Mukaleppa Gayatri love story: ಮುಕಳೆಪ್ಪನಿಗೆ 1 ಲಕ್ಷ ಫಾಲ್ಲೋವರ್ಸ್‌ ಅನ್‌ಫಾಲ್ಲೋ..! ತಿರುಗಿಬಿದ್ದ ಹಿಂದೂ ಫ್ಯಾನ್ಸ್‌.!

ಇತ್ತೀಚಿನ ಪ್ರೀತಿ, ಪ್ರೇಮಗಳೆಲ್ಲಾ ಕಮರ್ಷಿಯಲ್‌ ಆಗಿಬಿಟ್ಟಿವೆ. ಅದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಲ್ಲೆ. ಯಾಕೆ ಅಂದ್ರೆ, ಇತ್ತೀಚೆಗೆ ಹಣ, ಅಂತಸ್ತು, ಸಂಬಳ, ಮನೆ, ಹೊಲ ನೋಡಿಯೇ ಪ್ರೀತಿಯಲ್ಲಿ ಬೀಳುವ ಅನೇಕ ಹೆಣ್ಣು ಮಕ್ಕಳನ್ನು ನಾವು ಕಂಡೀದ್ದೀವಿ. ಇನ್ನು ಅನೇಕ ಪ್ರೀತಿಗಳು ಪ್ರಾಮಾಣಿಕವಾಗಿದ್ರು ಎಲ್ಲೋ ಒಂದ್ಕಡೆ ಜಾತಿ, ಧರ್ಮ, ಕುಲ, ಗೋತ್ರ ಅಂತಾ ಅರಳುವ ಮುನ್ನವೇ ಬಾಡಿ ಹೋಗಿಬಿಡ್ತವೆ.

ಅಸಲಿಗೆ ನಾನು ಹೇಳಲಿಕ್ಕೆ ಹೊರಟಿರೋ ಸ್ಟೋರಿ ಕ್ವಾಜಾ ಮುಕಳೆಪ್ಪ ಹಾಗೂ ಹಿಂದೂ ಹುಡುಗಿ ಗಾಯಿತ್ರಿ ಯಲ್ಲಪ್ಪ ಜಾಲಿಹಾಳ ಪ್ರೇಮ ಪುರಾಣ. ಕ್ವಾಜಾ ಮುಕಳೆಪ್ಪ ಅನ್ನೋ ಹುಡುಗ ಒಳ್ಳೆ ಹೆಸರು ಮಾಡಿದ್ದಾನೆ ಅಮ್ಮಿ.. ಅವನ ಫೋಟೋಗಳೆಲ್ಲಾ ನೋಡಿಲ್ವಾ ನೀನು.. ಒಳ್ಳೆ ದುಡ್ಡು ಮಾಡ್ಯಾನಾ..! ದೊಡ್ಡೋರ ಸಂಪರ್ಕ ಐತಿ ಅವಂಗೆ ತಲೆ ಕೆಡಿಸ್ಕೊಬ್ಯಾಡ ಅಂತಾ ಅಮ್ಮಿನಾ ಒಪ್ಪಿಸಿ ಪ್ರೇಮದ ಬಲೆಯಲ್ಲಿ ಬಿದ್ದಿದ್ದ ಹುಡುಗಿ ಗಾಯಿತ್ರಿ ಜಾಲಿಹಾಳ ಎಲ್ಲೋ ಒಂದ್ಕಡೆ ಹಿಂದೂ ಭಾವನೆಗಳಿಗೆ ಧಕ್ಕೆ ತಂದ್ರು ಅನ್ನೋ ಚರ್ಚೆಗಳು ವ್ಯಾಪಕವಾಗಿ ಕೇಳಿ ಬರ್ತಿವೆ.

