Mukaleppa: ಯಾವತ್ತಿದ್ರೂ ಅವಳು ನನ್ನ ಸೊಸೆ.!ಮುಕಳೆಪ್ಪ ತಂದೆ ಎಂಟ್ರಿ.!
ಲವ್ ಜಿಹಾದ್ ವಿವಾದದ ಮೂಲಕ ಹಿಂದೂ ಸಂಘಟನೆಗಳ ಅಕ್ರೊಶಕ್ಕೆ ಗುರಿಯಾಗಿದ್ದ ಮುಕಳೆಪ್ಪ ಮತ್ತೆ ಸುದ್ದಿಯಲ್ಲಿದ್ದಾರೆ. ಹಿಂದೂ ಹುಡುಗಿ ಗಾಯಿತ್ರಿಯನ್ನು ಮದ್ವೆಯಾಗಿ ಕಿಡ್ನಾಪ್ ಕೇಸ್ ಹಾಗೂ ಗಾಯಿತ್ರಿ ತಾಯಿಗೆ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ವಿವಾದಕ್ಕೆ ಸಿಲುಕಿದ್ದ ಮುಕಳೆಪ್ಪ ಊರು ತೊರೆದು ಸಾರ್ವಜನಿಕವಾಗಿ ದೂರ ಉಳಿದಿದ್ರು.
ಒಂದ್ಕಡೆ,ಮುಕಳೆಪ್ಪ ಲವ್ ಜಿಹಾದ್ ಪ್ರಕರಣ ದಿನೇ ದಿನೇ ಹೊಸ ರೂಪ ಪಡೆದುಕೊಳ್ಳುತ್ತಿದ್ದಂತೆ ಮುಕಳೆಪ್ಪ ತಂದೆ ಅಖಾಡಕ್ಕಿಳಿದಿದ್ದಾರೆ. ಮುಕಳೆಪ್ಪ ಅಲಿಯಾಸ್ ಖ್ವಾಜಾ ಶಿರಹಟ್ಟಿಯ ತಂದೆ ಮೊಹಮ್ಮದ್ ಹನೀಫ್ ಶಿರಹಟ್ಟಿ ಪ್ರಕರಣದಲ್ಲಿ ಎಂಟ್ರಿ ಕೊಟ್ಟಿದ್ದು, ತನಗೆ ಮತ್ತು ತನ್ನ ಕುಟುಂಬದವರಿಗೆ ಜೀವ ಬೆದರಿಕೆ ಬರುತ್ತಿದೆ. ಇದರಿಂದ ನಮಗೆ ಹಾಗೂ ತನ್ನ ಸೊಸೆಗೆ ರಕ್ಷಣೆ ನೀಡಬೇಕಾಗಿ ವಿನಂತಿಸಿಕೊಂಡಿದ್ದಾರೆ. ಜಾತಿ ಯಾವುದಾದರೂ ನಮ್ಮ ಸೊಸೆ ನಮ್ಮವಳೇ, ಆಕೆಯನ್ನು ಬಿಟ್ಟುಕೊಡುವುದಿಲ್ಲವೆಂದು ಖಡಕ್ ಆಗಿ ಹೇಳಿದ್ದಾರೆ.
ಏನಿದು ಪ್ರಕರಣ..!
ಯ್ಯೂಟ್ಯೂಬರ್ ಮುಕಳೆಪ್ಪ ಮೂಲತಃ ಹುಬ್ಬಳ್ಳಿಯ ಹುಡುಗ. ತಮ್ಮ ವೀಡಿಯೋಗಳಲ್ಲಿ ಅಭಿನಯಿಸ್ತಿದ್ದ ಹಿಂದೂ ಹುಡುಗಿ ಗಾಯಿತ್ರಿಯನ್ನು ಪ್ರೀತಿಸಿ ರಿಜಿಸ್ಟರ್ ಆಫೀಸ್‌ನಲ್ಲಿ ವಿವಾಹವಾಗಿದ್ದರು.ಮಗಳು ಇಸ್ಲಾಂ ಹುಡುಗನ ಜತೆ ಓಡಿ ಹೋಗಿದ್ದಾಳೆ ಎಂದು ಕಿಡ್ನಾಪ್ ಕೇಸ್‌ನಾ ಗಾಯಿತ್ರಿ ತಂದೆ ತಾಯಿ ದಾಖಲಿಸಿದ್ದರು. ಇದಾದ ಮೇಲೆ ಪೋಲಿಸರ ವಿಚಾರಣೆ ವೇಳೆ ನಾವಿಬ್ರು ಪ್ರೀತಿಸಿಯೇ ಮದ್ವೆಯಾಗಿದ್ದೇವೆ. ಇದಕ್ಕೆ ನನ್ನ ಅಮ್ಮನ ಸಪೋರ್ಟ್ ಕೂಡ ಇತ್ತು. ಇದು ಲವ್ ಜಿಹಾದ್ ಏನೂ ಅಲ್ಲ ಎಂದು ಗಾಯಿತ್ರಿ ಆರೋಪಗಳ ವಿರುದ್ಧ ಕ್ಲಾರಿಟಿ ಕೊಟ್ಟಿದ್ರು. ಇದೀಗ ಮುಕಳೆಪ್ಪ ತಂದೆ ಮೊದಲ ಬಾರಿ ಮೌನ ಮುರಿದು ಮಗನ ಪರವಾಗಿ ನಿಂತಿದ್ದಾರೆ. ಜತೆಗೆ ಸೊಸೆಯನ್ನುಸಮರ್ಥಿಸಿಕೊಂಡಿದ್ದಾರೆ.