Neeraj Chopra: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ : ಪಾಕಿಸ್ತಾನ ಆಟಗಾರ ಅರ್ಷದ್ ನದೀಮ್ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿ ನೀರಜ್ ಚೋಪ್ರಾ..?
ಟೋಕಿಯೋದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನ ಅರ್ಹತಾ ಸುತ್ತಿನೊಂದಿಗೆ ನೀರಜ್ ಚೋಪ್ರಾ ತಮ್ಮ ಚಾಂಪಿಯನ್ ಷಿಪ್ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನ ಆರಂಭಿಸಿದ್ದಾರೆ. ಹಾಗಾಗಿ ಎಲ್ಲರ ಚಿತ್ತ ನೀರಜ್ ಚೋಪ್ರಾನತ್ತ ನೆಟ್ಟಿದೆ. ಆದರೆ 2024 ರ ಪ್ಯಾರಿಸ್ ನಲ್ಲಿ ನಡೆದ ಒಲಂಪಿಕ್ ಚಾಂಪಿಯನ್ ಅರ್ಷದ್ ನದೀಮ್ ಹಾಗೂ ಜರ್ಮನಿಯ ಡೈಮಂಡ್ ಲೀಗ್ ಚಾಂಪಿಯನ್ ಆಗಿರುವ ಜೊನಿಯರ್ ವೆಬರ್ ಇಬ್ಬರೂ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ.
ಬುಡಾಪೇಸ್ಟ್ ನಲ್ಲಿ ನಡೆದ 2023ರ ಆವೃತ್ತಿಯಲ್ಲಿ ಚಿನ್ನ ಗೆದ್ದಿರುವ ನೀರಜ್ ಚೋಪ್ರಾ ಒಂದು ವೇಳೆ ಪ್ರಶಸ್ತಿ ಉಳಿಸಿಕೊಂಡರೆ, ಈ ಸಾಧನೆ ಮಾಡಿದ ವಿಶ್ವದ 3ನೇ ಜಾವೆಲಿನ್ ತಾರೆ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ. 2024 ರ ಪ್ಯಾರಿಸ್ ಒಲಂಪಿಕ್ ನಂತರ ಮೊದಲ ಬಾರಿಗೆ ಅರ್ಷದ್ ನದೀಮ್ ಅವರನ್ನು ಎದುರಿಸುತ್ತಿರುವ ನೀರಜ್ ಚೋಪ್ರಾ, ಕಳೆದ ಬಾರಿ ನಡೆದ ಒಲಂಪಿಕ್ ಹಿನ್ನಡೆಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ.
2024 ರ ಪ್ಯಾರಿಸ್ ಒಲಂಪಿಕ್ ನಲ್ಲಿ 92.97 ಮೀ. ಜಾವೆಲಿನ್ ಎಸೆತದೊಂದಿಗೆ ಅರ್ಷದ್ ನದೀಮ್ ಚಿನ್ನ ಗೆದ್ದು ವಿಶ್ವ ಚಾಂಪಿಯನ್ ಆಗಿದ್ದರು. ಅದೇ 2024 ರ ಪ್ಯಾರಿಸ್ ಒಲಂಪಿಕ್ ನಲ್ಲಿ 89.45 ಮೀ. ಜಾವಲಿನ್ ಎಸೆದು ನೀರಜ್ ಚೋಪ್ರಾ ಬೆಳ್ಳಿಗೆ ತೃಪ್ತಿ ಪಟ್ಟಿದ್ದರು. ಈ ಬಾರಿ ತಮ್ಮ ಉತ್ತಮ ಆಟದ ಮೂಲಕ ಅರ್ಷದ್ ನದೀಮ್ ರನ್ನು ಹಿಂದಿಕ್ಕಿ, ನೀರಜ್ ಚೋಪ್ರಾ ಆ ಚಿನ್ನವನ್ನು ತಮ್ಮ ಮುಡಿಗೇರಿಸಿಕೊಳ್ಳುವರೇ ಕಾದುನೋಡಬೇಕು.
ಈ ಬಾರಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ನಲ್ಲಿ ಇಬ್ಬರು ಬಿನ್ನ ಗುಂಪಿನಲ್ಲಿರುವುದರಿಂದ, ಅರ್ಷದ್ ನದೀಮ್ ಹಾಗೂ ನೀರಜ್ ಚೋಪ್ರಾ ಇಬ್ಬರು ಅಂತಿಮ ಸುತ್ತಿನಲ್ಲಿ ಮುಖಾಮುಖಿಯಾಗುವ ನಿರೀಕ್ಷೆ ಇದೆ. ಜೊತೆಗೆ ಸಚಿನ್ ಯಾದವ್, ಯಶ್ವೀರ್ ಸಿಂಗ್ ಹಾಗೂ ರೋಹಿತ್ ಯಾದವ್ ಕೊಡ ಸ್ಪರ್ಧೆ ಮಾಡುತ್ತಿದ್ದು. ಪ್ರಶಸ್ತಿ ಯಾರ ಮುಡಿಗೇರಲಿದೆ ಎಂಬುದು ಕುತೊಹಲ ಮೊಡಿಸಿದೆ.