Dharmasthala Mass burial: ಧರ್ಮಸ್ಥಳ ಪ್ರಕರಣ- ಸುಪ್ರೀಂ ಕೋರ್ಟ್‌ಗೆ ಮೆಟ್ಟಿಲೇರಿದ ವಕೀಲ ರೋಹಿತ್‌ ಪಾಂಡೆ..!

ಧರ್ಮಸ್ಥಳದಲ್ಲಿ ಸಾಮೂಹಿಕ ಶವಗಳನ್ನು ಹೂತಿಟ್ಟ ಆರೋಪಗಳಿಗೆ ಸಂಬಂಧಪಟ್ಟಂತೆ ಇದೀಗ ಹಿರಿಯ ವಕೀಲ ರೋಹಿತ್‌ ಪಾಂಡೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಸಾಲು ಸಾಲು ಆರೋಪಗಳು ಎಸ್‌ಐಟಿ ಹೆಗಲೇರ್ತಿದ್ದ ಹಾಗೆ ಗೊಂದಲದ ಗೂಡಾಗಿರೋ ಧರ್ಮಸ್ಥಳ ಇನ್ನು ಹಲವು ಅನುಮಾನಗಳನ್ನು ಹುಟ್ಟು ಹಾಕ್ತಿದೆ. ಇತ್ತ ಬುರುಡೆ ಹೊತ್ತು ತಂದ ಚಿನ್ನಯ್ಯ ಜೈಲು ಪಾಲಾಗಿದ್ರೆ, ಅದನ್ನು ತಂದು ಕೊಟ್ಟ ವಿಟ್ಟಲ್‌ಗೌಡ ವಿಚಾರಣೆ ಎದುರಿಸ್ತಿದ್ದಾರೆ. ವಿಚಾರಣೆ ನಡುವೆಯೇ ಮಾಧ್ಯಮಗಳ ಮುಂದೆ ಇನ್ನು ಬಂಗ್ಲೆಗುಡ್ಡದಲ್ಲಿ ಅನೇಕ ಅಸ್ಥಿಪಂಜರಗಳು ಇವೆ. ಹೆಣಗಳ ರಾಶಿ ಇದೆ. ಸಣ್ಣ ಮಗುವಿನ ಎಲುಬು ಇದೆ ಎಂದಿದ್ದ ಸೌಜನ್ಯ ಮಾವ ವಿಟ್ಟಲ್‌, ಚಿನ್ನಯ್ಯ ಹೇಳಿದ್ದೆಲ್ಲಾ ಸತ್ಯ ಎಂದಿದ್ದಾನೆ.

ರಂಗ, ಸುಬ್ರಹ್ಮಣ್ಯ, ತಾರಸಿ ಎಲ್ಲರೂ ಹೇಳಿದ್ದು ಸತ್ಯ. ಅವ್ರ ಮಾಹಿತಿ ಪ್ರಕಾರ ಎಲ್ಲಾ ತೋರಿಸಲು ರೆಡಿ ಇದ್ದೇನೆ ಎಂದು ಅಚ್ಚರಿ ಮೂಡಿಸಿದ್ದಾನೆ. ಇನ್ನು ಸೌಜನ್ಯ ಮಾವ ಪುರಂದರ ಗೌಡ ಹಾಗೂ ತುಕಾರಾಂ ಗೌಡ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದು, ಎಸ್‌ಐಟಿ ಟೀಮ್‌ ಕಾಲಮಿತಿಯೊಳಗೆ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲು ಮನವಿ ಮಾಡಿಕೊಂಡಿದ್ದಾರೆ. ಈ ನಡುವೆ, ಧರ್ಮಸ್ಥಳ ಆರೋಪಗಳಿಗೆ ಸಂಬಂಧಪಟ್ಟಂತೆ ಹಿರಿಯ ವಕೀಲ ರೋಹಿತ್‌ ಪಾಂಡೆ ಕೊನೆಗೂ ದಿಲ್ಲಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಅವ್ರ ಸುದೀರ್ಘ ಪತ್ರದಲ್ಲಿ ಧರ್ಮಸ್ಥಳದ ವಿರುದ್ಧ ಕೇಳಿಬರ್ತಿರೋ ಸರಣಿ ಆರೋಪಗಳ ಕಡೆಗೆ ದೃಷ್ಟಿ ಹರಿಸಿದ್ದಾರೆ.

