Meloni-Modi: ಇಟಲಿ ಪ್ರಧಾನಿ ಆತ್ಮಚರಿತ್ರೆಗೆ ಮೋದಿ ಮುನ್ನುಡಿ
ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆತ್ಮಚರಿತ್ರೆ “ಐ ಆಮ್ ಜಾರ್ಜಿಯಾ – ಮೈ ರೂಟ್ಸ್ ಮೈ ಪ್ರಿನ್ಸಿಪಲ್ಸ್” ನ ಭಾರತೀಯ ಆವೃತ್ತಿಗೆ ಮುನ್ನುಡಿ ಬರೆದಿದ್ದಾರೆ. ಈ ಪುಸ್ತಕ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. ಈ ಪುಸ್ತಕದ ಕುರಿತು ಮೋದಿ ಅವರು ಮನ್ ಕಿ ಬಾತ್‌ನ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಜಾರ್ಜಿಯಾ ಮೆಲೋನಿ ಅವರ ಆತ್ಮಚರಿತ್ರೆ ರೂಪಾ ಪಬ್ಲಿಕೇಷನ್ಸ್‌ನಿಂದ ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದು, ಮೋದಿಯವರ ಮುನ್ನುಡಿ ಬರೆದಿರುವುದು ವಿಶೇಷ. ಪುಸ್ತಕದ ಮುನ್ನುಡಿಯಲ್ಲಿ ಮೆಲೋನಿ ಅವರನ್ನು ಮೋದಿಯವರು ಅತ್ಯುತ್ತಮ ನಾಯಕಿ ಎಂದು ಬಣ್ಣಿಸಿದರು. ಪ್ರಧಾನಿ ಮೆಲೋನಿ ಅವರ ಜೀವನವು ರಾಜಕೀಯ ಅಥವಾ ಅಧಿಕಾರವನ್ನು ಮೀರಿದೆ. ಇವರ ಜೀವನವು ಅವರ ಧೈರ್ಯ, ದೃಢನಿಶ್ಚಯ ಮತ್ತು ಸಾರ್ವಜನಿಕ ಸೇವೆ ಮತ್ತು ಇಟಲಿಯ ಜನರಿಗೆ ಬದ್ಧತೆಯಾಗಿದೆ ಎಂದು ಬರೆದಿದ್ದಾರೆ.
ಪ್ರಧಾನಿ ಮೆಲೋನಿ, ಜಾಗತಿಕ ವೇದಿಕೆಯಲ್ಲಿ ಆತ್ಮವಿಶ್ವಾಸದಿಂದ ತಮ್ಮ ರಾಷ್ಟ್ರವನ್ನು ಮುನ್ನಡೆಸಿದ್ದಾರೆ. ಅದಕ್ಕಾಗಿಯೇ ಅವರ ಪ್ರಯಾಣವು ಭಾರತದಲ್ಲಿ ನಮ್ಮೊಂದಿಗೆ ತುಂಬಾ ಆಳವಾಗಿ ಪ್ರತಿಧ್ವನಿಸುತ್ತದೆ. ಈ ಆತ್ಮಚರಿತ್ರೆ, ಐ ಆಮ್ ಜಾರ್ಜಿಯಾ ಪುಸ್ತಕವೂ ಓದುಗರಿಗೆ ಯುರೋಪಿನ ಮತ್ತು ವಿಶ್ವದ ಅತ್ಯಂತ ಕ್ರಿಯಾತ್ಮಕ ಮತ್ತು ಚೈತನ್ಯಶೀಲ ನಾಯಕರಲ್ಲಿ ಒಬ್ಬರ ಹೃದಯ ಮತ್ತು ಮನಸ್ಸಿನ ಬಗ್ಗೆ ಒಂದು ಪ್ರಾಮಾಣಿಕ ಮತ್ತು ಅಪರೂಪದ ನೋಟವನ್ನು ನೀಡುತ್ತದೆ. ಇದು ಆಳವಾಗಿ ವೈಯಕ್ತಿಕವಾಗಿದೆ ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.