ಮಾಧ್ಯಮಗಳ ಮುಂದೆ ಬಂದು ಮಗಳನ್ನು ಮದ್ವೆಯಾಗಿರೋ ಕ್ವಾಜಾ ಮುಕಳೆಪ್ಪನ ವಿರುದ್ಧವೇ ಗಂಭೀರ ಆರೋಪ ಮಾಡಿದ್ದ ತಾಯಿ ಒದ್ದು ಒಳಗೆ ಹಾಕಿಸ್ತೀನಿ ಅಂತಾ ನಂಗೆ ನನ್‌ ಯಜಮಾನ್ರಿಗೆ ಹೆದರಿಸ್ತಾನೆ. ಜೂನ್‌ 27 ನೇ ತಾರೀಖು ನನ್ನ ಮನೆಯಲ್ಲೇ ನನ್ನ ಮಗಳು ಇದ್ದಳು. ಹುಬ್ಬಳ್ಳಿ ಹೊಸ ಬಸ್‌ ಸ್ಟ್ಯಾಂಡ್‌ಗೆ ಬಾ ಅಂತೇಳಿ ನನ್‌ ಮಗಳ ಜೊತೆ ಪರಾರಿಯಾಗಿಬಿಟ್ಟಿದ್ದಾನೆ.

ನನ್‌ ಮಗಳು ವಾಪಾಸ್‌ ಬಂದ್ರೆ ಹೂವಿನ ತರಹ ನೋಡ್ಕೋತಿನಿ. ಮೋಸ ಮಾಡಿಬಿಟ್ಟ. ಒಳ್ಳೇ ಹುಡುಗ ಅಂತಾ ನಂಬಿ ಕಳಿಸಿದೆ. ನಾಲ್ಕೈದು ದಿನಗಟ್ಟಲೆ ಕರೆದುಕೊಂಡು ಹೋಗಿಬಿಡ್ತಿದ್ದ. ಎಲ್ಲೋಗ್ತಿದ್ರೋ ಗೊತ್ತಿಲ್ಲ. ವಾಪಾಸ್‌ ನನ್‌ ಮಗಳು ಬೇಕು ಅಂತಾ, ಏನು ಗೊತ್ತೇ ಇಲ್ಲದಂತೆ ಮಾತನಾಡಿದ್ದ ಗಾಯಿತ್ರಿ ತಾಯಿ ಕೊಟ್ಟ ಸ್ಕ್ರಿಪ್ಟ್‌ ನಾ ಓದಿದ್ರೋ, ಅಥವಾ ಮಗಳನ್ನು ಕಳೆದುಕೊಂಡ್ವಿ ಅನ್ನೋ ಹತಾಶೆಯಲ್ಲಿ ಈ ಹೇಳಿಕೆಯನ್ನು ಮಾಧ್ಯಮಗಳ ಮುಂದೆ ಹೇಳಿದ್ರೋ ಗೊತ್ತಿಲ್ಲ.

ಆದ್ರೆ, ಇದೆಲ್ಲದಕ್ಕೆ ಸಂಬಂಧ ಪಟ್ಟ ಹಾಗೆ ನನ್‌ ಪ್ರೀತಿಗೆ ಮುಳ್ಳಾಗಿರೋ ಕೆಲವ್ರು ನನ್‌ ಗಂಡ ಜೀವ ಬೆದರಿಕೆ ಹಾಕ್ಯಾನಾ..! ಕಿಡ್ಯಾಪ್‌ ಮಾಡ್ಯಾನಾ.! ಅನ್ನೋ ಎರಡು ಕೇಸ್‌ಗಳನ್ನು ಹುಬ್ಬಳ್ಳಿ ಸ್ಟೇಷನ್‌ನಲ್ಲಿ ದಾಖಲಿಸ್ಯಾರಾ. ಆದ್ರೆ, ನನ್‌ ಗಂಡ ಕ್ವಾಜಾ ಮುಕಳೆಪ್ಪ ಇಷ್ಟ ಪಟ್ಟೆ ನನ್ನ ಮದ್ವೆ ಆಗ್ಯಾನಾ. ಇದಕ್ಕೆ ನನ್ನ ಸಮ್ಮತಿ ಇದೆ. ಅಮ್ಮ ಕೂಡ ತುಂಬಾ ಸಪೋರ್ಟ್‌ ಮಾಡಿದ್ದಳು. ಮೊದಲೆಲ್ಲಾ ಈ ಸ್ಟೋರಿ ಅವಳಿಗೆ ಗೊತ್ತಿತ್ತು. ಆದ್ರೆ, ಇದೀಗ ಪರೋಕ್ಷವಾಗಿ ಭಜರಂಗದಳದವ್ರೇ ಹೆದರಿಸಿ ಬೆದರಿಸಿ ನಮ್‌ ಅವ್ವಾಗೆ ನನ್ನ ಹಾಗೂ ಅಳಿಯ ಕ್ವಾಜಾ ಮುಕಳೆಪ್ಪ ವಿರುದ್ಧ ತಿರುಗಿ ಬೀಳುವಂತೆ ಮಾಡಿದ್ದಾರೆ ಅಂತಾ ಒಂದು ಆಡಿಯೋ ರಿಲೀಸ್‌ ಮಾಡಿದ್ದಾರೆ.

