Mukaleppa Marriage Gayithri:  ಊರೇ ಬಿಟ್ಟ ಯುಟ್ಯೂಬರ್‌ ಮುಕಳೆಪ್ಪ.! ಲವ್‌ ಜಿಹಾದ್‌ ಆರೋಪ.! ಎಷ್ಟು ಸತ್ಯ.?

ಒಬ್ಬ ವ್ಯಕ್ತಿಗೆ ರಾತ್ರೋರಾತ್ರಿ ಹೆಸರು, ಕೀರ್ತಿ, ಜನಪ್ರಿಯತೆ ಎಲ್ಲವೂ ಸಿಗಬಹುದು. ಆದ್ರೆ, ಆತ ಆ ಹೆಸ್ರನ್ನು ಹೇಗೆ ಉಳಿಸಿಕೊಂಡು ಹೋಗ್ತಾನೆ ಅನ್ನೋದು ಮುಖ್ಯ ವಿಷಯ. ಮುಕಳೆಪ್ಪ ಅನ್ನೋ ಹೆಸ್ರುನ್ನು ನೀವೆಲ್ಲಾ ಕೇಳಿರಬಹುದು.ಕೇಳೊದು ಏನ್‌ ಬಂತು.! ಆತನ ಕಾಮಿಡಿ ವೀಡಿಯೋಗಳನ್ನು ನೋಡಿ ಖುಷಿ ಪಟ್ಟಿರಬಹುದು ಕೂಡ. ಆದ್ರೆ, ಇದೀಗ ಇದೇ ಮುಕಳೆಪ್ಪನ ವಿರುದ್ಧ ಲವ್‌ ಜಿಹಾದ್‌ ಆರೋಪ ಕೇಳಿ ಬರ್ತಿದೆ. ಆದ್ರೆ, ಅಸಲಿಗೆ ಇಲ್ಲಿ ಆತನ ವಿರುದ್ಧ ಕೇಳಿ ಬರ್ತಿರೋದೇ ಸೀರಿಯಸ್‌ ವಿಷ್ಯಕ್ಕೆ. ಹಿಂದೂ ಹೆಣ್ಣು ಮಗಳನ್ನು ಮೋಸದಿಂದ ಪ್ರೇಮದ ಬಲೆ ಬೀಸಿ ಮದ್ವೆಯಾಗಿ ವಂಚನೆ ಎಸಗಿದ್ದಾನೆ ಎಂದು ಆರೋಪಿಸಲಾಗ್ತಿದೆ. ಸ್ನೇಹಿತರೆ, ಮುಕಳೆಪ್ಪನನ್ನು ನಮ್ಮದೇ ಅವನಿಯಾನ ಚಾನೆಲ್‌ನಲ್ಲಿ ಹೋಮ್‌ ಟೂರ್‌ ಹೆಸ್ರಲ್ಲಿ ಕಂಪ್ಲೀಟ್‌ ಇಂಟರ್‌ವೀವ್‌ ಮಾಡಿದ್ದೇವೆ.. ಅಸಲಿಗೆ ಈ ಮುಕಳೆಪ್ಪನ ನಿಜ ಹೆಸ್ರು, ಕ್ವಾಜಾ ಶಿರಹಟ್ಟಿ. ಹಾಗಾದ್ರೆ ಆತನ ಮನೆಯಲ್ಲಿರೋ ವಾತಾವರಣವೇನು.? ಮನೆಯಲ್ಲಿ ಹಿಂದೂ ಧರ್ಮದ ಪುಸ್ತಕಗಳನ್ನು ಓದ್ತಾನಾ.? ಆತನಿಗಿರೋ ಹಿಂದೂ ಸಂಪ್ರದಾಯದ ನಂಬಿಕೆಗಳೇನು.? ನಿಜಕ್ಕೂ ಆತ ಧರ್ಮ ವಿರೋಧಿಯೇ.? ಈ ಎಲ್ಲಾ ವಿಷಯಗಳೊಂದಿಗೆ ಕ್ವಾಜಾ ಅಸಲಿಗೆ ಧರ್ಮ ವಿರೋಧಿ ಕೆಲಸ ಮಾಡಿದ್ದಾನಾ ಅನ್ನೋದನ್ನು ನೋಡ್ಥಾ ಹೋಗೋಣ.

