Navaratri nine-colors : ನವರಾತ್ರಿಯ: ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಿದರೆ ಶುಭ
ನವರಾತ್ರಿ ಹಬ್ಬದ ಸಂದರ್ಭದಲ್ಲಿ ದೇವಿಯ ನವ ಅವತಾರಗಳನ್ನು ಪೂಜಿಸಲಾಗುತ್ತದೆ. ಈ ಒಂಬತ್ತು ದಿನಗಳ ಕಾಲ, ಭಕ್ತರು ಉಪವಾಸ, ಪೂಜೆ, ಮತ್ತು ವಿಶೇಷ ವಿಧಿವಿಧಾನಗಳನ್ನು ಆಚರಿಸುತ್ತಾರೆ. ಜೊತೆಗೆ ಭಕ್ತರು ದೇವಿಗೆ ಪ್ರಿಯವಾದ ಬಣ್ಣದ ಉಡುಗೆಗಳನ್ನೂ ತೊಡುತ್ತಾರೆ. ಹೀಗಿರುವಾಗ ಯಾವ ದಿನ ಯಾವ ಬಣ್ಣದ ಉಡುಗೆ ಧರಿಸಿದರೆ ಶುಭ, ಈ ನವ ಬಣ್ಣದ ಮಹತ್ವದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ನವರಾತ್ರಿ ಮೊದಲ ದಿನ – ಬಿಳಿ ಬಣ್ಣ
ಮೊದಲ ದಿನ ಶೈಲಪುತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಬಿಳಿ ಬಣ್ಣವು ಶುದ್ಧತೆ, ಶಾಂತಿ ಮತ್ತು ಹೊಸ ಆರಂಭವನ್ನು ಸೂಚಿಸುತ್ತದೆ. ಈ ಬಣ್ಣದ ಬಟ್ಟೆ ಧರಿಸುವುದರಿಂದ ಆಂತರಿಕ ಶಾಂತಿ ಮತ್ತು ಭದ್ರತೆಯ ಭಾವನೆ ಉಂಟಾಗುತ್ತದೆ.
ನವರಾತ್ರಿ ಎರಡನೇ ದಿನ – ಕೆಂಪು ಬಣ್ಣ
ಎರಡನೇ ದಿನ ಬ್ರಹ್ಮಚಾರಿಣಿ ದೇವಿಗೆ ಸಮರ್ಪಿತವಾಗಿದೆ. ಕೆಂಪು ಬಣ್ಣವು ಪ್ರೀತಿ, ಶಕ್ತಿ, ಮತ್ತು ಉತ್ಸಾಹವನ್ನು ಸಂಕೇತಿಸುತ್ತದೆ. ಇದು ದೇವಿಯ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.
ನವರಾತ್ರಿ ಮೂರನೇ ದಿನ – ಕಡು ನೀಲಿ ಬಣ್ಣ
ಮೂರನೇ ದಿನ ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತದೆ. ಕಡು ನೀಲಿ ಬಣ್ಣವು ದೈವಿಕ ಶಕ್ತಿ ಮತ್ತು ಶಾಂತಿಯನ್ನು ಸೂಚಿಸುತ್ತದೆ. ಇದು ನಿಮ್ಮ ಜೀವನದಲ್ಲಿ ಸಮೃದ್ಧಿ ಮತ್ತು ಸ್ಥಿರತೆಯನ್ನು ತರುತ್ತದೆ.
ನವರಾತ್ರಿ ನಾಲ್ಕನೇ ದಿನ – ಹಳದಿ ಬಣ್ಣ
ನಾಲ್ಕನೇ ದಿನ ಕೂಷ್ಮಾಂಡಾ ದೇವಿಯ ಪೂಜೆ ನಡೆಯುತ್ತದೆ. ಹಳದಿ ಬಣ್ಣವು ಸಂತೋಷ, ಭರವಸೆ ಮತ್ತು ಸಕಾರಾತ್ಮಕತೆಯನ್ನು ಪ್ರತಿನಿಧಿಸುತ್ತದೆ. ಈ ಬಣ್ಣವು ಮನಸ್ಸಿಗೆ ಉತ್ಸಾಹ ನೀಡುತ್ತದೆ.
ನವರಾತ್ರಿ ಐದನೇ ದಿನ – ಹಸಿರು ಬಣ್ಣ
ಐದನೇ ದಿನ ಸ್ಕಂದಮಾತಾ ದೇವಿಗೆ ಮೀಸಲಾಗಿದೆ. ಹಸಿರು ಬಣ್ಣವು ಪ್ರಕೃತಿ, ಬೆಳವಣಿಗೆ, ಮತ್ತು ಶಾಂತಿಯ ಸಂಕೇತ. ಇದು ಜೀವನದಲ್ಲಿ ಹೊಸತನ ಮತ್ತು ಸಮತೋಲನವನ್ನು ತರುತ್ತದೆ.
ನವರಾತ್ರಿ ಆರನೇ ದಿನ – ಬೂದು ಬಣ್ಣ
ಆರನೇ ದಿನ ಕಾತ್ಯಾಯನಿ ದೇವಿಯನ್ನು ಪೂಜಿಸಲಾಗುತ್ತದೆ. ಬೂದು ಬಣ್ಣವು ಬುದ್ಧಿವಂತಿಕೆ ಮತ್ತು ಸಮತೋಲಿತ ಭಾವನೆಗಳನ್ನು ಪ್ರತಿನಿಧಿಸುತ್ತದೆ. ಇದು ನಿಮ್ಮನ್ನು ಸದಾ ನೆಲದ ಮೇಲೆ ಇರುವಂತೆ ಮಾಡುತ್ತದೆ.
ನವರಾತ್ರಿಯ ಸಪ್ತಮಿ ದಿನ – ಕೇಸರಿ ಬಣ್ಣ
ಏಳನೇ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ಕೇಸರಿ ಬಣ್ಣವು ಬೆಚ್ಚಗಿನ ಭಾವನೆ, ಉತ್ಸಾಹ, ಮತ್ತು ಸಕಾರಾತ್ಮಕತೆಯನ್ನು ಸೂಚಿಸುತ್ತದೆ. ಈ ಬಣ್ಣವು ನವಚೈತನ್ಯ ತುಂಬುತ್ತದೆ.
ನವರಾತ್ರಿಯ ಎಂಟನೇ ದಿನ – ನವಿಲು ಹಸಿರು ಬಣ್ಣ
ಎಂಟನೇ ದಿನ ಮಹಾಗೌರಿ ದೇವಿಯ ಆರಾಧನೆ ನಡೆಯುತ್ತದೆ. ನವಿಲು ಹಸಿರು ಬಣ್ಣವು ವಿಶಿಷ್ಟತೆ, ಸ್ವಂತಿಕೆ ಮತ್ತು ಕರುಣೆಯನ್ನು ಪ್ರತಿನಿಧಿಸುತ್ತದೆ.
ನವರಾತ್ರಿಯ ಒಂಬತ್ತನೇ ದಿನ – ಗುಲಾಬಿ ಬಣ್ಣ
ನವಮಿಯ ದಿನ ಸಿದ್ಧಿದಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಗುಲಾಬಿ ಬಣ್ಣವು ಸಾರ್ವತ್ರಿಕ ಪ್ರೀತಿ, ಆಕರ್ಷಣೆ ಮತ್ತು ಸಾಮರಸ್ಯವನ್ನು ಸೂಚಿಸುತ್ತದೆ.