Kolar: ಕೋಲಾರದಲ್ಲಿ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ನಾಪತ್ತೆ
ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ಕಾರ್ಯಕ್ಕೆ ತೆರಳಿದ್ದ ಓರ್ವ ಶಿಕ್ಷಕಿಯು ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಕೋಲಾರ ತಾಲ್ಲೂಕು ನರಸಾಪುರ ಗ್ರಾಮದಲ್ಲಿ ನಡೆದಿದೆ.
ನಾಪತ್ತೆಯಾದ ಶಿಕ್ಷಕಿಯ ಹೆಸರು ಅಕ್ತರ್ ಬೇಗಂ (50 ವರ್ಷ). ಅವರು ಕೋಲಾರ ತಾಲೂಕಿನ ಕೆ.ಬಿ.ಹೊಸಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೋಲಾರ ನಗರದ ಅಂತರಗಂಗೆ ರಸ್ತೆಯಲ್ಲಿ ವಾಸವಾಗಿದ್ದರು.
ನಿನ್ನೆ ಬೆಳಿಗ್ಗೆ ಅಕ್ತರ್ ಬೇಗಂ ಅವರು ಸಮೀಕ್ಷೆ ಕಾರ್ಯಕ್ಕಾಗಿ ಮನೆಯಿಂದ ಹೊರಟಿದ್ದರು. ಕೋಲಾರ ತಾಲೂಕಿನ ನರಸಾಪುರ ಗ್ರಾಮದಲ್ಲಿ ಸಮೀಕ್ಷೆಯನ್ನು ನಡೆಸುತ್ತಿದ್ದರು. ತಮ್ಮ ಮೊಬೈಲ್ ಫೋನ್ ಅನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದರು. ತಮ್ಮ ಐಡಿ ಕಾರ್ಡ್ ಮಾತ್ರ ತೆಗೆದುಕೊಂಡಿದ್ದರು. ಬೆಳಿಗ್ಗೆಯಿಂದಲೂ ಅವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಗಾಬರಿಗೊಂಡ ಕುಟುಂಬಸ್ಥರು ಅವರನ್ನು ಹುಡುಕ್ಕಿದ್ದಾರೆ. ಆದರೆ ಯಾವುದೇ ಸುಳಿವು ಸಿಗದಿದ್ದಾಗ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.