                  ಕನ್ನಡದ ಫೇಮಸ್‌ ಯ್ಯೂಟ್ಯೂಬರ್‌ ಕ್ವಾಜಾ ಬಂದೇನ್‌ವಾಜಾ ಮಹಮದ್‌ ಹನೀಫ್‌ ಶಿರಹಟ್ಟಿ ಅಲಿಯಾಸ್‌ ಮುಕಳೆಪ್ಪ ವಿರುದ್ಧ ಬಜರಂಗದಳದ ಕಾರ್ಯಕರ್ತರು ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ಕೊಟ್ಟಿದ್ರು. ಲವ್‌ ಜಿಹಾದ್‌ ಆರೋಪ ಮಾಡಿದ್ದ ಕಾರ್ಯಕರ್ತರು, ಮುಕಳೆಪ್ಪ ಫೇಕ್‌ ಡಾಕ್ಯುಮೆಂಟ್‌ ನೀಡಿ ಹಿಂದೂ ಯುವತಿಯನ್ನು ಮದ್ವೆಯಾಗಿದ್ದಾರೆ ಅಂತಾ ಆರೋಪ ಮಾಡಿದ್ದರು.ಇಷ್ಟೇ ಅಲ್ಲದೇ ಈತ ಮುಸ್ಲೀಂ ನಮ್ಮ ಹಿಂದೂ ಧರ್ಮವನ್ನು ಅವಮಾನಿಸುವ ವೀಡಿಯೋ ಮಾಡ್ಥಾನೆ ಅಂತಾ ಅರೋಪ ಮಾಡಿದ್ದಲ್ಲದೇ, ಹಿಂದೂ ಯುವತಿಯರಿಗೆ ಬಲೆ ಬೀಸಿ ವಂಚನೆ ಮಾಡ್ತಿದ್ದಾನೆ ಎಂದು ಬಜರಂಗದಳದವ್ರ ಆರೋಪ.. ಸ್ನೇಹಿತರೆ,, ನೇಮು.. ಫೇಮು..  ಕರೋನಾ ಟೈಮ್‌ನಲ್ಲಿ ತನ್ನದೇ ಪ್ರತಿಭೆಯಿಂದ ಮುಕಳೆಪ್ಪನಿಗೆ ಅತಿ ವೇಗವಾಗೇನೋ ಬಂತು.

ಮುಕಳೆಪ್ಪ ಮದ್ವೆಯಾದ ಹುಡುಗಿ ಯಾರು ಗೊತ್ತಾ.?