ನನ್ನ ಅವ್ವ ಯಾರ್‌ ಮಾತು ಕೇಳಿ ಇಷ್ಟೆಲ್ಲಾ ಅವಾಂತರ ಮಾಡಕ್ಕತ್ತಾಳೊ ಗೊತ್ತಿಲ್ಲ. ಆದ್ರೆ ಎಲ್ಲಾ ದಾಖಲೆ ನನ್‌ ಹತ್ತಿರ ಇದೆ ಎಂದು ಒಂದು ಆಡಿಯೋ ರಿಲೀಸ್‌ ಮಾಡಿದ್ದು ಅದ್ರಲ್ಲಿ ಅಪ್ಪ, ಅವ್ವ ಇಬ್ಬರೂ ಮಾತನಾಡಿರೋ ಅಡಿಯೋ ಇದೀಗ ಭಜರಂಗದಳದವ್ರ ವಿರುದ್ಧವೇ ಬೊಟ್ಟು ಮಾಡಿ ತೋರಿಸುವಂತಿದೆ. ಅಸಲಿಗೆ ಆ ಆಡಿಯೋದಲ್ಲಿರೊ ಧನಿ ಗಾಯಿತ್ರಿ ಅಮ್ಮ, ಅಪ್ಪನದ್ದೇ ಅನ್ನೋದು ಖಾತ್ರಿಯಾಗ್ತಿದೆ. ಆದ್ರೆ ಧನಿ ಸ್ಪಷ್ಟವಾಗಿರದೇ ಇದ್ದರು ನಡೆದ ಸಂಭಾಷಣೆಯನ್ನು ವಿವರಿಸ್ತಾ ಹೋಗ್ತಿನಿ.

ಹೇ ಗಾಯಿತ್ರಿ. ನೀವಿಬ್ರೂ ಮದ್ವೆಯಾಗಿಲ್ಲ. ಹೆಂಗೆ ಮನೆಯಾಗೆ ಇಟ್ಕೊಂಡಾರೋ ಅಂತಾ ಹೇಳಲೋ. ಇಲ್ಲ ಮದ್ವೆಯಾಗ್ಯಾಳೆ ಅಂತಾ ಹರಾಜ್‌ ಮಾಡಲೋ ಅಂತಾ ಮಾತು ಶುರು ಮಾಡಿದ್ದಾರೆ. ಹರಾಜ್‌ ಅಂದ್ರೆ ಸುದ್ದಿ ಮಾಡ್ಲೋ ಅಂತಾ. ಸುಮ್ಮನೇ ಇರೋಕೆ ನನ್‌ ಬಿಡ್ತಾ ಇಲ್ಲ. ಏನ್‌ ಹೇಳ್ಲಿ ಅಂತಾ ತಾಯಿ ಮಗಳ ಮುಂದೆ ನೋವು ಹಂಚಿಕೊಂಡಿದ್ದಾರೆ. ಅದಕ್ಕೆ ಮಗಳು ಗಾಯಿತ್ರಿ ಸುಮ್ಮನಿದ್ದುಬಿಡಬೇ. ಅವ್ರಿಗೆ ನ್ಯೂಸ್‌ ಬೇಕು ಅದಕ್ಕೆ ಬಂದಾರ. ನೀನು ಹು.. ಹು.. ಅಂದ್ರೆ ಇನ್ನು ಮೈಮ್ಯಾಲೆ ಬರ್ತಾರೆ ಅವ್ರು. ಸುಮ್ಮನೆ ಬಾಗಿಲು ಹಾಕ್ಕೋ ಅಂದ್ರೆ. ಅವ್ರ ತಾಯಿ ಶಿವಮ್ಮ ನಿಂಗೇನು ಆಧಾರ ಕೊಟ್ಟರು. ಕೊರಳಾಗೆ ತಾಳಿ ಇಲ್ಲ. ಕಾಲಾಗ ಕಾಲುಸುತ್ತು ಇಲ್ಲ ಅಂತಾ ಪ್ರಶ್ನೆ ಮಾಡ್ತಿದ್ಧಾರೆ ಎಂದು ಸಿಟ್ಟು ಹೊರ ಹಾಕಿದ್ದಾರೆ.

