Bidar: ಬೀದರ್‌ನಾ ಮನ್ನಾಖೇಳಿಯಲ್ಲಿ ಬರ್ಬರ ಕೊಲೆ.!
ಸಣ್ಣ ಪುಟ್ಟ ಕಾರಣಗಳಿಗೆ ಇಂದೆಲ್ಲಾ ಅನೇಕ ಕೊಲೆ ಪ್ರಕರಣಗಳು ನಡೆಯುತ್ತಿದೆ ಸಮಾಜವನ್ನು ಬೆಚ್ಚಿ ಬೀಳಿಸ್ತಿವೆ. ಇದೀಗ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲ್ಲೂಕಿನ ಮನ್ನಾಖೇಳಿ ಗ್ರಾಮದಲ್ಲಿ ಭೀಕರ ಕೊಲೆ ನಡೆದಿದ್ದು ಎಲ್ಲರನ್ನು ಬೆಚ್ಚಿ ಬೀಳಿಸಿದೆ.
ಕಲ್ಲಿನಿಂದ ತಲೆಗೆ ಜಜ್ಜಿ ಗಣಪತಿ ವಗ್ಗೇರಿ (32) ಎಂಬಾತನನ್ನು ಕೊಲೆ ಮಾಡಲಾಗಿದ್ದು ಇನ್ನು ಕಾರಣಗಳು ನಿಗೂಢವಾಗಿವೆ. ಮನ್ನಾಖೇಳಿ ಪಟ್ಟಣದ ಜೆಸ್ಕಾ ಕಚೇರಿ ಬಳಿ ಕೊಲೆ ನಡೆದಿದೆ. ಕೊಲೆಯಾದ ಯುವಕನ ಕಾರು ಚಾಲಕ ನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಕುಟುಂಬದ ಹಿನ್ನೆಲೆ: ಗಣಪತಿ ಇತ್ತೀಚೆಗೆ ಮದ್ವೆಯಾಗಿದ್ದು ಮೂರು ಮಕ್ಳಳಿದ್ದಾರೆ. ಸೌಮ್ಯ ಸ್ವಭಾವದ ಹುಡುಗ. ಆಸ್ತಿ ಏನೂ ಇಲ್ಲ. ನಾಲ್ಕು ಜನ ಅಣ್ಣತಮ್ಮಂದಿರು ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು.