Mysuru: ಮಗಳ ಅಶ್ಲೀಲ ವಿಡಿಯೋ ವೈರಲ್: ಕಾಂಗ್ರೆಸ್ ಮುಖಂಡನ ವಿರುದ್ಧ ದೂರು ನೀಡಿದ ತಂದೆ ಎಫ್ಐಆರ್ ದಾಖಲು

ಮೈಸೂರಿನ ಕೆ.ಆರ್.ನಗರದ ಕಾಂಗ್ರೆಸ್ ಮುಖಂಡ ಲೋಹಿತ್ ಅಲಿಯಾಸ್​​ ರಾಜಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಯೊಂದು ವೈರಲ್​​ ಆಗಿರುವಂತಹ ಘಟನೆ ನಡೆದಿದೆ. ವೈಯಕ್ತಿಕ ಲಾಭಕ್ಕಾಗಿ ಮಗಳೊಂದಿಗಿನ ಅಶ್ಲೀಲ ವಿಡಿಯೋ ಹರಿಬಿಟ್ಟಿದ್ದಾಗಿ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಮಗಳಿಗೆ ಈಗಾಗಲೇ ಮದುವೆಯಾಗಿದೆ. ಪತಿ ಪತ್ನಿ ಅನ್ನೋನ್ಯವಾಗಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡ ದುರುದ್ದೇಶದಿಂದ ತನ್ನ ಮಗಳ ವಿಡಿಯೋವನ್ನು ಹರಿಬಿಟ್ಟಿದ್ದಾನೆ. ಗ್ರಾಮದ ಹಲವರಿಗೆ ವಾಟ್ಸಪ್ ಮೂಲಕ ಕಳುಹಿಸಿರುವುದಾಗಿ ದೂರು ನೀಡಿದ್ದಾರೆ. ಜಮೀನು ದಾರಿ ವಿಚಾರವಾಗಿ ನನಗೂ ಲೋಹಿತ್ ಗೂ ನಡೆದ ಜಗಳಕ್ಕೆ ಈಗ ದ್ವೇಷದ ಕಾರಣಕ್ಕೆ ಮಗಳ ವಿಡಿಯೋ ವೈರಲ್ ಮಾಡಿ ಕೊಲೆ ಬೆದರಿಕೆ ಹಾಕುತ್ತಿರುವುದಾಗಿ ದೂರಿದ್ದಾರೆ. ಸದ್ಯ ಎಫ್ ಐ ಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Rakesh arundi

Leave a Reply

Your email address will not be published. Required fields are marked *