ಈ ಕೇಸ್‌ಗೆ ಸಂಬಂಧ ಪಟ್ಟಹಾಗೆ ದಿಲ್ಲಿಯ ಸರ್ವೋಚ್ಚ ನ್ಯಾಯಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದು, ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆಗಳ ಕೇಸ್‌ಗೆ ಸಂಬಂಧಪಟ್ಟಂತೆ ಸುಮೋಟೋ ಕೇಸ್‌ ದಾಖಲಿಸಿಕೊಳ್ಳಲು ವಿನಂತಿಸಿಕೊಳ್ಳಲಾಗಿದೆ. ಇನ್ನು ಸದ್ಯ ತನಿಖೆ ನಡೆಸ್ತಿರೋ ಎಸ್‌ಐಟಿಯ ಮೇಲ್ವಿಚಾರಣೆ ನಡೆಸಲು ವಿನಂತಿಸಿಕೊಳ್ಳಲಾಗಿದೆ.

ಸುಪ್ರೀಂ ಕೋರ್ಟ್‌ ವಕೀಲರ ಪತ್ರದಲ್ಲೇನಿದೆ..?

ಜುಲೈ 3, 2025 ರಂದು, ನೈರ್ಮಲ್ಯ ಕಾರ್ಮಿಕರಾದ ಶ್ರೀ ಸಿ.ಎನ್. ಚಿನ್ನಯ್ಯ ಅವರು ಧರ್ಮಸ್ಥಳದಲ್ಲಿ ಎರಡು ದಶಕಗಳ ಅವಧಿಯಲ್ಲಿ ಘೋರ ಅಪರಾಧಗಳು ಮತ್ತು ಅತ್ಯಾಚಾರಗಳಿಗೆ ಒಳಗಾದ ವ್ಯಕ್ತಿಗಳ ಶವಗಳನ್ನು ರಹಸ್ಯವಾಗಿ ಹೂಳಲು ಒತ್ತಾಯಿಸಲಾಗಿದೆ ಎಂದು ಔಪಚಾರಿಕವಾಗಿ ಧರ್ಮಸ್ಥಳದಲ್ಲಿ ದೂರು ನೀಡಿದ್ದರು. ಇದೇ  ದೂರುದಾರ ಚಿನ್ನಯ್ಯ ಅವ್ರಿಂದ ಜುಲೈ 11, 2025 ರಂದು ಗೌರವಾನ್ವಿತ ನ್ಯಾಯಾಲಯದ ಮ್ಯಾಜಿಸ್ಟ್ರೇಟ್‌ ಮುಂದೆ 164 ಸ್ಟೇಟ್‌ಮೆಂಟ್‌ ಕೂಡ ಕೊಡಿಸಲಾಯಿತು.

