. ಇಷ್ಟು ಮಾತ್ರವಲ್ಲದೇ ಪ್ರಮೋಷನ್‌ಗೂ ಆಫರ್ಸ್‌ಗಳು ಬರ್ತಿವೆಯಂತೆ.
ಅದು ಇನ್ಯಾರು ಅಲ್ಲ ಇತ್ತೀಚೆಗೆ ಹೂವಿನ ಬಾಣದಂತೆ ಹಾಡು ಹಾಡಿದ್ದ ಅಮ್ಮು ಗೌಡ ಮಂಡ್ಯ ಟು ಇಂಡಿಯಾ ಫೇಮಸ್ ಆಗಿದ್ದು ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ನಿತ್ಯಶ್ರೀಗೆ ನೂರಾರು ಪ್ರಮೋಷನ್ ಕಾಲ್ಸ್ ಬರ್ತಾ ಇವೆಯಂತೆ. ಇಂದಿನ ಯುವಕ ಯುವತಿಯರು ಸೋಶಿಯಲ್ ಮೀಡಿಯಾಗೆ ಅಂಟಿಕೊಂಡೇ ಇರ್ತಾರೆ. ಇಂತಹ ಕಲಿಯುಗದಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮೊಸಳೆಕೊಪ್ಪ ಗ್ರಾಮದ ಈ ಅಮ್ಮು ಗೌಡ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಬಿರುಗಾಳಿ ಚಿತ್ರದಲ್ಲಿ ಶ್ರೇಯಾ ಘೋಷಲ್ ಅವರು ಹಾಡಿದ ಈ ಹಾಡನ್ನು ತಮಾಷೆಗಾಗಿ ವಿಭಿನ್ನ ಸ್ಟೈಲ್‌ನಲ್ಲಿ ಹಾಡಿದ್ದ ನಿತ್ಯಶ್ರೀ ಎಲ್ಲರ ಗಮನ ಸೆಳೆದಿದ್ದಾರೆ. ಈ ಹುಡುಗಿ ಸ್ನೇಹಿತರ ಎದುರು ಹಾಡಿದ್ದ ಹಾಡು ಇದೀಗ ಇಡೀ ರಾಜ್ಯ ಆ ಹಾಡನ್ನು ಗುನುಗೋ ಥರಾ ಆಗಿಬಿಟ್ಟಿದೆ. ನನ್ನ ವ್ಯಂಗ್ಯ ಇಷ್ಟೊಂದು ವೈರಲ್ ಆಗುತ್ತದೆ ಎಂದು ಗೊತ್ತೇ ಇರಲಿಲ್ಲ ಎನ್ನುತ್ತಾರೆ ವಿಚಿತ್ರ ಗಾಯಕಿ ನಿತ್ಯಶ್ರೀ.
ವೈರಲ್ ಹುಡುಗಿ ಹಿಂದೆ ಬಿದ್ದ ಆಯೋಜಕರು
ಸದ್ಯ ಈ ಹುಡುಗಿಗೆ ರಾತ್ರೋ ರಾತ್ರಿ ಒಂದೇ ಒಂದು ಹಾಡು 30k ಫಾಲ್ಲೋರ್ಸ್ ತಂದು ಕೊಟ್ಟಿದೆ.ಇನ್ಸ್ಟಾಗ್ರಾಮ್, ಗೂಗಲ್, ಫೇಸ್ಬುಕ್, ಎಲ್ಲಾ ಕಡೆಗಳಲ್ಲೂ ಫೇಮಸ್ ಆಗಿರೋ ನಿತ್ಯಶ್ರೀಗೆ ಈಗ ನೂರಾರು ಫ್ರೋಮೋಷನ್ ಕರೆಗಳು ಬರ್ತಾ ಇವೆ. ಇನ್ನು ಹಲವು ಕಾರ್ಯಕ್ರಮಗಳ ವೇದಿಕೆಯಲ್ಲಿ ಗೆಸ್ಟ್ ಆಗಿ ಭಾಗವಹಿಸ್ತಿದ್ದಾರೆ.