Mysuru: ನನ್ನನ್ನು ಕತ್ತಲಲ್ಲಿ ಯಾಕೆ ಹುಡುಕುತ್ತಾನೋ ಗೊತ್ತಿಲ್ಲ. ಪ್ರತಾಪ ನಾನು ಹಾಗಲ್ಲ: ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ನಡುವಿನ ವಾಕ್ ಸಮರ ಜೋರಾಗಿ ನಡೆದಿದೆ. ಇಬ್ಬರು ಪರಸ್ಪರ ಏಕವಚನದಲ್ಲೇ ಟೀಕೆ ಮಾಡಿಕೊಂಡಿದ್ದು, ಪ್ರತಾಪ್ ಸಿಂಹ ಮಾತಿಗೆ ಪ್ರದೀಪ್ ಈಶ್ವರ್ ತಿರುಗೇಟು ನೀಡಿದ್ದಾರೆ.
ಎಷ್ಟು ಜನ ಗೌಡರ ಮಕ್ಕಳಿಗೆ ನೀನು ನೆರವಾಗಿದ್ದೀಯಾ? ನನ್ನ ಕ್ಷೇತ್ರದಲ್ಲಿ ನಾನು 2,500 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದೇನೆ. ನಾನು ಕತ್ತಲಲ್ಲಿ ಕಾಣಲ್ವಂತೆ. ಅಯೋಗ್ಯ, ನನ್ನನ್ನು ಕತ್ತಲಲ್ಲಿ ಯಾಕೆ ಹುಡುಕುತ್ತಾನೋ ಗೊತ್ತಿಲ್ಲ. ಪ್ರತಾಪ ನಾನು ಹಾಗಲ್ಲ. ಆತನಿಗೆ 50-50 ಬಿಸ್ಕತ್ ಫೆವರೇಟ್ ಎಂದು ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದ್ದಾರೆ.