ಈ ಎಲ್ಲಾ ಅಚ್ಚರಿ ಬೆಳವಣಿಗೆಗಳ ನಂತ್ರ ರಾಜ್ಯ ಸರ್ಕಾರವು ಜುಲೈ 20, 2025 ರಂದು ವಿಶೇಷ ತನಿಖಾ ತಂಡವನ್ನು (SIT) ರಚಿಸಿತು. ಚಿನ್ನಯ್ಯ ಅವರ ಮಾರ್ಗದರ್ಶನದಲ್ಲಿ SIT ಹಲವಾರು ಸ್ಥಳಗಳಲ್ಲಿ ಮಾನವ ಅವಶೇಷಗಳನ್ನು ಹೊರತೆಗೆದಿತ್ತು. ಅಸ್ಥಿಪಂಜರದ ತುಣುಕುಗಳು, ತಲೆಬುರುಡೆಗಳು ಮತ್ತು ಸೀರೆಗಳಂತಹ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು, ಇದು ಅವರ ಸಾಕ್ಷ್ಯದ ಭಾಗಗಳನ್ನು ದೃಢಪಡಿಸಿತು. ಕಳೆದ ಇಪ್ಪತ್ತು ವರ್ಷಗಳಿಂದ ಧರ್ಮಸ್ಥಳದಲ್ಲಿ ನಡೆದ ವಿವರಿಸಲಾಗದ ಕೊಲೆಗಳು, ಸಾವುಗಳು ಮತ್ತು ಕಣ್ಮರೆಗಳನ್ನು ಪರಿಹರಿಸುವ ಜವಾಬ್ದಾರಿ SIT  ಮೇಲಿದೆ.

ಈ ನಡುವೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಭೇಟಿಯ ಬಗ್ಗೆಯೂ ಸುಪ್ರೀಂ ಕೋರ್ಟ್‌ ವಕೀಲರು ಉಲ್ಲೇಖಿಸಿದ್ದುಆಗಸ್ಟ್ 2025 ಎರಡನೇ ವಾರದಲ್ಲಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಸಾವು ಮತ್ತು ಕಣ್ಮರೆಯಾದ ಪ್ರಕರಣಗಳ ತನಿಖೆಗಾಗಿ ಮಧ್ಯಸ್ಥಿಕೆ ವಹಿಸಿ ಇನ್ವಿಸ್ಟಿಗೇಷನ್‌ಗಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿತು. NHRC ಚಿನ್ನಯ್ಯ ಅವರೊಂದಿಗೆ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಮಾತನಾಡಿತ್ತು.ಹಾಗೆಯೇ ಚಿನ್ನಯ್ಯ ಎದುರಿಸಿದ ಗಂಭೀರ ಬೆದರಿಕೆಗಳನ್ನು ಖಾತ್ರಿಪಡಿಸಿಕೊಂಡು ವಾಪಾಸಾಗಿದ್ರು.

ಇದಾದ ಕೆಲವೇ ದಿನಗಳಲ್ಲಿ ಆಗಸ್ಟ್ 2025 ರ ವಾರದಲ್ಲಿ, ಚಿನ್ನಯ್ಯ ತಮ್ಮ ಆರೋಪಗಳನ್ನು ಹಿಂತೆಗೆದುಕೊಂಡರು. ಈ ಎಲ್ಲಾ ಡೆವಲಪ್‌ಮೆಂಟ್‌ಗಳನ್ನು ಸೂಕ್ಷ್ಮವಾಗಿ ಗಮನಿಸದ್ರೆ ಚಿನ್ನಯ್ಯ ಯಾಕೆ ತಾನೂ ಕೊಟ್ಟ ಹೇಳಿಕೆಗಳನ್ನು ವಾಪಾಸ್‌ ತೆಗೆದುಕೊಂಡ್ರು. ಆತನ ಮೇಲೆ ಒತ್ತಡ ಇದೆ ಎಂಬ ಅನುಮಾನ ಮೂಡುತ್ತದೆ.ಇದರ ನಡುವೆ ಧರ್ಮಸ್ಥಳದ ಗ್ರಾಮಸ್ಥರಾದ ವಿಟ್ಟಲ್‌ಗೌಡ ವಿಶೇಷವಾಗಿ ಸೌಜನ್ಯಾಳ ಚಿಕ್ಕಪ್ಪ ವಿಟ್ಟಲ್‌ಗೌಡ ರಹಸ್ಯವಾಗಿ ಶವಗಳನ್ನು ಹೂಳೋದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ನಿರಂತರವಾಗಿ ಸಾಕ್ಷ್ಯಗಳನ್ನು ನುಡಿದಿದ್ದಾರೆ. ಈ ಎಲ್ಲಾ ಶಂಕೆಗಳ ಆಧಾರದ ಮೇಲೆ ಬಂಗ್ಲೆಗುಡ್ಡಕ್ಕೆ ಕರೆದುಕೊಂಡು ಹೋಗಿದ್ದಾಗ ವಿಟ್ಟಲ್‌ಗೌಡ ಕನಿಷ್ಠ ಎಂಟು ಶವಗಳ ಅಸ್ಥಿಪಂಜರಗಳನ್ನು ತೋರಿಸಿದ್ದಾರೆ.

