Matthew videos victim; ಮ್ಯಾಥಿವ್ ಬಳಿ 2500 ಅಶ್ಲೀಲ ವಿಡಿಯೋ ; ಸಂತ್ರಸ್ತೆ ಆರೋಪ

ರಾಜ್ಯದಲ್ಲಿ ಮತ್ತೊಂದು ‘ಪ್ರಜ್ವಲ್ ರೇವಣ್ಣ  ಮಾದರಿ’ಯ ಪ್ರಕರಣ ಬೆಳಕಿಗೆ ಬಂದಿದೆ. ಕ್ರಿಕೆಟ್ ಕೋಚ್ ಮತ್ತು ದೈಹಿಕ ಶಿಕ್ಷಕನ ಮೇಲೆ ಸಂತ್ರಸ್ತೆಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ.

ಮ್ಯಾಥಿವ್ ಎಂಬ ವ್ಯಕ್ತಿ ನನ್ನನ್ನ ದೈಹಿಕವಾಗಿ ಬಳಸಿಕೊಂಡು ಅದನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಅಲ್ಲದೇ ಕೆಲವು ಮಹಿಳೆಯರು ಮತ್ತು ಯುವತಿಯರ ಜೊತೆಗಿರುವ ಖಾಸಗಿ ಕ್ಷಣವನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ಆತನ ಬಳಿ ಸುಮಾರು 2500 ವಿಡಿಯೋಗಳಿವೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾಳೆ.

ಮ್ಯಾಥಿವ್ ಎಂಬ ವ್ಯಕ್ತಿ ವಿರುದ್ಧ  ಈ ಆರೋಪ ಕೇಳಿಬಂದಿದೆ. ಸಂತ್ರಸ್ತೆ ಮಹಿಳಾ ಆಯೋಗದಕೂ ದೂರು ನೀಡಿದ್ದಾರೆ. ಮ್ಯಾಥಿವ್​ನ ಕೆಲ ಅಶ್ಲೀಲ ಫೋಟೋಗಳು, ವಿಡಿಯೋಗಳು ಸಂತ್ರಸ್ತೆ ಬಳಿಯಿವೆ. ಆ ವಿಡಿಯೋಗಳು ಸಂತ್ರಸ್ತೆ ಮಾಡುತ್ತಿರುವ ಆರೋಪಗಳಿಗೆ ಪುಷ್ಟಿ ನೀಡುತ್ತಿವೆ. ಕೆಲ ಯುವತಿಯರು, ಮಹಿಳೆಯರ ಜೊತೆಗಿನ ವಿಡಿಯೋಗಳು ಅದಾಗಿವೆ. 

Rakesh arundi

Leave a Reply

Your email address will not be published. Required fields are marked *