ಆದ್ರೆ, ಮುಸ್ಲೀಂ ಹುಡುಗನಾಗಿರೋ ಕಾರಣ ಆತ ಎಷ್ಟು ಸೂಕ್ಷ್ಮವಾಗಿ, ಜವಾಬ್ದಾರಿಯಿಂದ ಸಾಮಾಜಿಕ ಕಳಕಳಿ ಇಟ್ಟುಕೊಂಡು ವೀಡಿಯೋ ಮಾಡಬೇಕಾಗಿತ್ತು ಅನ್ನೋದು ಇಲ್ಲಿ ಮುನ್ನೆಚ್ಚರಿಕೆ ವಹಿಸಬೇಕಾಗಿತ್ತೋ ಏನೋ. ಮುಕಳೆಪ್ಪನ ವೀಡಿಯೋಗಳಲ್ಲಿ ಉದ್ದೇಶಪೂರಿತವಾಗಿ ಹಿಂದೂ ಧರ್ಮಕ್ಕೆ ಅಪಮಾನ ಮಾಡುವ ಉದ್ದೇಶವಿಲ್ಲದಿದ್ದರೂ,ಸಮಾಜ ಪರಿಗಣಿಸುವ ಗಂಭೀರತೆ ಬಗ್ಗೆ ಎಚ್ಚರಿಕೆ ಇಂದ ಇರಬೇಕಾಗುತ್ತೆ. ಅದಕ್ಕೆ ಕಾರಣ ಕೂಡ ಇದೆ. ಮುಸ್ಲೀಂ ಸಮುದಾಯದಲ್ಲಿ ಯಾವುದೇ ಹೆಣ್ಣು ಮಕ್ಕಳನ್ನು ಹೆಚ್ಚಾಗಿ ರೀಲ್ಸ್‌,ಕಾಮಿಡಿ, ನಾಟಕ, ಅಭಿನಯ ಅಂತಾ ಅವಕಾಶ ಕೊಡೋದು ಕಡಿಮೆಯೇ.. ಆದ್ರೆ, ಮುಕಳೆಪ್ಪನ ವೀಡಿಯೋದಲ್ಲಿ ಇರೋ ಕಲಾವಿದ್ರೆಲ್ಲಾ ಹೆಚ್ಚಾಗಿ ಹಿಂದೂ ಹೆಣ್ಣು ಮಕ್ಕಳು. ಇನ್ನು ಮುಕಳೆಪ್ಪ ಪ್ರೀತಿಗೆ ಜಾರಿ ಬಿದ್ದಿದ್ದು ಕೂಡ ಗಾಯಿತ್ರಿ ಅನ್ನೋ ಹಿಂದೂ ಹುಡುಗಿಯ ಜತೆಗೆ.ಆದ್ರೆ, ಸಮಸ್ಯೆ ಅದಲ್ಲ. ವಯಸ್ಸು, ಪ್ರೀತಿ,ಮೋಹ ಯಾರ ಮಾತು ಕೇಳುತ್ತೆ. ಧರ್ಮದ ಹೆಸರಲ್ಲಿ ಅವ್ರಿಬ್ಬರ ನಿಷ್ಕಲ್ಮಶ ಪ್ರೀತಿಗೆ ಯಾಕೆ ಅಡ್ಡಿ ಬರ್ತಾ ಇದ್ದೀರಿ ಅಂತಾ ಕೆಲವ್ರು ಆಕ್ರೋಶ ವ್ಯಕ್ತಪಡಿಸಿದ್ರೆ, ಇನ್ನು ಕೆಲವರು, ಮುಕಳೆಪ್ಪ ಮದ್ವೆಯ ನಂತ್ರ ಆಕೆಗೆ ಹಣೆಗೆ ಕುಂಕುಮ ಹಚ್ಚೋದನ್ನು ನಿಲ್ಲಿಸಿದ್ದಾರೆ. ಮುಸ್ಲೀಂ ಸಂಸ್ಕೃತಿಯನ್ನು ಒತ್ತಾಯ ಪೂರ್ವಕವಾಗಿ ಹೇರಿದ್ದಾನೆ ಅಂತೆಲ್ಲಾ ಆರೋಪ ಮಾಡ್ತಿದ್ದಾರೆ.

