Ohm Prakash Rao:ಮತ್ತೆ ಪಿಚ್ ಗೆ ಗ್ರಾಂಡ್ ಎಂಟ್ರಿ ಕೊಟ್ಟಿರುವ ಕನ್ನಡದ ಖ್ಯಾತ ನಿರ್ದೇಶಕ.
ಕನ್ನಡದಲ್ಲಿ ಹಲವಾರು ಹಿಟ್ ಸಿನಿಮಾಗಳನ್ನ ಕೊಟ್ಟು ಹೆಸರಾಗಿರುವ ಕನ್ನಡದ ಖ್ಯಾತ ನಟ ಹಾಗೂ ನಿರ್ದೇಶಕ ಓಂ ಪ್ರಕಾಶ್ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ವಿಭಿನ್ನ ನಟನೆ ಹಾಗೂ ನಿರ್ದೇಶನದಿಂದ ಎಲ್ಲರ ಗಮನ ಸೆಳೆದಿರುವ ಇವರು ತಮ್ಮ ಬತ್ತಳಕೆಯಿಂದ 47 ಸಿನಿಮಾಗಳ ಮೂಲಕ ಜನರನ್ನ ರಂಜಿಸಿದವರು. ಅವರ ಒಟ್ಟಾರೆ ಚಿತ್ರಗಳಲ್ಲಿ ಅವರು ನಿರ್ದೇಶಿಸಿದ ಲಾಕಪ್ ಡೆತ್,ಸಿಂಹದ ಮರಿ,ಏಕೆ 47,ಹುಚ್ಚ ಹಾಗೂ ಕಲಾಸಿಪಾಳ್ಯ ಸಿನಿಮಾಗಳು ಇಂದಿಗೂ ವೀಕ್ಷಕರ ಮನೆ ಮಾತಾಗಿವೆ ಎಂದರೆ ತಪ್ಪಾಗಲಾರದು.
ಆದರೆ ಇತ್ತೀಚೆಗೆ ಅವರು ತಮ್ಮ ನಟನೆ ಹಾಗೂ ನಿರ್ದೇಶನದಿಂದ ದೊರ ಉಳಿದಿರುವುದು ಅವರ ಅಭಿಮಾನಿಗಳಿಗೆ ಬೇಸರ ತರಿಸಿತ್ತು. 2018 ರಲ್ಲಿ ಅವರೇ ನಿರ್ದೇಶನ ಮಾಡಿ ನಟಿಸಿದ್ದ, ಹುಚ್ಚ-2 ಸಿನಿಮಾವೇ ಅವರ ಕೊನೆ ಚಿತ್ರವಾಗಿತ್ತು. ಅದಾದ ನಂತರ ಅವರು ಯಾವುದೇ ಚಿತ್ರಕ್ಕೊ ಒಪ್ಪಿರಲಿಲ್ಲ. ಇದಕ್ಕೆ ಕಾರಣ ಕೊಡ ಯಾರಿಗೂ ತಿಳಿದಿರಲಿಲ್ಲ. ಗಾಂಧಿನಗರದ ಗುಮಾನಿಗಳ ಪ್ರಕಾರ ಅವರ ಕೆಲವು ವೈಯಕ್ತಿಕ ಕಾರಣಗಳು ಹಾಗೂ ಆರಂಭದಲ್ಲಿ ಹಿಟ್ ಕೊಟ್ಟ ಚಿತ್ರಗಳು ಬಿಟ್ಟರೆ ಉಳಿದ ಚಿತ್ರಗಳು ಅಷ್ಟೇನು ಹಿಟ್ ಆಗದಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಅವರು ಮಾಡಿದ ಚಿತ್ರಗಳಲ್ಲಿ ಅತಿ ಹೆಚ್ಚು ಚಿತ್ರಗಳನ್ನು ಕನ್ನಡದ ಹಿರಿಯ ನಟ ಡಾ! ಶಿವರಾಜ್ ಕುಮಾರ್ ಹಾಗೂ ಕನ್ನಡದ ಡಿ ಬಾಸ್ ಎಂದೇ ಹೆಸರಾಗಿರುವ ದಾಸ ದರ್ಶನ್ ಜೊತೆಗೆ ನಿರ್ದೇಶಿಸಿದ್ದರು. ಆ ಚಿತ್ರಗಳಿಂದಲೇ ಒಳ್ಳೆ ಹೆಸರನ್ನೂ ಸಂಪಾದಿಸಿದ್ದರು. ಹಾಗಾಗಿ ಅಭಿಮಾನಿಗಳು ಮತ್ತೆ ಯಾವಾಗ ತಮ್ಮ ಚಿತ್ರಗಳನ್ನು ಇವರೊಂದಿಗೆ ನಿರ್ದೇಶಿಸುತ್ತೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲೆಂದೇ ಕಮ್ ಬ್ಯಾಕ್ ಆಗುತ್ತಿರುವ ನಿರ್ದೇಶಕ ಓಂ ಪ್ರಕಾಶ್ ಸಾಲು ಸಾಲು ಚಿತ್ರಗಳೊಂದಿಗೆ ಮತ್ತೆ ಪರದೆ ಮುಂದೆ ಅಬ್ಬರಿಸಲು ರೆಡಿಯಾಗಿದ್ದಾರೆ. ಇದರ ಸಾಲಲ್ಲಿ ಮೊದಲು ಇರುವ ಚಿತ್ರ ಫಿನಿಕ್ಸ್. ಫಿನಿಕ್ಸ್ ಚಿತ್ರದ ಮೂಲಕ ಮತ್ತೆ ಫಿನಿಕ್ಸ್ ಹಕ್ಕಿಯಂತೆ ಹಾರಲು ಸಜ್ಜಾಗಿದ್ದಾರೆ ಓಂ ಪ್ರಕಾಶ್. ಇದರ ಜೊತೆ ಜೊತೆಗೆ ಸಾಲು ಸಾಲು ಚಿತ್ರಗಳು ಅವರ ಕೈಯಲ್ಲಿವೆ. ಉಪೇಂದ್ರ ಕಾಂಬಿನೇಷನಲ್ಲಿ ತ್ರಿಶೂಲಂ ಹಾಗೂ ಗೆರಿಲ್ಲಾ ವಾರ್ ಎಂಬ ಚಿತ್ರಗಳು ಓಂ ಪ್ರಕಾಶ್ ರಾವ್ ಬ್ಯಾನರ್ ನಲ್ಲೇ ತೆರೆಗೆ ಬರಲು ಸಜ್ಜಾಗುತ್ತಿವೆ.