ಅದಕ್ಕೆ ಮತ್ತೆ ರೀಪ್ಲೇ ಮಾಡಿರೋ ಗಾಯಿತ್ರಿ ಐತಲಬೇ ಕೊ‍ಳ್ಳಾಗೂ ಐತಿ. ಕಾಲಾಗೂ ಐತಿ. ಬಂಗಾರದ ತಾಳಿ ಐತಿ. ರೀಲ್ಸ್‌ನಾಗ ಹಾಕ್ಕೋಳಕತ್ತಿಲ್ಲ.. ಮಂದಿಗೆ ಎಲ್ಲಿ ತೋರಿಸೋದು ಅಂತಾ ಹೇಳಿ.. ನಿನಗೆ ಅಂತಾ ಏನಾದ್ರೂ ತೆಗೆದಿಟ್ಟಾರಾ..? ನಿಂಗೇನಾದ್ರೂ ಆಧಾರ ಇಟ್ಟಾರಾ ಅಂತಾ ಕೇಳಿದ್ದಕ್ಕೆ, ಮತ್ತೆ ರೀಪ್ಲೇ ಮಾಡಿರೋ ಗಾಯಿತ್ರಿ ನೆಕ್ಲೇಸ್‌ ಮೂರು ನಾಲ್ಕು ಮಾಡಿಸ್ಯಾರ. ಎಲ್ಲಾ ತೆಗೆದಿಟ್ಟಾರ. ಫೋಟೋ ಕಳಿಸ್ತೀನಿ ಎಲ್ಲಾ ಒಡವೇನಾ ಅಂತಾ ಒಪ್ಪಿಸಿದ್ದಾಳೆ. ಗಂಡನ ಮನಗೆ ಬಂದ್ರು ದುಡಿದು ದಾಕ್ತೀದ್ದೀನಿ. ಎಲ್ಲಾ ಪಗಾರ ಇದ್ರಾಗೆ ಬರ್ತಾ ಐತಿ. ನಿಮಗೆ ಕಳಿಸಿಕೊಡಿಸ್ತಿನಿ. ಗಂಡನ ಮನೆಗೆ ಬಂದ್ರು ದುಡಿಯಾಕ್ಕತ್ತಿಲ್ಲ. ನಿಂಗೆ ಗೊತ್ತಿಲ್ಲವಾ..? ಅಂತಾ ಮರು ಪ್ರಶ್ನೆ ಹಾಕಿದ್ದಾಳೆ ಮಗಳು.