                 ಇದೇ ವರ್ಷ ಜೂನ್‌ 05 ಕ್ಕೆ ಮುಕಳೆಪ್ಪ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಸಬ್‌ ರಿಜಿಸ್ಟರ್‌ ಆಫೀಸ್‌ನಲ್ಲಿ ಹಿಂದೂ ಹುಡುಗಿ ಗಾಯತ್ರಿ ಯಲ್ಲಪ್ಪ ಜಾಲಿಹಾಳ ಅನ್ನೋ ಹುಡಗಿಯನ್ನು ಮದ್ವೆಯಾಗಿದ್ದ. ಆದ್ರೆ ವಿಳಾಸದಲ್ಲಿ ನಕಲಿ ದಾಖಲೆ ನೀಡಿದ್ದಾನೆ ಅನ್ನೋ ಆರೋಪ ಮಾಡಲಾಗಿದೆ.ಈ ಎಲ್ಲಾ ಆರೋಪಗಳ ನಂತ್ರ ಮುಕಳೆಪ್ಪ ಹಾಗೂ ಅವ್ರ ಪತ್ನಿ ಗಾಯಿತ್ರಿ ಅವ್ರನ್ನು ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆಗೆ ಕರೆಸಿ ವಿಚಾರಣೆ ಮಾಡಲಾಯ್ತು. ಗಾಯಿತ್ರಿ ನಂಗೇನೂ ಸಮಸ್ಯೆ ಇಲ್ಲ ಎಂದಿದ್ದಾರೆ.ಭಜರಂಗದಳದ ಕಾರ್ಯಕರ್ತರು ಮನವೊಲಿಸೋ ಕೆಲಸ ಮಾಡಿದ್ರೂ ಯಶಸ್ವಿ ಆಗಿಲ್ಲ. ಲವ್‌ ಜಿಹಾದ್‌ , ಕೋಮು ಗಲಭೆ, ಗಣೇಶನ ಬಗ್ಗೆ ಧಾರ್ಮಿಕ ಭಾವನೆಗೆ ಧಕ್ಕೆ ತರೋ ವೀಡಿಯೋ ಮಾಡೋ ಇವನ ಚಾನೆಲ್‌ ಬ್ಯಾನ್‌ ಮಾಡಬೇಕು ಎಂದು ಆರೋಪ ಮಾಡಲಾಗಿತ್ತು. ಆದ್ರೆ, ಸಧ್ಯ ಪೊಲೀಸರು ಎಫ್‌ಐಆರ್‌ ಮಾಡದೇ ವಾಪಾಸ್‌ ಕಳಿಸಿದ್ದಾರೆ.ಸುಳ್ಳು ದಾಖಲೆ ಕೊಟ್ಟಿರೋ ಬಗ್ಗೆ ನಮಗೇನೂ ಅನ್ನಿಸ್ತಿಲ್ಲ.. ಆತನ ಮೇಲೆ ಕಣ್ಣಿಟ್ಟಿದ್ದೇವೆ ಎಂದು ಎಸ್‌ಪಿ ರಿಯಾಕ್ಟ್‌ ಮಾಡಿದ್ದಾರೆ.

ಮುಕಳೆಪ್ಪನ ಅತ್ತೆಯ ಕಣ್ಣೀರು..! ಆಕ್ರೋಶ.!

           ಇತ್ತ ಗಾಯಿತ್ರಿ ತಾಯಿ ಶಿವಕ್ಕ ನನ್ನ ಮಗಳು ಹೆಸರು ಮಾಡ್ತಾಳೆ ಅಂತಾ ಕಳಿಸಿಕೊಟ್ಟೆವು. ಆದ್ರೆ ಆತ ಪುಸಲಾಯಿಸಿ ಇಂತ ಕೆಲಸ ಮಾಡಿದ್ದಾನೆ ಅಂತಾ ನೋವು ಹೊರ ಹಾಕಿದ್ದಾರೆ. ಶೂಟಿಂಗ್‌ ಅಂತಾ ಮೂರು ನಾಲ್ಕು ದಿನ ಕರೆದುಕೊಂಡು ಹೋಗ್ತಿದ್ದ ಮೋಸ ಮಾಡಿ ಬಿಟ್ಟ ಅಂತಾ ಕಣ್ಣೀರಿಟ್ಟಿದ್ದಾರೆ.ಮುಕಳೆಪ್ಪ ಮನೆಗೆ ಹೋಗಿದ್ದ ನಾವು ಅಚ್ಚರಿಯಾಗಿದ್ದಂತೂ ಸತ್ಯ. ಯಾಕೆ ಅಂದ್ರೆ ಆತನ ಮನೆಯಲ್ಲಿ ಭಗವದ್ಗೀತೆಯೂ ಇತ್ತು.ಕುರಾನ್‌ ಇತ್ತು. ಬೈಬಲ್‌ ಇತ್ತು.ನಾವು ಕೇಳಿದ್ದಕ್ಕೆ ಭಗವದ್ಗೀತೆಯನ್ನು ಓದ್ರೀನಿ ಅಂತಾ ಹೇಳಿದ್ದರು.ಮನುಷ್ಯ ಜೀವನ ಏನಿದೆ ಹೇಳಿ.? ನಾವೆಲ್ಲಾ ಒಂದೇ ಎಂದು ಹಿಂದೂ ಧರ್ಮದ ಬಗ್ಗೆ ಪ್ರೀತಿಯ ಮಾತುಗಳನ್ನಾಡಿದ್ದರು. ಅಲ್ಲಿ ಸಲ್ಮಾನ್‌ ಖಾನ್‌ ಫೋಟೋ ಕಾಣಲಿಲ್ಲ. ಅಲ್ಲಿ ಇದ್ದಿದ್ದು ಅಪ್ಪು, ದರ್ಶನ್‌ ಅಂತಾ ಹಿಂದೂ ನಟರ ಫೋಟೋಗಳೇ. ಆತನಲ್ಲಿ ಏನೋ ಒಂದು ಇನ್ನೋಸೆನ್ಸ್‌ ಇತ್ತು. ಆದ್ರೆ, ಆ ಮದ್ವೆಯಾದ ಹೆಣ್ಣು ಮಗಳಿಗೆ ಹಿಂದೂ ಸಂಸ್ಕೃತಿಯ ಆಚಾರ ವಿಚಾರಗಳಲ್ಲಿ ಎಲ್ಲೂ ಕಂಡಿಷನ್‌ ಹಾಕದೇ ಪೂಜೆಗೂ ಅವಕಾಶ ಕೊಟ್ಟರೆ ಯಾರ್‌ ಬೇಡ ಅಂತಾರೆ. ಆದ್ರೆ ಒತ್ತಾಯದಿಂದ ಅವಳ ಹಕ್ಕುಗಳನ್ನು ಕಿತ್ತುಕೊಂಡ್ರೆ ಪಾಪದ ಕೆಲಸ ಅದನ್ನು ನಾನು ಒಪ್ಪುತ್ತೇನೆ.

