Protest: ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್ಸು ಚಾಲಕರ ಪ್ರತಿಭಟನೆ: ಸಂಚಾರದಲ್ಲಿ ವ್ಯತ್ಯಯ

ಅಟೆಂಡೆನ್ಸ್ ಬೋನಸ್ ಹಾಗೂ ವೇತನ‌ಭತ್ಯೆಗೆ ಆಗ್ರಹಿಸಿ ಮೈಸೂರು ರಸ್ತೆಯ ದೀಪಾಂಜಲಿ ನಗರದ ಬಿಎಂಟಿಸಿ ಡಿಪೋದಲ್ಲಿ ಎಲೆಕ್ಟ್ರಿಕ್‌ ಬಸ್‌ ಚಾಲಕರು ದಿಢೀರ್‌ ಪ್ರತಿಭಟನೆ ಕೈಗೊಂಡಿದ್ದಾರೆ.

ಡಿಪೋ ನಂಬರ್ 16ರ 100 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ಸುಗಳ ಚಾಲಕರು ಪ್ರತಿಭಟನೆ ಕೈಗೊಂಡಿದ್ದಾರೆ. ಇದರಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕಳೆದ ಎರಡು ವರ್ಷಗಳಿಂದ ಅಟೆಂಡೆನ್ಸ್ ಬೋನಸ್, ವೇತನ ಭತ್ಯೆ ನೀಡುತ್ತಿಲ್ಲ. ಅಪಘಾತವಾದಾಗ ಸರಿಯಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಚಾಲಕರಿಗೆ ಭದ್ರತೆಯಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೆ ಎಲೆಕ್ಟ್ರಿಕ್ ಬಸ್ ತೆಗೆಯುವುದಿಲ್ಲ ಎಂದು ಚಾಲಕರು ಪಟ್ಟು ಹಿಡಿದಿದ್ದಾರೆ. ಎಲೆಕ್ಟ್ರಿಕ್‌ ಬಸ್ಸು ಚಾಲಕರು ನೇರವಾಗಿ ಬಿಎಂಟಿಸಿ ವ್ಯಾಪ್ತಿಗೆ ಬರುವುದಿಲ್ಲ. ಇವರು ಗುತ್ತಿಗೆ ನೌಕರರಾಗಿದ್ದು ಖಾಸಗಿ ಸಂಸ್ಥೆ ನೇಮಕ ಮಾಡುತ್ತದೆ. ಒಪ್ಪಂದಂತೆ ಸಂಬಳ, ಭತ್ಯೆಯನ್ನು ನೀಡಬೇಕಾಗುತ್ತದೆ ಎನ್ನಲಾಗಿದೆ.

Rakesh arundi

Leave a Reply

Your email address will not be published. Required fields are marked *