ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿ
ಪಾಪಿ ಕಲಿಗಾಲ ಕೆಟ್ಟೊಯ್ತಯ್ಯ, ಮನೆ ಮನೆಗೆ ಕೊ* ಈಗ ಮಾಮೂಲಿಯಾಯ್ತಯ್ಯ. ಕಾರಣ ಪ್ರೇಯಸಿಗಾಗಿ ಗಂಡ ಹೆಂಡತಿಯನ್ನು ಅಥವಾ ಪ್ರೀಯಕರನಿಗಾಗಿ ಹೆಂಡತಿ ಗಂಡನನ್ನು ಕೊ* ಮಾಡೊದು ಇತ್ತೀಚೆಗೆ ಹೆಚ್ಚಾಗ್ತಿದೆ.
ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಚಟ್ಟಕ್ಕೇರಿಸಿದ ಘಟನೆ ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯಲ್ಲಿ ನಡೆದಿದೆ. ನೇಹಾ ಎಂಬಾಕೆ, ಪತಿ ನಾಗೇಶ್ವರ ರೌನಿಯಾರ್‌ನನ್ನು ತನ್ನ ಪ್ರಿಯಕರ ಜಿತೇಂದ್ರ ಜೊತೆ ಸೇರಿ ಮುಗಿಸಿಬಿಟ್ಟಿದ್ದಾಳೆ.
ಮನೆಯಲ್ಲಿ ಕೊಂದು ಶವವನ್ನು ಮನೆಯಿಂದ 25 ಕಿಲೋಮೀಟರ್ ದೂರದ ಸಿಂಧುರಿಯಾ ನಿಚ್ಲೌಲ್ ರಸ್ತೆಯಲ್ಲಿ ಎಸೆದು ಇದೊಂದು ಅಪಘಾತ ಎಂದು ಬಿಂಬಿಸಿದ್ದಾರೆ.
ಕಳೆದ ಶನಿವಾರ ಬೆಳಗ್ಗೆ ನಾಗೇಶ್ವರ ಮೃತದೇಹವನ್ನು ರಸ್ತೆಯಲ್ಲಿ ನೋಡಿದ್ದ ಸ್ಥಳೀಯರು ನಾಗೇಶ್ವರ್ ತಂದೆಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ನಾಗೇಶ್ವರ್ ತಂದೆ ಕೇಶವ್ ರಾಜ್ ಪೊಲೀಸರಿಗೆ ದೂರು ನೀಡಿದ್ದಾರೆ.
ಪತ್ನಿಯೇ ನಾಗೇಶ್ವರನನ್ನು ಮುಗಿಸಿದ್ದು ತನಿಖೆಯಲ್ಲಿ ಬಯಲಾಗಿದ್ದು, ನೇಹಾ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹಂತಕರು ಬಾಯಿಬಿಟ್ಟಿದ್ದಾರೆ.
ನಾಗೇಶ್ವರ್ ಆಗಾಗ ಕೆಲಸಕ್ಕಾಗಿ ನೇಪಾಳಕ್ಕೆ ಭೇಟಿ ನೀಡುತ್ತಿದ್ದ. ಈ ವೇಳೆ ನೇಹಾಳ ಪರಿಚಯವಾಗಿ 6 ವರ್ಷಗಳ ಹಿಂದೆ ವಿವಾಹವಾಗಿದ್ರು. ಅವರಿಗೆ ಆದ್ವಿಕ್ ಎಂಬ ಮಗನಿದ್ದಾನೆ. ಆದ್ರೆ ನೇಹಾಗೆ ತನ್ನ ಊರಿನ ಸಮೀಪದ ಜಿತೇಂದ್ರ ಜೊತೆ ಒಂದು ವರ್ಷದಿಂದ ಅನೈತಿಕ ಸಂಬಂಧ ಇರುವುದಾಗಿ ಬಾಯ್ಬಿಟ್ಟಿದ್ದಾಳೆ. ನಾಗೇಶ್ವರ್ ಇದಕ್ಕೆ ವಿರೋಧಿಸಿದಾಗ ನೇಹಾ ಮಗನೊಂದಿಗೆ ಮಹಾರಾಜ್‌ಗಂಜ್ ನಗರದ ಬಾಡಿಗೆ ಮನೆಯಲ್ಲಿ ಪ್ರಿಯಕರ ಜಿತೇಂದ್ರ ಜೊತೆ ವಾಸಿಸುತ್ತಿದ್ದಳು.
