Vijayapura Bank Robbery: ಖತರ್ನಾಕ್‌ ಕಳ್ಳರು.ಎಸ್‌ಬಿಐ ಬ್ಯಾಂಕ್‌ ದರೋಡೆ. 50 ಕೆಜಿ ಚಿನ್ನ, 8 ಕೋಟಿ ಕ್ಯಾಶ್‌ ದರೋಡೆ.


ಹೊಟ್ಟೆ ಪಾಡಿಗೆ ದಿನಗೂಲಿ ಮಾಡಿ ಜೀವನ ಸಾಗಿಸೋ ಜನರ ಮುಂದೆ, ಅವರಿವರ ತಲೆ ಹೊಡೆದ ಬದುಕುವ ಇಂತಹ ಪಾಪಿಗಳ ಕೃತ್ಯಗಳನ್ನು ಕಂಡಾಗ ರೋಷ ಉಕ್ಕಿ ಬರುತ್ತದೆ. ಅಂತಹ ಆಘಾತಕಾರಿಯಾದ ಘಟನೆ ವಿಜಯಪುರದ ಚಡಚಣ ದಲ್ಲಿ ನಡೆದಿದೆ. ಎಸ್‌ಬಿಐ ಬ್ಯಾಂಕ್‌ಗೆ ಏಕಾಏಕಿಯಾಗಿ ನುಗ್ಗಿದ ದರೋಡೆಕೋರರು ಮ್ಯಾನೇಜರ್‌ನಾ ಕಟ್ಟಿಹಾಕಿ ಕಿಂಚಿತ್ತೂ ಭಯವಿಲ್ಲದೇ 8 ಕೋಟಿ ರೂಪಾಯಿ ಕ್ಯಾಶ್‌ನಾ ಎಗರಿಸಿದ್ದಾರೆ. ಜೊತೆಗೆ 50 ಕೆಜಿ ಚಿನ್ನವನ್ನು ಕಳವು ಮಾಡಿದ್ದಲ್ಲದೇ ಪೊಲೀಸರಿಗೆ ಯಾಮಾರಿಸಿದ್ದಾರೆ. ವಿಜಯಪುರದಲ್ಲಿ ನಡೆದ ಘಟನೆಗೆ ಚಡಚಣದ ಸುತ್ತಲೂ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಹೇಗಿತ್ತು ಭಯಾನಕ ದರೋಡೆ..!?
ಈ ಘಟನೆ ನಡೆದಿದ್ದು ಮಂಗಳವಾರ ಸಂಜೆ 06:30 ರಿಂದ 07:15 ರ ಸಮಯದಲ್ಲಿ. ಸಂಜೆ 04 :30 ಸುಮಾರಿಗೆ ಅಕೌಂಟ್‌ ಓಪನ್‌ ಮಾಡಲು ಬಂದ ಒಬ್ಬ ವ್ಯಕ್ತಿ ಬ್ಯಾಂಕ್‌ ಒಳಗಡೆಯೇ ಕೂತಿದ್ದಾನೆ. ಯಾವಗ ಬ್ಯಾಂಕ್‌ ಬಂದ್‌ ಆಗುವ ಸಮಯ ಬರುತ್ತದೋ ಆ ಸಮಯಕ್ಕೆ ಇನ್ನಬ್ಬನನ್ನು ಕರೆಸಿಕೊಂಡಿದ್ದಾರೆ. ಆ ಸಮಯದಲ್ಲಿ ಬ್ಯಾಂಕ್‌ನಲ್ಲಿ 6 ಜನ ಸಿಬ್ಬಂದಿ, ಹಾಗೂ 4 ಜನ ಗ್ರಾಹಕರಿದರು. ಅವ್ರನ್ನೆಲ್ಲಾ ಹೆದರಿಸಿ ಬ್ಯಾಂಡ್‌ನಿಂದ ಕೈ ಕಟ್ಟಿ ಥೇಟ್‌ ಸಿನಿಮಾ ಸ್ಟೈಲ್‌ನಲ್ಲಿ ಒಂದು ರೂಮ್‌ನಲ್ಲಿ ಕೂಡಿ ಹಾಕಿದ್ದಾರೆ. ಬಳಿಕ ಸಿಬ್ಬಂದಿಯನ್ನು ಹೆದರಿಸಿ ದರೋಡೆ ನಡೆಸಿದ್ದಾರೆ. ಇಷ್ಟೇ ಅಲ್ಲದೆ ಲಾಕರ್‌ ಕೂಡ ಓಪನ್‌ ಮಾಡಿಸಿ 1.4 ಕೋಟಿ ರೂಪಾಯಿ ಹಾಗೂ ಚಿನ್ನಾಭರಣ ಇರೋ 398 ಪ್ಯಾಕೇಟ್‌ಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಒಟ್ಟಾರೆ 21 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ, ನಗದು ಕಳವು ಮಾಡಿ ದರೋಡೆಕೋರರು ಪರಾರಿಯಾಗಿದ್ದಾರೆ.

