Darshan: ದರ್ಶನ್ ವಿರುದ್ಧವೇ ತಿರುಗಿ ಬಿದ್ದ ಖೈದಿಗಳು..! ಬೇರೆ ಜೈಲಿಗೆ ಮೊದಲು ಶಿಪ್ಟ್ ಮಾಡಿ.!
ಮಾಡಿದ್ದುಣ್ಣೋ ಮಾರಾಯ ಅನ್ನೋ ಗಾದೆ ಮಾತಿನಂತೆ ದರ್ಶನ್ ಮಾಡಿದ ತಪ್ಪಿಗೆ ಇಂದು ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಅವ್ರ ಪಾತ್ರ ಎಷ್ಟಿದೆ ಅನ್ನೋದು ಇನ್ನು ನ್ಯಾಯಲಯದಲ್ಲಿ ಸಾಭೀತಾಗುವ ವಿಷ್ಯವಾದ್ರು, ಜಾಮೀನಿನ ಮೇಲಿದ್ದ ದರ್ಶನ್ ಮತ್ತೆ ಜೈಲು ಪಾಲಾಗಿದ್ದು ಮಾತ್ರ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿದೆ.
ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 6 ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿದ್ದಾರೆ. ಈ ಮೊದಲು ಬೇಲ್ ಸಿಕ್ಕಿದ್ದ ದರ್ಶನ್, ಜಗದೀಶ್, ಅನುಕುಮಾರ್ ಮುಂತಾದ ಆರೋಪಿಗಳನ್ನು ಮತ್ತೆ ಬೇಲ್ ರದ್ದಾದ ಮೇಲೆ ಪರಪ್ಪನ ಅಗ್ರಹಾರಕ್ಕೆ ಶಿಪ್ಟ್ ಮಾಡಲಾಗಿದೆ. ಇದೀಗ ಈ ಆರೋಪಿಗಳ ನಡುವೆ ವೈಮನಸ್ಸು ಉಂಟಾಗಿದೆ. ತಮನ್ನು ದಯವಿಟ್ಟು ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ಇಬ್ಬರು ಆರೋಪಿಗಳು ಮನವಿ ಮಾಡಿದ್ದಾರೆ. ಹೌದು, ಅನುಕುಮಾರ್ ಮತ್ತು ಜಗದೀಶ್ ಈಗ ಬೇರೆ ಜೈಲಿಗೆ ಹೋಗಲು ಬಯಸಿದ್ದಾರಂತೆ.
ಅನುಕುಮಾರ್ ಹಾಗೂ ಜಗದೀಶ್ ಚಿತ್ರದುರ್ಗ ಮೂಲದವರಾಗಿದ್ದು, ದರ್ಶನ್ ಕಡೆಯವ್ರು ಸಹಾಯ ಮಾಡೋ ಭರವಸೆಯನ್ನು ಕೊಟ್ಟಿದ್ದರಂತೆ. ಆದ್ರೆ ಇವರ ವಕೀಲರ ಫೀಸ್ ಕೂಡ ನಮ್ಮ ಕುಟುಂಬವೇ ಭರಿಸ್ತಾ ಇದೆ. ಅನ್ಯಾಯವಾಗಿದೆ ನಮಗೆ ಎಂದು ನೋವು ತೋಡಿಕೊಂಡಿದ್ದಾರಂತೆ.
ಈ ಕಾರಣದಿಂದ ಚಿತ್ರದುರ್ಗ ಅಥವಾ ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಿ ಎಂದು ಅನುಕುಮಾರ್ ಮತ್ತು ಜಗದೀಶ್ ಜೈಲು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಆದರೆ ದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಬೇಕೆಂಬ ಆಸೆ ಇದೆ. ಹಾಗಾಗಿ ಅನುಕುಮಾರ್ ಮತ್ತು ಜಗದೀಶ್ ಅವರನ್ನು ಪ್ರದೋಶ್ ಸಮಾಧಾನಪಡಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹರುಷದ ಕೂಳಿಗೆ ಆಸೆ ಪಟ್ಟು ವರ್ಷದ ಕೂಳು ಕಳೆದುಕೊಂಡರು ಅನ್ನೋ ಮಾತು ಸುಳ್ಳಲ್ಲ. ದರ್ಶನ್ ನೋಡೋ ಆಸೆಗೆ ಮಾಡಬಾರದ ತಪ್ಪೊಂದನ್ನು ಮಾಡಿ ಜೈಲಿನಲ್ಲೇ ಕೊಳೆಯೋ ಪರಿಸ್ಥಿತಿ ನಿರ್ಮಾಣವಾಗಿದೆ.