Drowned: ದೀಪಾವಳಿ ಹಬ್ಬದಂದೇ ಕೆರೆಯಲ್ಲಿ ಮುಳುಗಿ ತಂದೆ, ಮಗಳು ಸೇರಿ ಮೂವರು ಸಾವು
ದೀಪಾವಳಿ ಹಬ್ಬದಂದೇ ಕೆರೆಗೆ ಬಿದ್ದು ತಂದೆ, ಮಗಳು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪದ ಯರೇಕಟ್ಟೆ ಗ್ರಾಮದಲ್ಲಿ ನಡೆದಿದೆ. ಶ್ರಾವ್ಯಾ (12), ಪುಣ್ಯಾ(12), ಶ್ರಾವ್ಯಾಳ ತಂದೆ ವೆಂಕಟೇಶ್ (50) ಮೃತ ದುರ್ದೈವಿಗಳು.
ಸಂಜೆ 6 ಗಂಟೆಗೆ ಗ್ರಾಮದ ಬಳಿಯ ಕೆರೆ ಕಡೆ ಮೂವರು ಹೋಗಿದ್ದಾರೆ. ಮೂತ್ರ ವಿಸರ್ಜನೆ ವೇಳೆ ಶ್ರಾವ್ಯ ಕಾಲು ಜಾರಿ ಕೆರೆಗೆ ಬಿದ್ದಿದ್ದಾಳೆ. ಶ್ರಾವ್ಯಾಳನ್ನ ರಕ್ಷಿಸಲು ಪುಣ್ಯಾ ಕೆರೆಗೆ ಇಳಿದಿದ್ದಾಳೆ. ಇವರಿಬ್ಬರನ್ನೂ ರಕ್ಷಿಸಲು ವೆಂಕಟೇಶ್ ನೀರಿಗೆ ಹಾರಿದ್ದಾರೆ. ಮೂವರಿಗೂ ಈಜು ಬಾರದೆ ಮೃತಪಟ್ಟಿದ್ದಾರೆ. ವೆಂಕಟೇಶ್ ಹಾಗೂ ಶ್ರಾವ್ಯ ಸ್ಥಳದಲ್ಲೇ ಮೃತಪಟ್ಟರೆ, ಪುಣ್ಯ ಹುಳಿಯಾರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.