             ಸದ್ಯ ಮುಕಳೆಪ್ಪ ಊರೇ ಬಿಟ್ಟಿದ್ದಾನೆ. ದೂರದಲ್ಲಿ ಸ್ವಲ್ಪ ದಿನ ನೆಮ್ಮದಿ ಇಂದ ಇರಲು ಹೋಗಿದ್ದಾನೆ. ಎಲ್ಲೋ ಒಂದು ಕಡೆ ಧರ್ಮದ ಹೆಸರಲ್ಲಿ ಆತನ ಜನಪ್ರಿಯತೆ ಕುಸಿಯಲು ಹೆಣೆದ ತಂತ್ರ ಇದಾಗಬಾರದು ಅನ್ನೋದು ನನ್ನ ವಾದ. ಜಾತಿ ಹೀನನ ಮನೆಯ ಜ್ಯೋತಿತಾ ಹೀನವೇ ಅನ್ನೋ ಮಾತಿನಂತೆ, ಅವನಿಗೂ ನಮ್ಮ ಸಮಾಜದಲ್ಲಿ ಒಂದು ಖುಷಿಯ ಬದುಕಿದೆ. ಆತ ಎಲ್ಲರನ್ನು ಅಪ್ಪಿ, ಒಪ್ಪಿಕೊಂಡೇ ಇಷ್ಟು ದಿನ ರಂಜಿಸಿದ. ಆದ್ರೆ ಇಂದು ಆತನ ಮನಸ್ಸು ಭಯದಲ್ಲಿ ಕೂಡ ಇರಬಹುದು.ಧರ್ಮ, ಧರ್ಮಗಳ ಕಿತ್ತಾಟದಲ್ಲಿ ಅವನಲ್ಲಿ ಹೊಸ ಅಭಿಪ್ರಾಯಗಳು ಮೂಡಿರಬಹುದು.ಏನೇ ಆಗಲಿ ಮೊದಲು ಭಾರತೀಯ ಅನ್ನೋದನ್ನು ನೆನಪಲ್ಲಿ ಇಟ್ಟುಕೊಂಡು ಭಾರತಾಂಭೆಗೆ ಋಣಿಯಾಗಿರಲಿ ಎಂದು ಬಯಸುತ್ತೇನೆ.

Rakesh arundi

Leave a Reply

Your email address will not be published. Required fields are marked *