B.Y. Raghavendra railway line: ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ; ಕಾಮಗಾರಿಗೆ ಬಿವೈ ರಾಘವೇಂದ್ರ ಮನವಿ
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ ನಿರ್ಮಾಣಕ್ಕೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ಸಂಸದ ಬಿ.ವೈ.ರಾಘವೇಂದ್ರ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ ನಿರ್ಮಾಣಕ್ಕೆ ಟೆಂಡರ್ ಕರೆದು ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಸೋಮವಾರ ನೈಋುತ್ಯ ರೈಲ್ವೆ ವಲಯದ ಜನರಲ್ ಮುಕಲ್ ಸರಣ್ ಮಾಥೂರ್ ಮತ್ತು ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವಿಧ ರೈಲ್ವೆ ಯೋಜನೆಗಳ ಅನುಷ್ಠಾನ ಮತ್ತು ಕಾಮಗಾರಿ ಬಗ್ಗೆ ಚರ್ಚಿಸಿದರು.
ಶಿವಮೊಗ್ಗ ಶೃಂಗೇರಿ ಮಂಗಳೂರಿಗೆ ನೂತನ ರೈಲ್ವೆ ಮಾರ್ಗ ಸಮೀಕ್ಷೆಗೆ ಸರ್ಕಾರ ಅನುಮೋದನೆ ನೀಡಿದ್ದು ತ್ವರಿತವಾಗಿ ಕೈಗೆತ್ತಿಕೊಂಡು ಮುಗಿಸಬೇಕು. ಶಿವಮೊಗ್ಗದಿಂದ ಶೃಂಗೇರಿ ಮಾರ್ಗವಾಗಿ ಚಿಕ್ಕಮಗಳೂರು ಮತ್ತು ಹಾಸನಕ್ಕೆ ನೂತನ ರೈಲ್ವೆ ಮಾರ್ಗ ನಿರ್ಮಿಸಲು ಸಮೀಕ್ಷೆಯನ್ನು ನಡೆಸಬೇಕು. ಸರ್ಕಾರ ಈಗಾಗಲೆ ಅನುಮೋದನೆ ನೀಡಿರುವ ಯೋಜನೆಗಳನ್ನು ಕೈಗೆತ್ತಿಕೊಂಡು ಶೀಘ್ರವಾಗಿ ಮುಗಿಸಬೇಕು ಎಂದು ಹೇಳಿದರು. ಸಭೆಯಲ್ಲಿರೈಲ್ವೆಯ ಇಲಾಖೆಯ ಮುಖ್ಯ ಪ್ರಧಾನ ಎಂಜಿನಿಯರ್ ಸಿ.ಎಂ ಗುಪ್ತಾ, ಮುಖ್ಯ ಕಾರ್ಯಾಚರಣೆ ಅಧಿಕಾರಿ ಪ್ರಶಾಂತ್, ವಿಭಾಗೀಯ ಜನರಲ್ ಮ್ಯಾನೇಜರ್ ಕುಲದೀಪ್, ಡಿ.ಆರ್.ಸಿ. ಸದಸ್ಯ ಪೀರ್ ಪಾಷಾ ಇದ್ದರು.
ಹೊಸದಾಗಿ ಆರಂಭವಾಗ ಬೇಕಾಗಿರುವ ರೈಲ್ವೆ ಮಾರ್ಗ ತಾಳಗುಪ್ಪ ಸಿದ್ದಾಪುರ ಶಿರಸಿ ಮಾರ್ಗವಾಗಿ ಹುಬ್ಬಳ್ಳಿಗೆ ಹಾಗೂ ಭದ್ರಾವತಿಯಿಂದ ಚಿಕ್ಕಜಾಜೂರಿಗೆ ತಾಳಗುಪ್ಪದಿಂದ ಹೊನ್ನಾವರ ಸಂಪರ್ಕಕ್ಕೆ ನೂತನ ರೈಲ್ವೆ ಮಾರ್ಗವನ್ನು ಸಮೀಕ್ಷೆ ಮಾಡುವಂತೆ ಒತ್ತಾಯ ಸಿದ್ದಾರೆ.
ಅಭಿವೃದ್ಧಿ ಯೋಜನೆಗಳು
- ಶಿವಮೊಗ್ಗ ಬೀರೂರು ಜೋಡಿ ಮಾರ್ಗ ನಿರ್ಮಾಣ
- ಕೋಟೆಗಂಗೂರು ನೂತನ ರೈಲ್ವೆ ಕೋಚಿಂಗ್ ಡಿಪೊಗೆ ಕುಡಿಯುವ ನೀರು, ರೈಲುಗಳ ಸ್ವಚ್ಛತೆ ಮತ್ತು ಇತರೆ ಕಾರ್ಯಗಳಿಗೆ ನೀರಿನ ವ್ಯವಸ್ಥೆ
- ಶಿವಮೊಗ್ಗ ರೈಲು ನಿಲ್ದಾಣದಲ್ಲಿರುವ ಗೂಡ್ಸ್ ಶೆಡ್ ಫ್ಲಾಟ್ ಫಾರಂ 4 ಮತ್ತು 5ನ್ನು ಕೋಟೆಗಂಗೂರಿಗೆ ಸ್ಥಳಾಂತರಿಸಿ, ಪ್ರಯಾಣಿಕ ರೈಲುಗಳ ನಿಲುಗಡೆಗೆ ಅವಕಾಶ ಕಲ್ಪಿಸುವುದು
- ಹಾರನಹಳ್ಳಿ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂ ಅಭಿವೃದ್ಧಿ
- ಭದ್ರಾವತಿ ಮತ್ತು ಆನಂದಪುರಂ ರೈಲು ನಿಲ್ದಾಣಗಳನ್ನು ಗತಿಶಕ್ತಿ ಅಮೃತ್ ಭಾರತ್-2ರಲ್ಲಿಕೈಗೆತ್ತಿಕೊಳ್ಳುವುದು
ಸೌಲಭ್ಯಗಳ ವಿಸ್ತರಣೆ
- ತಾಳಗುಪ್ಪ-ಬೆಂಗಳೂರು ಇಂಟರ್ ಸಿಟಿ(20651-52) ಒಂದು ಹೆಚ್ಚುವರಿ ಹವಾನಿಯಂತ್ರಿತ ಬೋಗಿ ಅಳವಡಿಸುವುದು
- ಶಿವಮೊಗ್ಗ-ಯಶವಂತಪುರ(16579-80) ರೈಲಿಗೆ ಒಂದು ಹೆಚ್ಚುವರಿ ಹವಾನಿಯಂತ್ರಿತ ಬೋಗಿ ಅಳವಡಿಸುವುದು
- ಶಿವಮೊಗ್ಗ-ಯಶವಂತಪುರ(ರಾತ್ರಿ ರೈಲು) ವಾರದ 3 ದಿನಗಳ ಬದಲಿಗೆ ಪ್ರತಿ ದಿನ ಸಂಚರಿಸುವುದು
- ತಾಳಗುಪ್ಪ-ಬೆಂಗಳೂರು ಇಂಟರ್ ಸಿಟಿ(20651-52) ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿನಿಲುಗಡೆ
- ಶಿವಮೊಗ್ಗದಿಂದ ಹಾಸನ ಮೈಸೂರಿಗೆ ನಿತ್ಯ ರಾತ್ರಿ 11.30ಕ್ಕೆ ಹೊಸ ರೈಲು ಮಂಜೂರು