ಸೌಜನ್ಯ ಮಾವರ ಅರ್ಜಿ ವಿಚಾರಣೆ ಗುರುವಾರಕ್ಕೆ ಫಿಕ್ಸ್
ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಧರ್ಮಸ್ಥಳದ ಸೌಜನ್ಯ ಕೇಸ್ ಮತ್ತೊಂದು ತಿರುವು ಪಡೆದುಕೊಂಡಿದ್ದು ಇದೀಗ ಸೌಜನ್ಯ ಮಾವ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ಇತ್ತೀಚ್ಚೇಗೆ ಸ್ಥಳೀಯ ನಿವಾಸಿಗಳಿಬ್ಬರು ಗುರುತಿಸಿರುವ ಸ್ಥಳದಲ್ಲಿ ಪರಿಶೀಲನೆ ಹಾಗೂ ಶವಗಳ ಉತ್ಖನನ ನಡೆಸಲು ಕಾಲಮಿತಿಯೊಳಗೆ ಕ್ರಮಕೈಗೊಳ್ಳುವಂತೆ ವಿಶೇಷ ತನಿಖಾ ತಂಡಕ್ಕೆ( ಎಸ್‌ಐಟಿ) ನಿರ್ದೇಶೀಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮದ ಪುರಂದರ ಗೌಡ ಹಾಗೂ ತುಕಾರಂ ಗೌಡ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಧರ್ಮಸ್ಥಳ ಸಾಮೂಹಿಕ ಅಂತ್ಯ ಸಂಸ್ಕಾರ ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ನೋಟಿಸ್ ಜಾರಿಗೊಳಿಸಿದ್ದಲ್ಲದೆ ಅರ್ಜಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಒದಗಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್ ಜಗದೀಶ್ ಅವರಿಗೆ ಸೂಚಿಸಿದ್ದು, ವಿಚಾರಣಿಯನ್ನು ಇದೇ ಗುರುವಾರಕ್ಕೆ ಮುಂದೂಡಿದೆ.
ಅರ್ಜಿಯಲ್ಲಿ ಏನಿದೆ:
ಸೌಜನ್ಯ ಅತ್ಯಾಚಾರ ಮತ್ತು ಕೊಲೆಪ್ರಕರಣದಲ್ಲಿ ಆಕೆಯ ಮಾವ ಇದೀಗ ಹೈಕೋಟ್ ಮೆಟ್ಟಿಲೇರಿದ್ದಾರೆ. ಧರ್ಮಸ್ಥಳದಲ್ಲಿ ‘ದಶಕಗಳಿಂದ ನಡೆಯುತ್ತಿರುವ ನಿಗೂಢ ಸಾವುಗಳು, ಅತ್ಯಾಚಾರಗಳು ಮತ್ತು ಕಣ್ಮರೆ ಸರಣಿ’ ಕುರಿತು ನ್ಯಾಯಾಂಗದ ತುರ್ತು ಮಧ್ಯಪ್ರವೇಶಿವಂತೆ ಕೊರಲಾಗಿದೆ.
ಈ ಅರ್ಜಿಯು ಎಸ್‌ಐಟಿ ತನಿಖೆಗೆ ವಿರೋಧ ವ್ಯಕ್ತಪಡಿಸಲು ಅಲ್ಲ, ಅದರ ಹೊರತಾಗಿ ತನಿಖೆ ಬಲಪಡಿಸವುದಾಗಿದೆ. ಹಾಗೂ ರಹಸ್ಯ ಸಮಾಧಿಗಳು ಇರುವುದು ಕೇವಲ ಆರೋಪವಲ್ಲ ಅದು ಸಾಬೀತಾಗಿದೆ ಕೂಡ ಹೀಗಾಗಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಅರ್ಜಿದಾರ ಸೌಜನ್ಯ ಮಾವ ಕೋರ್ಟ್ ಮೊರೆ ಹೋಗಿದ್ದಾರೆ.