ನಾಗೇಶ್ವರ್ ಎಷ್ಟೇ ಮನವೊಲಿಸಲು ಪ್ರಯತ್ನಿಸಿದ್ರೂ ಕೇಳಿರಲಿಲ್ಲ. ನಾಗೇಶ್ವರ್, ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಪತ್ನಿಯನ್ನೇ ದಂಧೆಗಿಳಿಸಿದ್ದ. ಅಲ್ಲದೇ ಹಿಂಸೆ ನೀಡ್ತಿದ್ದ. ಇದರಿಂದ ರೋಸಿಹೋಗಿ ಮಗನನ್ನು ಕರೆದುಕೊಂಡು ಪ್ರಿಯಕರನ ಜೊತೆ ವಾಸವಾಗಿದ್ದೆ ಎಂದು ನೇಹಾ ಹೇಳಿದ್ದಾರೆ.
ಇಷ್ಟಾದ್ರೂ ಪತಿ ಆಗಾಗ್ಗೆ ಕರೆ ಮಾಡಿ ಪತ್ನಿಗೆ ಹಿಂಸೆ ನೀಡ್ತಿದ್ದ. ಇವನಿಂದ ಶಾಶ್ವತವಾಗಿ ಬಿಡುಗಡೆ ಪಡೆಯಲು ನಾಗೇಶ್ವರ್‌ಗೆ ಕರೆ ಮಾಡಿ ಕರೆಸಿ ಮದ್ಯಪಾನ ಮಾಡಿಸಿ ಕೊ* ಮಾಡಿದ್ದಾರೆ. ನೇಹಾ ತನ್ನ ದುಪಟ್ಟಾದಿಂದ ಕಾಲು ಕಟ್ಟಿ ಕತ್ತು ಹಿಸುಕಿದ್ರೆ, ಜಿತೇಂದ್ರ ಹೊಡೆದು ಬಡಿದು ಕೊಂದಿದ್ದಾರೆ. ಬಳಿಕ ನಾಗೇಶ್ವರನ ಬಟ್ಟೆಗಳನ್ನು ತೆಗೆದು ಸ್ನಾನ ಮಾಡಿಸಿ, ಶವವನ್ನು ಬೈಕ್‌ನಲ್ಲಿ ಕೂರಿಸಿ ಘಟನಾ ಸ್ಥಳದಿಂದ 25ಕಿ.ಮೀ ದೂರಕ್ಕೆ ಸಾಗಿಸಿದ್ದಾರೆ.
ಪಾಪಿ ಪತಿ ಹಣದಾಸೆಗೆ ಬಿದ್ದು ಮಾಡಬಾರದ ಕೆಲಸ ಮಾಡಿದ್ರೆ ಪತ್ನಿ ಅವನಿಂದ ಮುಕ್ತಿ ಪಡೆಯಲು ಮತ್ತೊಬ್ಬನ ಸಹವಾಸ ಮಾಡಿದ್ದಾಳೆ. ಬಳಿಕ ಪತಿಯ ಕಥೆಯನ್ನೆ ಮುಗಿಸಿ ಬಿಟ್ಟಿದ್ದಾಳೆ. ಗಂಡ ಹೆಂಡತಿ ಜಗಳದಲ್ಲಿ ಮಗು ಬಡವಾಗಿದೆ ಎಂಬಂತಾಗಿದೆ ಸದ್ಯ ಮಗುವಿನ ಸ್ಥಿತಿ.