“ಸಾಹಸಸಿಂಹ ಸ್ಮಾರಕ ವಿವಾದ: ಅಭಿಮಾನಿಗಳ ಕನಸು ಇನ್ನೂ ದೂರವೇ?”
ಸೆಪ್ಟೆಂಬರ್ 18 ಬಂತೂಂದ್ರೆ.. ಸಾಹಸಸಿಂಹ.. ಅಭಿಮಾನಿಗಳ ಪಾಲಿನ ದೇವ್ರು.. ಸಿಂಹದಂತ ಗಾಂಬೀರ್ಯತೆಯ ಜಯಸಿಂಹ
ಎಂದೇ ಖ್ಯಾತಿ ಪಡೆದಿದ್ದ ಕೋಟಿಗೊಬ್ಬನ ಉತ್ಸವ ಶುರುವಾಗ್ತಿತ್ತು.. ಸ್ಯಾಂಡಲ್ ವುಡ್ ಸಿಂಹನ ಅಭಿಮಾನಿಗಳಿಗೆ ಹರುಷದ
ಹಬ್ಬ. ಯಾಕಂದ್ರೆ, ಅಂದು ಡಾ.ವಿಷ್ಣುವರ್ಧನ್ ರವರ ಜನ್ಮದಿನೋತ್ಸವ. ‘ದಿ ಮ್ಯಾನ್ ಆಫ್ ಮಿಲಿಯನ್ ಹಾರ್ಟ್ಸ್’,
‘ಕೋಟಿಗೊಬ್ಬ’ ನಮ್ಮನ್ನೆಲ್ಲಾ ಅಗಲಿ ವರ್ಷಗಳೇ ಉರುಳಿದರೂ ಅಭಿಮಾನಿಗಳ ಹೃದಯದಲ್ಲಿ ಮಾತ್ರ ‘ಯಜಮಾನ’ನ
ಹುಟ್ಟುಹಬ್ಬದ ಸಂಭ್ರಮ ಜೋರಾಗಿರುತ್ತದೆ. ಆದ್ರೆ ಇನ್ನೇನು ಸೆಪ್ಟೆಂಬರ್ ಹತ್ತಿರ ಬರ್ತಾ ಇದೆ.. ಈ ಸಮೀಪದಲ್ಲೇ
ಇಂತದ್ದೊಂದು ನಿರ್ದಾರಕ್ಕೆ ಕೋರ್ಟ್ ಮುಂದಾಗಿದೆ..
ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ ಅಭಿಮಾನ್ ಸ್ಟುಡಿಯೋ ಬದಲು ಮೈಸೂರಿನಲ್ಲಿ ನಿರ್ಮಾಣವಾಗಿದೆ. ಆದರೆ
ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲಿ ಕೂಡ ಸ್ಮಾರಕ ನಿರ್ಮಾಣ ಆಗಬೇಕು ಎನ್ನುವುದು ಅಭಿಮಾನಿಗಳ
ಅಭಿಲಾಷೆ. “ಸ್ಮಾರಕ ನಿರ್ಮಿಸಲು 10 ಗುಂಟೆ ಜಾಗ ಮಂಜೂರು ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು” ಎಂದು
ಅಭಿಮಾನಿಗಳು ಹೈಕೋರ್ಟ್ನಲ್ಲಿ ಅರ್ಜಿ ಹಾಕಿದ್ದರು. ವಿ. ಎಸ್. ಎಸ್. ಅಭಿಮಾನ್ ಡಾ. ವಿಷ್ಣುವರ್ಧನ್ ಪುಣ್ಯಭೂಮಿ
ಟ್ರಸ್ಟ್ ವತಿಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಹೈಕೋರ್ಟ್ ಆ ಅರ್ಜಿಯನ್ನು ವಜಾ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಅರ್ಜಿಯ ವಿಚಾರಣೆ
ಕೈಗೆತ್ತಿಕೊಂಡಿತ್ತು. ಅರ್ಜಿದಾರರ ಪರ ವಾದ ಆಲಿಸಿ ಕೋರ್ಟ್ ತನ್ನ ನಿಲುವು ಸ್ಪಷ್ಟಪಡಿಸಿದೆ. ಜೊತೆಗೆ ಸಲಹೆಯನ್ನು ನೀಡಿದೆ.