ಅದೇನೆ ಇರಲಿ ಸದ್ಯ ಮಕಳೆಪ್ಪನ ವಿರುದ್ಧ ಕಿಡ್ನಾಪ್‌ ಕೇಸ್‌. ಜೀವ ಬೆದರಿಕೆ ಕೇಸ್‌ ಎರಡು ದಾಖಲಾಗಿವೆ. ಇದ್ರ ಸಂಬಂಧವಾಗಿ ತನಿಖೆ ಕೂಡ ನಡೀತಾ ಇದೆ. ಆದ್ರೆ, ಎಲ್ಲೋ ಒಂದ್ಕಡೆ ತಾಯಿಗೆ ಗೊತ್ತಿದ್ದರು ಇಷ್ಟೆಲ್ಲಾ ರಂಪಾಟ ಮಾಡೋ ಅಗತ್ಯವೇನಿತ್ತು ಅನ್ನೋ ಅನುಮಾನಗಳು ಕಾಡೋದು ಸಹಜ. ಇನ್ನು ನೀವೆಲ್ಲಾ ಇತ್ತೀಚಿನ ವೀಡಿಯೋಗಳಲ್ಲಿ ಗಮನಿಸಿದ ಹಾಗೆ ಕುಂಕುಮ ಇಡೋದು ಹಿಂದೂ ಹೆಣ್ಣು ಮಕ್ಕಳ ಹಣೆಗೆ ಭೂಷಣ. ಅಟ್‌ಲಿಸ್ಟ್‌ ಒಂದು ಸ್ಟಿಕ್ಕರ್‌ ಆದ್ರೂ ಇಡಬೇಕು ಅಂತಾ ಹಿರಿಯರು ನಂಬ್ತಾರೆ. ಆದ್ರೆ, ಇತ್ತೀಚಿನ ಹೆಣ್‌ ಮಕ್ಕಳೆಲ್ಲಾ ಎಲ್ಲಿ ಕುಂಕುಮ ಇಡ್ತಾರ್ರಿ ಅಂತಾ ಅನೇಕರು ವಾದಿಸ್ತಾರೆ. ಆದ್ರೆ, ಒತ್ತಾಯ ಪೂರ್ವಕವಾಗಿ ಎಲ್ಲೂ ಇಸ್ಲಾಂ ಸಮುದಾಯದ ಆಚರಣೆಗಳು ಗಾಯಿತ್ರಿ ಅವ್ರಿಗೆ ಹೇರಿಕೆಯಾಗಬಾರದು ಅನ್ನೋದೆ ವೀಕ್ಷಕರ ವಾದ.

ಅವ್ರ ಆತ್ಮೀಯತೆ ಅವನಿಯಾನ ಚಾನೆಲ್‌ಗೆ ಇರೋ ಕಾರಣ ನಿರಂತರವಾಗಿ ಅವ್ರನ್ನು ಸಂಪರ್ಕ ಮಾಡಿದ್ರು ಕೂಡ ಸದ್ಯ, ಊರು ಬಿಟ್ಟು ಹೋಗಿದ್ದಾರೆ. ಅವ್ರ ಫ್ಯಾಮಿಲಿಯವ್ರಿಗೂ ನೇರ ಸಂಪರ್ಕ ಇಲ್ಲ ಅನ್ನೋ ಮಾಹಿತಿಗಳು ಸಿಕ್ಕಿದೆ. ಎಲ್ಲಾ ತಣ್ಣಗಾದ ಮೇಲೆ ಅವ್ರೇ ಮತ್ತೆ ಊರಿಗೆ ವಾಪಾಸಾಗಬಹುದು. ಆದ್ರೆ, ಈ ಘಟನೆ ನಡೆದ ಮೇಲೆ ಒಂದು ಲಕ್ಷ ಫಾಲ್ಲೋವರ್ಸ್‌ ಕಡಿಮೆ ಆಗಿದ್ದಾರೆ ಅನ್ನೋ ಮಾತುಗಳು ಮಾತ್ರ, ಅನೇಕ ಹಿಂದೂ ಮುಸ್ಲಿಂ ಫಾಲ್ಲೋವರ್ಸ್‌ಗಳ ಭಾವನೆಗೆ ಧಕ್ಕೆ ತಂದಿರಬಹುದು ಅನ್ನೋ ಮಾತುಗಳಂತೂ ಸತ್ಯ.

Rakesh arundi

Leave a Reply

Your email address will not be published. Required fields are marked *