Pradeep Eshwar: ಪ್ರತಾಪ್ ಸಿಂಹ ನನ್ನ ತಾಯಿಗೆ ಕ್ಷಮೆ ಕೇಳಬೇಕು: ಪ್ರದೀಪ್ ಈಶ್ವರ್

ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವ‌ರ್ ನಡುವಿನ ವಾಕ್ಸಮರ ಮುಂದುವರೆದಿದೆ. ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ನನ್ನ ತಾಯಿಯನ್ನು ಅವಮಾನಿಸಿದ್ದಾರೆ. ಅವರು ಕ್ಷಮೆ ಕೇಳಬೇಕು ಎಂದು ಪ್ರದೀಪ್ ಈಶ್ವರ್ ಒತ್ತಾಯಿಸಿದ್ದಾರೆ.

ಪ್ರತಾಪ್ ಸಿಂಹ ನನ್ನ ತಾಯಿಯನ್ನು ಅವಮಾನಿಸಿದ್ದಾರೆ. ನಮ್ಮ ತಾಯಿ‌ ಸ್ವರ್ಗದಲ್ಲಿದ್ದಾರೆ, ನೀನು ಅಲ್ಲಿಗೆ ಹೋಗಿ ಕ್ಷಮೆ ಕೇಳಬೇಡ. ಮೈಸೂರಿನ ಚಾಮುಂಡಿ ತಾಯಿ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಲಿ. ಇಲ್ಲ ಅಂದರೆ ತಾಯಿ ಚಾಮುಂಡಿಯನ್ನು ಮನದಲ್ಲಿ ನೆನೆದು ಕ್ಷಮೆ ಕೇಳು. ನೀನು ನನ್ನ ತಾಯಿ ಬಳಿ ಕ್ಷಮೆ ಕೇಳು, ಅವರು ಕ್ಷಮಿಸಿಸುತ್ತಾರೆ. ಆದರೆ ನಾನು ಕ್ಷಮಿಸಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗೆ ಪ್ರದೀಪ್ ಈಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರತಾಪ್ ಸಿಂಹ ಪ್ರದೀಪ್ ಈಶ್ವರ್ ಕತ್ತಲಲ್ಲಿ ಕಾಣಲ್ಲ, ಬೆಳಕಲ್ಲಿ ಹೊಳೆಯಲ್ಲ. ಮುಳ್ಳುಹಂದಿ ಮುಖದ ಕರ್ನಾಟಕದ ಏಕೈಕ ಕಾಮಿಡಿ ಪೀಸ್ ಪ್ರದೀಪ್ ಈಶ್ವರ್ ಎಂದು ಜರಿದಿದ್ದರು. ಅಲ್ಲದೇ ಕೆಲ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರದೀಪ್ ಈಶ್ವರ್, ಪ್ರತಾಪ್ ಸಿಂಹಗೆ ನಾನು ಮುಳ್ಳಂದಿ ಮುಖದವನಲ್ಲ. ನಿನ್ನ ಮುಖ ಮೊದಲು ನೋಡಿಕೋ ನೀನು ಮುಳ್ಳಂದಿ. ನಿನ್ನ ಹೇರ್ ಸ್ಟೈಲ್ ನೋಡು ಮುಳ್ಳಂದಿಯ ಮುಳ್ಳಿನಂತೆ ಇದೆ ಎಂದು ವ್ಯಂಗ್ಯವಾಡಿದ್ದರು. ಇದೇ ವಿಚಾರವಾಗಿ ಮತ್ತೆ ವಾಗ್ದಾಳಿ ಮುಂದುವರೆಸಿರುವ ಪ್ರದೀಪ್ ಈಶ್ವರ್, ಪ್ರತಾಪ್ ಸಿಂಹ ನನ್ನ ತಾಯಿಯನ್ನು ಅವಮಾನಿಸಿದ್ದಾರೆ ಮೊದಲು ಕ್ಷಮೆ ಕೇಳಲಿ ಆಗ್ರಹಿಸಿದ್ದಾರೆ.

Rakesh arundi

Leave a Reply

Your email address will not be published. Required fields are marked *