Child bathroom bucket: ಮಗುವನ್ನು ಬಾತ್ರೂಮ್ ಬಕೆಟ್‌ ನಲ್ಲಿ ಹಾಕಿದ ಕ್ರೂರಿ ತಾಯಿ

ಮಕ್ಕಳಿಲ್ಲದವರು ಮಕ್ಕಳು ಬೇಕು ಅಂತಾರೆ, ಮಕ್ಕಳಿದ್ದವರು ಮಕ್ಕಳು ಬೇಡ ಅಂತಾರೆ ಎಂಬ ನಾಣ್ಣುಡಿ ಸುಳ್ಳಲ್ಲ. ಕಾರಣ ಅಂತದೊಂದು ಘಟನೆ ಇಲ್ಲಿ ನಡೆದಿದೆ. ನವಜಾತ ಹೆಣ್ಣು ಮಗುವನ್ನು ಬಾತ್ರೂಮ್ ಬಕೆಟ್‌ನಲ್ಲಿ ಹಾಕಿರುವ ಘಟನೆ ಹೊನ್ನಾಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು, ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸಿ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ತಿಳಿಸಿದ್ದಾರೆ.

ಮಗು ಆರೋಗ್ಯವಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ತಾಯಿ ಮಗು ಪಡೆಯಲು ನಿರಾಕರಿಸಿದ್ದು ಮಗುವನ್ನು ಅಲ್ಲೆ ಬಿಟ್ಟು ಹೋಗಿದ್ದಾರೆ. ಹೀಗಾಗಿ ಚಿಕಿತ್ಸೆ ಬಳಿಕ ಮಗುವನ್ನು ಸರ್ಕಾರಿ ವಿಶೇಷ ದತ್ತು ಕೇಂದ್ರಕ್ಕೆ ಸೇರಿಸಲಾಗುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಕವಿತಾ ಟಿ.ಎನ್. ತಿಳಿಸಿದರು.

Rakesh arundi

Leave a Reply

Your email address will not be published. Required fields are marked *