ನಟ ಡಾ. ವಿಷ್ಣುವರ್ಧನ್ ಸ್ಮಾರಕ ಜಾಗದ ವಿವಾದ ಇಂದು ನಿನ್ನೆಯದಲ್ಲ. ಈ ರಗಳೆಯೇ ಬೇಡ ಎಂದು ವಿಷ್ಣ ಕುಟುಂಬ
ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಜಾಗ ಕೇಳಿತ್ತು. ಅದರಂತೆ ಮೈಸೂರಿನ ಎಚ್. ಡಿ. ಕೋಟೆ ರಸ್ತೆಯ ಹಾಲಾಳು ಸಮೀಪ
ಸರ್ಕಾರ ಜಾಗ ನೀಡಿತ್ತು. 11 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಿಸಿ ಕಳೆದ ವರ್ಷ ಉದ್ಘಾಟನೆ ಮಾಡಲಾಗಿತ್ತು. ಎರಡು
ಮುಕ್ಕಾಲು ಎಕರೆ ಜಾಗದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದೆ. ವಿಷ್ಣುದಾದಾಗೆ ಸಂಬಂಧಿಸಿದ ಫೋಟೊ ಗ್ಯಾಲರಿ,
ಆಡಿಟೋರಿಯಂ, ವಿಷ್ಣು ಪುತ್ಥಳಿ, ಕ್ಲಾಸ್ ರೂಮ್, ಕ್ಯಾಂಟೀನ್ ಏರಿಯಾ ಹೀಗೆ ಹತ್ತು ಹಲವು ವಿಶೇಷಗಳು ಈ ಸ್ಮಾರಕದಲ್ಲಿದೆ.
ಏನಿದು ವಿವಾದ ಅನ್ನೋದನ್ನು ಹೇಳಿಬಿಡ್ತೀನಿ..
‘’ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ನಡೆಯಿತು. ಅಭಿಮಾನ್ ಸ್ಟುಡಿಯೋದಲ್ಲಿ ಅಗ್ನಿ ಸಂಸ್ಕಾರ ನಡೆಯಿತು.
ಸುಸೂತ್ರವಾಗಿ ಎಲ್ಲವೂ ನಡೆಯಿತು. ಆದರೆ, ಮಾರನೇ ದಿನ ನಮಗೆ ಗೊತ್ತಾಯಿತು ಆ ಜಾಗದ ಕೇಸ್ ಕೋರ್ಟ್ನಲ್ಲಿ
ನಡೆಯುತ್ತಿದೆ ಅಂತ. 2004ರಿಂದಲೂ ಕೋರ್ಟ್ನಲ್ಲಿ ಕೇಸ್ ನಡೆಯುತ್ತಿದೆ. ಬಾಲಣ್ಣ ಅವರು 20 ಎಕರೆ ಜಾಗವನ್ನ
ಸ್ಟುಡಿಯೋಗಾಗಿ ತೆಗೆದುಕೊಂಡಿದ್ದರು. ಬಾಲಣ್ಣ ಅವರು ಹೋದ ನಂತರ, 10 ಎಕರೆಯನ್ನು ಮಾರಿ ಉಳಿದ 10 ಎಕರೆಯಲ್ಲಿ
ಸ್ಟುಡಿಯೋವನ್ನು ಅಭಿವೃದ್ಧಿ ಮಾಡ್ತೀವಿ ಅಂತ ಸರ್ಕಾರಕ್ಕೆ ಬಾಲಣ್ಣ ಅವರ ಮಕ್ಕಳು ಕೇಳಿಕೊಂಡಿದ್ದರು. ಸ್ಟುಡಿಯೋ
