Bengaluru: ‘ಅಮಾವಾಸ್ಯೆ ಸೂರ್ಯ’ ಎಂದ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ತೇಜಸ್ವಿ
ತೇಜಸ್ವಿ ಸೂರ್ಯ ಅವರಿಗೆ ‘ಅಮಾವಾಸ್ಯೆ ಸೂರ್ಯ’ ಎಂದಿದ್ದ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಬಹುಶಃ ಅಮವಾಸ್ಯೆ ಮತ್ತು ಹುಣ್ಣಿಮೆಯ ವ್ಯತ್ಯಾಸ ಗೊತ್ತಿಲ್ಲ. ಅಮವಾಸ್ಯೆ ಇರುವ ದಿನ ಸಹ ಸೂರ್ಯ ಇರುತ್ತಾನೆ, 365 ದಿನಗಳೂ ಪ್ರಕಾಶಿಸುತ್ತಾನೆ. ಆದರೆ ಅಮವಾಸ್ಯೆ ದಿನ ಚಂದ್ರ ಇರೋಲ್ಲ. ಈ ಚಂದ್ರನ ನೋಡಿ ಪೂಜೆ ಮಾಡೋರು ಜೊತೆ ಇದ್ದು ಇದ್ದು ಸಿದ್ದರಾಮಯ್ಯ ಹೀಗೆ ಹೇಳಿರಬಹುದು. ಸೂರ್ಯನ ಪೂಜೆ ಮಾಡೋರಿಗೂ, ಚಂದ್ರನ ಪೂಜೆ ಮಾಡೋರಿಗೆ ಇರುವ ವ್ಯತ್ಯಾಸ ತಿಳಿದು ಮಾತಾಡಲಿ ಎಂದು ಟಾಂಗ್ ನೀಡಿದ್ದಾರೆ.
ನಾನು ಸಿದ್ದರಾಮಯ್ಯ ಬಗ್ಗೆ ವೈಯಕ್ತಿಕವಾಗಿ ಸಾಕಷ್ಟು ಟೀಕೆ ಮಾಡಬಹುದು. ಆದರೆ ಸಂಸದನಾಗಿ ನನಗೆ ಅದು ಶೋಭೆ ತರಲ್ಲ. ನನ್ನ ತಂದೆ ವಯಸ್ಸಿನ ನಿಮ್ಮ ಬಗ್ಗೆ ಮಾತಾಡುವ ಸಂಸ್ಕಾರ ನನ್ನದಲ್ಲ ಎಂದು ತಿವಿದಿದ್ದಾರೆ.