ರಾಕೇಶ್ ಆರುಂಡಿ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಆರುಂಡಿ ಗ್ರಾಮದ ಪತ್ರಕರ್ತರು.ಈ ಹಿಂದೆ ದಿಗ್ವಿಜಯ ಸೇರಿದಂತೆ ಇತರ ಸ್ಯಾಟಲೈಟ್ ಮಾಧ್ಯಮಗಳಲ್ಲಿ ಸಿನಿಮಾ, ರಾಜಕೀಯ, ಮೆಟ್ರೋ ವರದಿಗಾರರಾಗಿ ಕೆಲಸ ನಿರ್ವಹಿಸಿದ್ದು, ರಾಜಕೀಯ ಕ್ಷೇತ್ರ, ಪ್ರಚಲಿತ ಘಟನೆ, ವಿದ್ಯಾಮಾನಗಳ ಬಗ್ಗೆ ಹಾಗೂ ಹೊಸತನಗಳಿಗೆ ತೆರೆದುಕೊಳ್ಳುವ ವಿಷಯಗಳ ಬಗ್ಗೆ ವರದಿಗಾರಿಕೆ ಮಾಡುವ ಕ್ಷಮತೆ ಹೊಂದಿದ್ದಾರೆ. ಕಳೆದ ಮೂರು ನಾಲ್ಕು ವರ್ಷಗಳಿಂದ ತಮ್ಮದೇ ಅವನಿಯಾನ ಎನ್ನುವ ಡಿಜಿಟಲ್ ಮಾಧ್ಯಮವನ್ನು ಹುಟ್ಟು ಹಾಕಿದ್ದು ಕಳೆದ ಏಳೆಂಟು ತಿಂಗಳಲ್ಲೇ ಅಂದಾಜು 7 ಲಕ್ಷ ಫಾಲ್ಲೋವರ್ಸ್ ಸಂಪಾದಿಸಿದ್ದಾರೆ.