ಸೆಪ್ಟೆಂಬರ್ 13, 2025 ರಂದು, ಕರ್ನಾಟಕ ಸಂಪುಟದ ಹಿರಿಯ ಸಚಿವರೊಬ್ಬರು, ಎಸ್‌ಐಟಿ ಧರ್ಮಸ್ಥಳದಲ್ಲಿ ಅಪಾರ ಸಂಖ್ಯೆಯ ಶವಗಳನ್ನು ಪತ್ತೆಹಚ್ಚಿದೆ ಮತ್ತು ಈ ಶೋಧವು ಯುದ್ಧಭೂಮಿಯನ್ನು ಹೋಲುತ್ತದೆ ಎಂದು ಸಾರ್ವಜನಿಕವಾಗಿ ದೃಢಪಡಿಸಿದರು. ಈ ಅಸಾಧಾರಣ ಬಹಿರಂಗಪಡಿಸುವಿಕೆಯು ಇದುವರೆಗೆ ಪತ್ತೆಯಾಗಿರುವ ಅಭೂತಪೂರ್ವ ಪ್ರಮಾಣದ ಮಾಹಿತಿಯು ಗ್ರಾಮಸ್ಥರ ಖಾತೆಗಳ ಗಂಭೀರತೆಯನ್ನು ದೃಢಪಡಿಸುತ್ತದೆ. ಈ ನಡುವೆ ಎಸ್‌ಐಟಿ ಇನ್ನು ಹೆಚ್ಚಿನ ಶವಗಳನ್ನು ಹೊರತೆಗೆಯದಂತೆ ಒತ್ತಡದಲ್ಲಿದೆ ಎನ್ನುವ ಚರ್ಚೆಗಳ ಸಾರ್ವಜನಿಕವಾಗಿವೆ. ರಾಷ್ಟ್ರೀಯ ಮಾಧ್ಯಮಗಳಲ್ಲೂ ಚರ್ಚೆಯಾಗ್ತಿದೆ. ಇದರಿಂದ ಇದ್ರ ತನಿಖೆಯ ದಿಕ್ಕು ತಪ್ಪಿದ್ರೆ, ಕಾನೂನಿನ ಆಳ್ವಿಕೆಯ ಅಡಿಪಾಯವನ್ನೇ ಹಾಳು ಮಾಡುತ್ತದೆ. ಸತ್ಯ, ಹೊಣೆಗಾರಿಕೆ ಮತ್ತು ಸತ್ತವರಿಗೆ ಘನತೆಯನ್ನು ಖಚಿತಪಡಿಸಿಕೊಳ್ಳುವ ರಾಜ್ಯದ ಅತ್ಯಂತ ಮೂಲಭೂತ ಕರ್ತವ್ಯವನ್ನು ವಿಫಲಗೊಳಿಸಲಾಗುತ್ತಿದೆ.

ಅಷ್ಟೇ ಕಳವಳಕಾರಿ ಸಂಗತಿಯೆಂದರೆ, ಎಸ್‌ಐಟಿಯನ್ನು ಸಂಪರ್ಕಿಸಲು ಸಂತ್ರಸ್ತರಿಗೆ ಸಹಾಯ ಮಾಡುವ ವಕೀಲರನ್ನು ಕಿರುಕುಳ ನೀಡಲು ಮತ್ತು ಬೆದರಿಸಲು ಕರ್ನಾಟಕ ಪೊಲೀಸರನ್ನು (ಎಸ್‌ಐಟಿ ಹೊರತುಪಡಿಸಿ) ಸೇವೆಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಇಂತಹ ಕ್ರಮಗಳು ವಕೀಲರ ಸಂಘದ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಮತ್ತು ಕರ್ನಾಟಕದಲ್ಲಿ ಕಾನೂನು ಆಡಳಿತದ ಕುಸಿತವನ್ನು ಎತ್ತಿ ತೋರುತ್ತಿದೆ.

