Ballari: ದೇವರಘಟ್ಟ ಜಾತ್ರೆಯಲ್ಲಿ ದೊಣ್ಣೆಗಳಿಂದ ಬಡಿದಾಟ- ಇಬ್ಬರು ಸಾವು
ಆಂಧ್ರ ಪ್ರದೇಶದ ದೇವರಗುಡ್ಡ ಜಾತ್ರೆಯಲ್ಲಿ ದೊಣ್ಣೆಗಳಿಂದ ಬಡಿದಾಟದ ವಿಶಿಷ್ಟ ಸಂಪ್ರದಾಯವಿದೆ. ಪ್ರತಿ ವರ್ಷದಂತೆ ಈ ವರ್ಷವೂ ಬಡಿದಾಟ ಜಾತ್ರೆ ನಡೆದಿದ್ದು, ಹೊಡೆದಾಟದ ವೇಳೆ ಇಬ್ಬರು ಮೃತಪಟ್ಟಿದ್ದಾರೆ. 15ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ.
ಅರಕೇರ ಮತ್ತು ನೇರಣಕಿ ಗ್ರಾಮದ ಜನರು ಮಾಳ ಮಲ್ಲೇಶ್ವರನ ಉತ್ಸವ ಮೂರ್ತಿಯನ್ನ ತಮ್ಮ, ತಮ್ಮ ಊರುಗಳಿಗೆ ಒಯ್ಯಲು ದೊಣ್ಣೆಗಳಿಂದ ಬಡಿದಾಡುತ್ತಾರೆ. ಗುರುವಾರ ನಡೆದ ಜಾತ್ರೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ಭಾಗಿಯಾಗಿದ್ದರು. ಹೊಡೆದಾಟದಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಗಾಯಗೊಂಡವರನ್ನು ಆಲೂರು, ಅದೋನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವರಗುಡ್ಡದ ತಾತ್ಕಾಲಿಕ ಆಸ್ಪತ್ರೆಯಲ್ಲೂ ಕೆಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬನ್ನಿ ಹಬ್ಬದ ದೇವರುಗಟ್ಟನಲ್ಲಿ ಸಾಂಪ್ರದಾಯಿಕ ರಕ್ತಸಿಕ್ತವಾಗಿದೆ. ಕೋಲುಗಳು, ಬಡಿಗೆ, ಮರದ ತುಂಡುಗಳಿಂದ ಭಕ್ತರು ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ.