Relationship:ಮದ್ವೆಯಾದ ಗಂಡಸರೆ, ಹೆಂಡತಿ ವಿಷ್ಯದಲ್ಲಿ ಎಂದಿಗೂ ಈ ಕೆಲಸ ಮಾಡಬೇಡಿ.!
ಜೀವನ ಎಂಬ ಸಾಗರದಲ್ಲಿ ಸಂಸಾರವೆಂಬ ದೋಣಿ ದಡ ಸೇರಬೇಕಾದ್ರೆ ಗಂಡ ಹೆಂಡತಿ ಅನೂನ್ಯತೆ ತುಂಬಾ ಮುಖ್ಯ. ಆದ್ರೆ, ಹೆಂಡತಿಯ ವಿಶ್ವಾಸ ನೀವು ಗೆಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಪರಸ್ತ್ರೀ ಸಂಗ, ಪರಸ್ತ್ರೀ ಮೋಹಕ್ಕೆ ಸಿಲುಕಿ ಪತ್ನಿಗೆ ಮೋಸ ಮಾಡಲು ಹೊಂಚು ಹಾಕಿದ್ದರೆ, ಈ ಜನ್ಮದಲ್ಲೇ ನೀವು ಮಾಡಿದ ತಪ್ಪಿಗೆ ಶಿಕ್ಷೆ ಯಾವ ರೂಪದಲ್ಲಾದರೂ ಅನುಭವಿಸುತ್ತೀರಿ. ಚಾಣಕ್ಯನ ನೀತಿಗಳಂತೆ, ನೀವು ಮದ್ವೆಯಾಗಿದ್ದರೆ ಹೆಂಡತಿಯ ವಿಷ್ಯದಲ್ಲಿ ಎಂದಿಗೂ ನೀವು ಮಾಡಬಾರದ ಕೆಲವು ಸಲಹೆಗಳಿವೆ. ಅವುಗಳನ್ನು ತಪ್ಪದೆ ಪಾಲಿಸಿ.
- ಹೆಂಡತಿಯ ಬಗ್ಗೆ ಅಗೌರವದ ಮಾತುಗಳನ್ನಾಡಬೇಡಿ.
- ಅವಳ ಭಾವನೆಗಳನ್ನು ನಿರ್ಲ್ಯಕ್ಷ ಮಾಡಬೇಡಿ.
- ಅವಳ ಅಭಿಪ್ರಾಯಗಳನ್ನು ಗೌರವಿಸಿ
- ದಾಂಪತ್ಯ ದ್ರೋಹ ಮಾಡಬಾರದು. ಹೆಂಡತಿ ನಿಷ್ಠೆ ಇರಲಿ.
- ಕೋಪ ಮತ್ತು ಆತುರದ ನಿರ್ಧಾರ ಬೇಡ.
- ಕುಟುಂಬದ ಜವಾಬ್ದಾರಿಗಳಿಂದ ಓಡಿ ಹೋಗಬಾರದು
- ಹೆಂಡತಿಯನ್ನು ಇತರರೊಂದಿಗೆ ಹೋಲಿಕೆ ಬೇಡ.
- ಉತ್ತಮ ಕೆಲಸಗಳಿಗೆ ಪ್ರಶಂಸೆ ಇರಲಿ