ಅಭಿವೃದ್ಧಿ ಆಗದೇ ಇದ್ದಲ್ಲಿ ಜಾಗ ಸರ್ಕಾರದ ವಶವಾಗುತ್ತದೆ ಎಂಬ ನಿಯಮವೂ ಇತ್ತು. ಆದರೆ, ಸ್ಟುಡಿಯೋ ಅಭಿವೃದ್ಧಿ
ಆಗಿಲ್ಲ. ಕಾರಣಾಂತರಗಳಿಂದ ಸರ್ಕಾರ ಕೂಡ ಜಾಗವನ್ನು ವಶಪಡಿಸಿಕೊಂಡಿಲ್ಲ’’
‘’10 ಎಕರೆಯಲ್ಲಿ 2 ಎಕರೆಯನ್ನು ಬೇರೆ ಮಾಡಿ, ಅದರಲ್ಲಿ ಸ್ಮಾರಕ ನಿರ್ಮಿಸುತ್ತೇವೆ ಅಂತ ನಾವು ಕೇಳಿಕೊಂಡ್ವಿ. ಅದಕ್ಕೆ
ಸರ್ಕಾರ 2 ಕೋಟಿ ಕೂಡ ಮಂಜೂರು ಮಾಡಿತ್ತು. ಮಾರಿರುವ 10 ಎಕರೆಯಲ್ಲಿ ತಮಗೂ ಪಾಲಿದೆ ಅಂತ ಬಾಲಣ್ಣನ ಮಗಳು
ಗೀತಾ ಬಾಲಿ ಕೇಸ್ ಹಾಕಿದ್ದರು. ಹೀಗಾಗಿ, 2 ಕೋಟಿಯನ್ನ ಅವರಿಗೇ ಕೊಡಿ ಅಂತ ಬಾಲಣ್ಣನ ಮಕ್ಕಳು ಹೇಳಿದ್ದರು. ಕೇಸ್
ಇತ್ಯರ್ಥ ಆಗಬೇಕಾದರೆ ಸಂಪೂರ್ಣ ಜಾಗದ ಬಗ್ಗೆ ಇತ್ಯರ್ಥ ಆಗಬೇಕು, 2 ಎಕರೆಯನ್ನು ಪ್ರತ್ಯೇಕ ಮಾಡಲು ಆಗಲ್ಲ ಅಂತ
ಆಯ್ತು. ಕೇಸ್ ವಾಪಸ್ ತೆಗೆದುಕೊಂಡರೆ, ರಾತ್ರೋ ರಾತ್ರಿ ಜಾಗವನ್ನು ಮಾರುತ್ತಾರೆ ಅಂತ ಗೀತಾ ಬಾಲಿ ಕೇಸ್ನ ವಾಪಸ್
ಪಡೆಯಲಿಲ್ಲ. ಅವರ ಮನವೊಲಿಸಲು ತುಂಬಾ ಪ್ರಯತ್ನ ಪಟ್ವಿ. ಆದರೆ, ಅದು ಆಗಲಿಲ್ಲ. ಸರ್ಕಾರ ಮತ್ತು ಅಂಬರೀಶ್
ಪ್ರಯತ್ನ ಪಟ್ಟರೂ, ಸಾಧ್ಯವಾಗಲಿಲ್ಲ’’
‘’ಸ್ಮಾರಕಕ್ಕಾಗಿ ಸರ್ಕಾರ ಡಾ.ವಿಷ್ಣುವರ್ಧನ್ ಪ್ರತಿಷ್ಠಾನ ಟ್ರಸ್ಟ್ ಅಂತ ಮಾಡ್ತು. ಅದಕ್ಕೆ ಅಧ್ಯಕ್ಷರು ಮುಖ್ಯಮಂತ್ರಿಗಳು.
ನಾವು ಟ್ರಸ್ಟಿಗಳು ಮಾತ್ರ. ಇದಕ್ಕೆ ಸರ್ಕಾರ 11 ಕೋಟಿ ರೂಪಾಯಿ ಮಂಜೂರು ಮಾಡಿತ್ತು’’
‘’ಕಾನೂನಿನ ವಿರುದ್ಧವಾಗಿ ಬಾಲಣ್ಣನ ಕುಟುಂಬ ನಡೆದುಕೊಂಡಿದ್ದರಿಂದ ಜಾಗವನ್ನು ವಶಪಡಿಸಿಕೊಳ್ಳುತ್ತೇವೆ ಅಂತ
ಪ್ರಿನ್ಸಿಪಲ್ ಸೆಕ್ರೆಟರಿ ಹೇಳಿದ್ದರು. ವಶಪಡಿಸಿಕೊಂಡ ಬಳಿಕ 2 ಎಕರೆ ಜಾಗವನ್ನು ನಿಮಗೆ ಕೊಡುತ್ತೇವೆ ಅಂತ ಹೇಳಿದ್ದರು.
