Dasara: ಮೈಸೂರು ದಸರಾ ಡ್ರೋನ್‌ ಶೋ: ಗಿನ್ನೆಸ್‌ ದಾಖಲೆ ಸೃಷ್ಟಿಸಿದ ಹುಲಿ ಕಲಾಕೃತಿ!

ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೆ.28, 29, ಅ.1 ಮತ್ತು 2ರಂದು ಡ್ರೋನ್ ಪ್ರದರ್ಶನ ನಡೆಯಲಿದ್ದು, ಇದಕ್ಕಾಗಿ ಈ ಬಾರಿ 3,000 ಡ್ರೋನ್ ಬಳಸಿಕೊಳ್ಳಲಾಗುತ್ತಿದೆ. ಆ ಮೂಲಕ ಗಿನ್ನಿಸ್ ರೆಕಾರ್ಡ್‌ ಗೆ ಸೇರಲು ಸಿದ್ಧತೆ ನಡೆದಿದೆ.

3 ಸಾವಿರ ಅತ್ಯಾಕರ್ಷಕ ಡ್ರೋನ್‌ ಪ್ರದರ್ಶನ, ಬಾನಂಗಳದಲ್ಲಿ ವಿವಿಧ ಕಲಾಕೃತಿಗಳ ಬಣ್ಣಬಣ್ಣದ ಚಿತ್ತಾರಗಳನ್ನು ಮೂಡಿಸುವ ಮೂಲಕ ನೆರೆದಿದ್ದವರ ಮನಸ್ಸಿನಲ್ಲಿಅಚ್ಚಳಿಯದ ನೆನಪುಗಳನ್ನು ನೀಡಿತು. 2983 ಡ್ರೋನ್‌ ಗಳನ್ನು ಬಳಸಿ ಸೃಷ್ಟಿಸಲಾದ ರಾಷ್ಟ್ರೀಯ ಪ್ರಾಣಿ ಹುಲಿಯ ಕಲಾಕೃತಿ ಚಿತ್ತಾರ ವಿಶ್ವದಾಖಲೆಯನ್ನೇ ಸೃಷ್ಟಿಸಿತು.

ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌) ವತಿಯಿಂದ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ರೋಮಾಂಚನಕಾರಿ ಡ್ರೋನ್‌ ಪ್ರದರ್ಶನದ ಕೇಂದ್ರಬಿಂದುವಾಗಿದ್ದ ಹುಲಿಯ ಚಿತ್ತಾರ ಗಿನ್ನೆಸ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲಾಗಿದೆ.

3000 ಡ್ರೋನ್‌ಗಳ ಚಿತ್ತಾರ

ಕಳೆದ ವರ್ಷ ನಡೆದ ಡ್ರೋನ್‌ ಪ್ರದರ್ಶನದಲ್ಲಿ1500 ಡ್ರೋನ್‌ಗಳ ಮೂಲಕ ಆಕರ್ಷಕ ಪ್ರದರ್ಶನವನ್ನು ನೀಡಲಾಗಿತ್ತು. ಆದರೆ, ಈ ಬಾರಿಯ ಪ್ರದರ್ಶನವನ್ನು ಮತ್ತಷ್ಟು ಆಕರ್ಷಣೀಯವಾಗಿಸಲು ಒಟ್ಟು 3000 ಡ್ರೋನ್‌ ಬಳಸಿಕೊಂಡು ನಡೆಸಲಾದ ಡ್ರೋನ್‌ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು. ಏಕಕಾಲದಲ್ಲಿ ಬಾನೆತ್ತರಕ್ಕೆ ಹಾರಿದ ಡ್ರೋನ್‌ ಗಳು ಬಣ್ಣಬಣ್ಣದ ದೀಪಗಳಿಂದ ಮಿನುಗುತ್ತಾ ಆಕರ್ಷಕ ಕಲಾಕೃತಿಗಳನ್ನು ಸೃಷ್ಟಿಸಿದವು.

Rakesh arundi

Leave a Reply

Your email address will not be published. Required fields are marked *