ಇದರ ನಡುವೆ ಟ್ರೋಲ್ ಪೇಜ್ ಗಳಲ್ಲೂ ಓಂ ಪ್ರಕಾಶ್ ಸದ್ದು ಮಾಡುತ್ತಿದ್ದಾರೆ. ಫಿನಿಕ್ಸ್ ಚಿತ್ರದ ಶೊಟಿಂಗ್ ವೇಳೆ ಮಹಿಳೆಯರ ಮೇಲೆ ಬಳಸುತ್ತಿದ್ದ ಅವಾಚ್ಯ ಶಬ್ಧಗಳನ್ನಿಟ್ಟುಕೂಂಡು ಟ್ರೋಲ್ ಗೆ ಒಳಗಾಗುತ್ತಿರುವ ಓಂ ಪ್ರಕಾಶ್, ಇದಕ್ಕೆ ಅವನಿಯಾನ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾನು ಸೆಟ್ ನಲ್ಲಿ ಇರುವುದೇ ಹಾಗೆ, ನನ್ನ ಹಾಗೆ ಹೆಣ್ಣು ಮಕ್ಕಳಿಗೆ ಗೌರವ ಕೂಡುವ ವ್ಯಕ್ತಿ ಇನ್ಯಾರು ಇಲ್ಲ. ನಮ್ಮ ಹಾಗೂ ಕಲಾವಿದರ ಒಡನಾಟ ಅಂತದ್ದು. ಅದನ್ನು ಅವರು ಕೂಲ್ ಆಗಿಯೇ ಸ್ವೀಕರಿಸುತ್ತಾರೆ ಎಂದಿದ್ದಾರೆ.
ಹಾಗೆ ಇನ್ನೊಂದು ಮಾಧ್ಯಮದಲ್ಲಿ ಕಲಾಸಿಪಾಳ್ಯ ಚಿತ್ರದ ಬಗ್ಗೆ ಮಾತನಾಡಿರುವ ಓಂ ಪ್ರಕಾಶ್ 7 ಚಿತ್ರಗಳನ್ನು ಕದ್ದು ಚಿತ್ರ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ. 2004 ರಲ್ಲಿ ರಿಲೀಸ್ ಆಗಿದ್ದ ಕಲಾಸಿಪಾಳ್ಯ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಈಗ ಈ ಸುದ್ದಿಯೂ ಟ್ರೆಂಡಿಂಗ್ ನಲ್ಲಿದೆ. ಹಾಗೆ ಹಿಂದಿನ ಓಂ ಪ್ರಕಾಶ್ ಗೆ ಕೊಡುತ್ತಿದ್ದ ಗೌರವವನ್ನ ಈಗಿನ ನಟರು ಹಾಗೂ ನಿರ್ಮಾಪಕರು ಕೊಡುತ್ತಿಲ್ಲ ಎಂಬ ಭಾವನೆಯನ್ನೂ ಬೇಸರದಿಂದ ಹೊರಹಾಕಿದ್ದಾರೆ.
ಒಟ್ಟಾರೆಯಾಗಿ ಮತ್ತೆ ಪಿಚ್ ಗೆ ಗ್ರಾಂಡ್ ಎಂಟ್ರಿ ಕೊಟ್ಟಿರುವ ಕನ್ನಡದ ಖ್ಯಾತ ನಿರ್ದೇಶಕ ಓಂ ಪ್ರಕಾಶ್, ನಿರ್ದೇಶನದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಹಾಗೆ ಮತ್ತೆ ತಮ್ಮ ಚಿತ್ರಗಳ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಲಿದ್ದಾರ ಎಂದು ಕಾದುನೋಡಬೇಕಾಗಿದೆ.