ಆದರೆ, ರಾತ್ರೋ ರಾತ್ರಿ ಅವರ ವರ್ಗಾವಣೆ ಆಯ್ತು’’
‘’ಗೀತಾ ಬಾಲಿ ಮನಸ್ಸು ಬದಲಾಯಿಸಿಕೊಳ್ಳಲು ಮುಂದಾಗಿದ್ದರೂ, ಕೆಲವರು ಹೋಗಿ ಅವರ ಕಿವಿ ಊದಿದ್ದೂ ಉಂಟು.
ಸರ್ಕಾರದಲ್ಲೂ ಕೆಲವರು ಹೋಗಿ ಅಡಚಣೆ ಮಾಡಿದ್ದೂ ಉಂಟು. ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ಆಗಬೇಕು ಅಂತ
ಆರುವರೆ ವರ್ಷ ಪ್ರಯತ್ನ ಪಟ್ವಿ. ಆದರೆ, ಅದು ಸಾಧ್ಯವಾಗಲಿಲ್ಲ. ಬಾಲಣ್ಣನ ಕುಟುಂಬದವರ ಜೊತೆ ಎಷ್ಟು ಬಾರಿ
ಮಾತನಾಡಿದ್ದೇವೋ ಲೆಕ್ಕವಿಲ್ಲ. ವಿಧಾನಸೌಧ, ವಿಕಾಸಸೌಧ, ಎಂ.ಎಸ್.ಬಿಲ್ಡಿಂಗ್ಗೆ ಎಷ್ಟು ಬಾರಿ ಹೋಗಿದ್ದೇವೋ
ಲೆಕ್ಕವಿಲ್ಲ. ‘’ಇಲ್ಲಿ ಆಗೋದಿಲ್ಲ, ಬೇರೆ ಕಡೆ ಪ್ರಯತ್ನ ಪಡಿ’’ ಅಂತ ಮುಖ್ಯಮಂತ್ರಿಗಳೇ ಹೇಳಿದರೆ ನಾವೇನು ಮಾಡೋಕೆ
ಆಗುತ್ತೆ? ಅಭಿಮಾನ್ ಸ್ಟುಡಿಯೋಗೆ ನಾವು ಯಾಕೆ ಹೋಗಲ್ಲ ಅನ್ನೋದಕ್ಕೆ ಕಾರಣ ಇದೆ. ಹಾಗಂತ ನಾವು ನಿರ್ಲಕ್ಷ್ಯ
ಮಾಡುತ್ತಿಲ್ಲ. ಅದಕ್ಕೆ ಚಾವಣಿಯನ್ನ ಭಾರತಿ ಅಮ್ಮ ತಮ್ಮ ಸ್ವಂತ ದುಡ್ಡಿನಿಂದ ಹಾಕಿಸಿದ್ದಾರೆ. ಬೇರೆ ಬೇರೆ ಜಾಗಗಳನ್ನು
ತೋರಿಸಿದರು, ಪ್ರತಿಯೊಂದಕ್ಕೂ ಒಂದೊಂದು ತೊಂದರೆ ಆಯ್ತು. ಹೀಗಾಗಿ, ಮೈಸೂರಿನಲ್ಲಿ ಮಾಡಲು ಮುಂದಾದ್ವಿ.
ಮೈಸೂರಿನಲ್ಲೂ ಗೋಮಾಳದ ಜಾಗ ಅಂತ ರೈತರು ಪ್ರತಿಭಟನೆ ಮಾಡಿದರು. ಕೋರ್ಟ್ನಲ್ಲಿ ಅವರ ಕೇಸ್ ವಜಾ ಆಯ್ತು.
