Nepal: ನೇಪಾಳ ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕುರ್ಕಿ ಪ್ರಮಾಣ ವಚನ
ಯುವಜನರ ಸೋಶಿಯಲ್ ಮೀಡಿಯಾ ಬ್ಯಾನ್ ಆಕ್ರೋಶಕ್ಕೆ ತುತ್ತಾಗಿ ನೇಪಾಳ ಸರ್ಕಾರ ಪತನವಾಗಿದೆ. ಇದೀಗ ಹೊಸ ಸರ್ಕಾರ ರಚನೆಗೆ ನೇಪಾಳ ಜನತೆ ಸಹಕರಿಸಿದ್ದು ಹೊಸ ನಾಯಕಿಯ ಆಯ್ಕೆ ಮಾಡಿದ್ದಾರೆ. ಜೆನ್- ಝಡ್ ಯುವ ಸಮೂಹದ ಒಗ್ಗಟ್ಟಿನಿಂದಾಗಿ ಅಸ್ಥಿರಗೊಂಡಿದ್ದ ನೇಪಾಳ ಇದೀಗ ಚೇತರಿಸಿಕೊಳ್ತಿದೆ. ರಾತ್ರೋರಾತ್ರಿ ಹೊಸ ನಾಯಕಿ ಪ್ರಮಾಣ ವಚನ ಕೂಡ ಸ್ವೀಕಾರ ಮಾಡ್ತಿದ್ದಾರೆ.
ಮಧ್ಯಂತರ ಸರ್ಕಾರದ ಉಸ್ತುವಾರಿ ವಹಿಸಿಕೊಳ್ಳಲು ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕುರ್ಕಿ ಅವರನ್ನು ಆಯ್ಕೆ ಮಾಡಿದ್ದಾರೆ. ದೇಶದ ಝೆನ್ ಝಡ್ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ಕೆ.ಪಿ ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ.ಸದ್ಯ ಸಂಸತ್ತನ್ನು ವಿಸರ್ಜನೆ ಮಾಡಿ ಸುಶೀಲಾ ಕುರ್ಕಿಗೆ ಮಣೆ ಹಾಕಲಾಗಿದೆ.
ಕೊನೆಗೂ ಪ್ರತಿಭಟನಾನಿರತ ಹೋರಾಟಗಾರರ ಬೇಡಿಕೆಗಳನ್ನು ಒಪ್ಪಿಕೊಂಡ ನಂತ್ರ 75 ವರ್ಷದ ಸುಶೀಲಾ ಕುರ್ಕಿ ಅವರನ್ನು ಸರ್ಕಾರದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ.ಸುಶೀಲಾ ಕುರ್ಕಿ ಅವರಿಗೂ ಭಾರತಕ್ಕೂ ಹಳೆಯ ನಂಟಿದೆ.ವಾರಾಣಾಸಿಯ ಬನಾರಸ್ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.