Puttur News:ಪುತ್ತೂರು ಲವ್ ಕೇಸ್.!ಈ ಮಗುವಿನ ತಂದೆ ಕೃಷ್ಣರಾವ್.!ದೃಢಿಕರಿಸಿದ ಡಿಎನ್ಎ ರಿಪೋರ್ಟ್
ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಪುತ್ತೂರು ಬಿಜೆಪಿ ಮುಖಂಡನ ಪುತ್ರ ಕೃಷ್ಣರಾವ್ ಪ್ರೇಮವಂಚನೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರೀತಿಸಿ ಯುವತಿಯ ಕೈಗೆ ಮಗು ಕೊಟ್ಟು ಪರಾರಿಯಾಗಲು ಸಂಚು ರೂಪಿಸಿದ್ದ ಕೃಷ್ಣರಾವ್ ಅಸಲಿ ಮುಖವಾಡ ಬಯಲಾಗಿದೆ. ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ.ರಾವ್ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಡಿಎನ್ಎ ರಿಪೋರ್ಟ್ ಬಂದಿದೆ. ಮಗು ಆತನದ್ದೇ ಎಂಬುದು ದೃಢವಾಗಿದೆ.
ಪುತ್ತೂರು ನ್ಯಾಯಾಧೀಶರ ಸಮ್ಮುಖದಲ್ಲಿ ಆರೋಪಿ ಕೃಷ್ಣ ಜೆ.ರಾವ್, ಸಂತ್ರಸ್ತೆ ಹಾಗೂ ಮಗುವಿನ ರಕ್ತ ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಬಂದಿರೋ ವರದಿಯಲ್ಲಿ ಕೃಷ್ಣ ಜೆ.ರಾವ್ನಿಂದಲೇ ಸಂತ್ರಸ್ತೆ ಗರ್ಭಿಣಿಯಾಗಿರುವುದು ಎಂಬ ವಿಚಾರ ತಿಳಿದುಬಂದಿದೆ.
ಈ ಬಗ್ಗೆ ಸಂತ್ರಸ್ತೆ ಯುವತಿ ಕುಟುಂಬ ಮಾಹಿತಿ ನೀಡಿದೆ. ಸದ್ಯ ಆರೋಪಿಯನ್ನು ಕೂಡಲೇ ಸಂತ್ರಸ್ತೆಯೊಂದಿಗೆ ಮದುವೆ ಮಾಡಿಸ್ಬೇಕು. ನಮಗೆ ಕಾನೂನು ಹೋರಾಟ ಬೇಡ, ಇಬ್ಬರು ಒಂದಾಗಿ ಬಾಳಬೇಕು ಎಂಬ ಬೇಡಿಕೆಯನ್ನು ಅನೇಕರು ಮುಂದಿಡ್ತಿದ್ದಾರೆ. ಹಿಂದೂ ಮುಖಂಡರು ಮುಂದೆ ಬಂದು ಮದುವೆ ನೆರವೇರಿಸಬೇಕೆಂದು ಆಗ್ರಹಿಸ್ತಿದ್ದಾರೆ.
ಸಂತ್ರಸ್ತ ಯುವತಿ ತಾಯಿ ಮಾತನಾಡಿ, ಆರೋಪಿ ಕೃಷ್ಣ ಜೆ ರಾವ್ ಕುಟುಂಬ ಡಿಎನ್ಎ ಟೆಸ್ಟ್ ಮಾಡಿಸುವಂತೆ ಒತ್ತಾಯಿಸಿತ್ತು. ಇದೀಗ ಆರೋಪಿ ಕೃಷ್ಣ ಜೆ ರಾವ್ನಿಂದಲೇ ಸಂತ್ರಸ್ತೆ ಗರ್ಭವತಿಯಾಗಿರುವುದು ಸಾಬೀತಾಗಿದೆ. ಹಿಂದೂ ಸಂಘಟನೆಯೇ ಮುಂದೆ ನಿಂತು ಇಬ್ಬರ ಮದುವೆ ಮಾಡಿಸಬೇಕು. ನಮಗೆ ಕಾನೂನು ಹೋರಾಟಕ್ಕೆ ಇಷ್ಟವಿಲ್ಲ. ಇಬ್ಬರು ಒಂದಾಗಿ ಬಾಳಬೇಕು ಎಂಬುದು ನಮ್ಮ ಇಚ್ಛೆ. ಹಿಂದುತ್ವದ ಭದ್ರಕೋಟೆ ಪುತ್ತೂರಿನಲ್ಲಿರುವ ಹಿಂದೂ ಮುಖಂಡರು ಮುಂದೆ ಬರಬೇಕು. ಎರಡೂ ಕುಟುಂಬಗಳನ್ನ ಒಂದು ಮಾಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಏನಿದು ಕೇಸ್.! ಕೃಷ್ಣ ಜೆ.ರಾವ್ ಕಳ್ಳಾಟ.!
ಆರೋಪಿ ಕೃಷ್ಣ ಜೆ ರಾವ್ ಹಾಗೂ ಸಂತ್ರಸ್ತೆ ಶಾಲಾ ದಿನಗಳಿಂದಲೂ ಪರಿಚಿತರು.ಶಾಲಾ ಕಾಲೇಜಿನ ಸ್ನೇಹ ಪ್ರೀತಿಗೆ ತಿರುಗಿದ್ದು, ನಂತರ ಕೃಷ್ಣ ಜೆ.ರಾವ್ ಆತನ ಮನೆಗೆ ಸಂತ್ರಸ್ಥೆಯನ್ನು ಕರೆದುಕೊಂಡು ಹೋಗಿ ದೈಹಿಕವಾಗಿ ಬಳಸಿಕೊಂಡಿದ್ದಾನೆ. ನಂತರ ಗರ್ಭವತಿಯಾಗಿರೋ ಸುದ್ದಿ ತಿಳಿತಿದ್ದ ಹಾಗೆ ಮಗುವನ್ನು ತೆಗೆಸಲು ಹಣ ನೀಡಿ ಹೆದರಿಸೋ ಕುತಂತ್ರ ಮಾಡಿದ್ದಾರೆ. ನಂತ್ರ ಕಾನೂನು ಮೊರೆ ಹೋದಾದ ಪ್ರಕರಣ ಬೆಳಕಿಗೆ ಬಂದು ಕೃಷ್ಣ ಜೆ ರಾವ್ನಾ ಬಂಧಿಸಲಾಗಿತ್ತು