ಬಳಿಕ ಕಟ್ಟಡ ಕಟ್ಟಲು ಅನುಮತಿ ಸಿಕ್ಕಿತು. ಮೈಸೂರಿನಲ್ಲಿ ಈಗ ಸ್ಮಾರಕ ನಿರ್ಮಾಣ ಆಯ್ತು..
ಕಲಾವಿದರ ಸಂಘದಲ್ಲಿ ಡಾ.ವಿಷ್ಣುವರ್ಧನ್ ಹೆಸರು ಇಲ್ಲದಿರುವುದಕ್ಕೆ ಅನಿರುದ್ಧ್ ತಮ್ಮ ವಿಡಿಯೋದಲ್ಲಿ ಅಸಮಾಧಾನ
ವ್ಯಕ್ತಪಡಿಸಿದ್ದಾರೆ. ಇನ್ನೂ ಡಾ.ವಿಷ್ಣುವರ್ಧನ್ಗೆ ಪದ್ಮ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ ನೀಡದಿರುವುದಕ್ಕೂ ಅನಿರುದ್ಧ್ಗೆ
ಬೇಸರವಿದೆ. ಎಲ್ಲವನ್ನೂ ನಾವೇ ಕೇಳಿ ಪಡೆದುಕೊಳ್ಳಬೇಕಾ? ಇಂಥ ಪರಿಸ್ಥಿತಿ ಬೇಕಾ? ಡಾ.ವಿಷ್ಣುವರ್ಧನ್ ನಮ್ಮನ್ನ
ರಂಜಿಸಿಲ್ವಾ? ಸ್ಫೂರ್ತಿ ನೀಡಿಲ್ವಾ? ಅನ್ನೋದೆ ಅನೇಕರ ಪ್ರಶ್ನೆ..
ಋಣಾನುಬಂಧ ಮುಗಿಯಿತು!
”ಅಭಿಮಾನ್ ಸ್ಟುಡಿಯೋದಲ್ಲಿ ನಮ್ಮ ಋಣಾನುಬಂಧ ಮುಗಿಯಿತು. ಅಪ್ಪ ರವರು ಅಲ್ಲಿ ಇಲ್ಲ ಅಂತ ನಮಗೆ
ಗೊತ್ತಾಗಿದೆ. ಯಾಕಂದ್ರೆ ಅವಮಾನ ಮಾಡಿಸಿಕೊಂಡು ಅವರು ಯಾವತ್ತೂ ಒಂದು ಕ್ಷಣ ಇರ್ತಿಲಿಲ್ಲ” – ಅನಿರುದ್ಧ್
ಎಷ್ಟೇ ಪ್ರಯತ್ನ ಪಟ್ಟರೂ ಆಗ್ಲಿಲ್ಲ!
”ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣದ ಕುರಿತು ಕೋಟಿ ಪ್ರಯತ್ನ ಪಟ್ಟಿದ್ದೇವೆ. ನಮ್ಮ ಕಾಲುಗಳೇ
ಸವೆದುಹೋಗಿದೆ. ಮೂರು ವರ್ಷಗಳ ಹಿಂದೆಯೇ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡ್ಬೇಕು ಅಂತ ಯೋಚನೆ
ಮಾಡಿದ್ವಿ. ಆದ್ರೆ, ಅಭಿಮಾನಿಗಳೆಲ್ಲಾ ರೊಚ್ಚಿಗೆದ್ದರು. ಅದರಿಂದ ಮತ್ತೆ ಬೆಂಗಳೂರಿನಲ್ಲೇ ಪ್ರಯತ್ನ ಪಟ್ವಿ. ಆಗ
ಮೈಸೂರಿನಲ್ಲಿ ಸಿಕ್ಕ ಜಾಗ ಕಳೆದುಕೊಂಡ್ವಿ. ಬೆಂಗಳೂರಿನಲ್ಲೂ ಆಗ್ತಾನೇ ಇಲ್ಲ. ಹೀಗೆ ಮುಂದುವರೆದರೆ