ದಡೋಡೆ ಮಾಡಲು ಮಾರಕಾಸ್ತ್ರ ವಸ್ತುಗಳು
ಮಹಾರಾಷ್ಟ್ರದ ಕಳ್ಳರ ಗ್ಯಾಂಗ್‌ ಈ ದರೋಡೆ ಮಾಡಿರೋ ಶಂಕೆ ವ್ಯಕ್ತವಾಗ್ತಿದೆ. ಮಹಾರಾಷ್ಟ್ರ ಸಂಪರ್ಕ ಮಾಡುವ ರಸ್ತೆಗಳಿಗೆ ನಾಕಾಬಂಧಿ ಹಾಕಲಾಗಿದೆ. ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಗ್ತಿದೆ. ಬರೋಬ್ಬರಿ 50 ಜನ ಖತರ್ನಾಕ್‌ ಗ್ಯಾಂಗ್‌ ಈ ಕಳ್ಳತನದಲ್ಲಿ ಭಾಗಿಯಾಗಿದೆ ಅನ್ನೋ ಮಾಹಿತಿಗಳು ಲಭ್ಯವಾಗಿವೆ. ಘಟನೆಯ ಬಳಿಕ ಅಕೌಂಟ್‌ ಹೊಂದಿರೋ ಸಾರ್ವಜನಿಕರು ಬ್ಯಾಂಕ್‌ ಮುಂಭಾಗ ಜಮಾಯಿಸಿದ್ದಾರೆ. ಒಂದು ಕಡೆ ಅವರನ್ನು ಚದುರಿಸೋಕೆ ಪೊಲೀಸರು ಹರಸಾಹಸ ಪಡ್ತಿದ್ದಾರೆ.

ದರೋಡೆಕೋರರು ಪಕ್ಕಾ ಪ್ಲಾನ್‌ ಮಾಡಿಯೇ ಈ ದರೋಡೆ ಮಾಡಿದ್ದಾರೆ. ಅವ್ರ ಕೈಯಲ್ಲಿ ಪಿಸ್ತೂಲ್‌ ಸೇರಿದಂತೆ ಮಾರಕಾಸ್ತ್ರಗಳು ಇದ್ದವು. ಅವ್ರು ಪ್ರೀಪ್ಲಾನ್‌ ಮಾಡಿ ಮಾಡಿದ್ದಾರೆ. ಅವ್ರನ್ನು ತಕ್ಷಣ ಬಂಧಿಸಲು ಆಗ್ರಹ ಕೂಡ ಕೇಳಿ ಬರ್ತಿದೆ. ಮ್ಯಾನೇಜರ್‌ ಹಾಗೂ ಕ್ಯಾಶಿಯರ್‌ ಅವ್ರ ಕಾಲನ್ನೇ ಕಟ್ಟಿ ಹಾಕಿದ್ದ ಕ್ರೂರಿಗಳು ಬೆದರಿಕೆಯನ್ನು ಒಡ್ಡಿದ್ದರು. ಪ್ರಾಣಾಪಾಯದಲ್ಲಿದ್ದ ಎಲ್ಲರೂ ಅದೃಷ್ಟವಶಾತ್‌ ಪಾರಾಗಿದ್ದಾರೆ.

ಇನ್ನು ಅಚ್ಚರಿ ಎಂದರೆ, ಈ ಗುಂಪು ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆ ಮಾಡಿದ ನಂತ್ರ ಚಡಚಣ ದಿಂದ ಮಹಾರಾಷ್ಟ್ರ ಮಾರ್ಗವಾಗಿ ಹೋಗುವಾಗ ಮಂಗಳವೇಡ ತಾಲ್ಲೂಕಿನ ಹುಲಿಜಂತಿ ಗ್ರಾಮದ ಬಳಿ ಇವ್ರ ವಾಹನ ಕುರಿಗಳಿಗೆ ಡಿಕ್ಕಿ ಹೊಡೆದಿದೆ. ಪ್ರಶ್ನೆ ಮಾಡಿದ್ದಕ್ಕೆ ಪಿಸ್ತೂಲ್‌ ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಈಗಾಗ್ಲೇ ಬ್ಯಾಂಕ್‌ಗೆ ಶ್ವಾನದಳ ಬೆರಳಚ್ಚು ನುರಿತರ ಟೀಮ್‌ ಕೂಡ ಆಗಮಿಸಿದ್ದು ಎಫ್‌ಎಸ್‌ಎಲ್‌ಗೆ ರಿಪೋರ್ಟ್‌ ಕಳಿಸಿಕೊಡಲಾಗುತ್ತದೆ.

Rakesh arundi

Leave a Reply

Your email address will not be published. Required fields are marked *