ಇಂತಹ ಸಂದರ್ಭಗಳಲ್ಲಿ, ನಾವು ಗೌರವಾನ್ವಿತ ನ್ಯಾಯಾಲಯವನ್ನು ಅತ್ಯಂತ ಗೌರವದಿಂದ ಒತ್ತಾಯಿಸುತ್ತೇವೆ. ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಳ್ಳಬೇಕು. ಎಸ್‌ಐಟಿ ಪಾರದರ್ಶಕ ತನಿಖೆ ನಡೆಯಲು, ಗೌರವಾನ್ವಿತ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ SIT ಅನ್ನು ಸ್ಥಾಪಿಸಬೇಕು; ಸ್ವಾತಂತ್ರ್ಯ,ನ್ಯಾಯಾಂಗ ಮೇಲ್ವಿಚಾರಣೆಯಲ್ಲಿ ಬಂಗ್ಲೆಗುಡ್ಡೆ ಮತ್ತು ಇತರೆಡೆಗಳಲ್ಲಿ ಗೋಚರಿಸುವ ಶವಗಳನ್ನು ತಕ್ಷಣ ಹೊರತೆಗೆದು ವಿಧಿವಿಜ್ಞಾನ ಪರೀಕ್ಷೆಗೆ ಡೈರೆಕ್ಷನ್ಸ್‌ ಕೊಡಬೇಕು. ಸಾಕ್ಷಿಗಳು, ಬಲಿಪಶುಗಳ ಕುಟುಂಬಗಳು ಮತ್ತು ಅವರಿಗೆ ಸಹಾಯ ಮಾಡುವ ವಕೀಲರಿಗೆ ರಕ್ಷಣೆ ಒದಗಿಸಬೇಕು ಎಂದು ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಬರೆಯಲಾಗಿದೆ.

ಇನ್ನು ಕೆಲವರ ಒತ್ತಡದಿಂದಾಗಿ ಕಣ್ಣಿಗೆ ಕಾಣುವ ಮಾನವ ಅವಶೇಷಗಳನ್ನು ಹೊರತೆಗೆಯದೆ ಮತ್ತು ಸಾಕ್ಷಿಗಳನ್ನು ಮೌನಗೊಳಿಸಿದಾಗ, ನ್ಯಾಯವು ಸ್ವತಃ ಅಪಾಯದಲ್ಲಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಈಗಾಗಲೇ ದೃಢವಾದ ಬೆದರಿಕೆಗಳನ್ನು ದಾಖಲಿಸುತ್ತಿದೆ ಮತ್ತು ಹಿರಿಯ ಕ್ಯಾಬಿನೆಟ್ ಸಚಿವರು ಈಗ ದೃಢಪಡಿಸುತ್ತಿದ್ದಾರೆ. ಧರ್ಮಸ್ಥಳದಲ್ಲಿ ಯುದ್ಧಭೂಮಿಯಂತಹ ಸಂಖ್ಯೆಯ ಶವಗಳು ಪತ್ತೆಯಾದಾಗ, ಸತ್ಯವನ್ನು ಸಮಾಧಿ ಮಾಡದಂತೆ ಮತ್ತು ಕಾನೂನಿನ ಘನತೆಯನ್ನು ಎತ್ತಿಹಿಡಿಯುವುದನ್ನು ಖಚಿತಪಡಿಸಿಕೊಳ್ಳಲು ತುರ್ತು ನ್ಯಾಯಾಂಗ ಹಸ್ತಕ್ಷೇಪ ಮಾತ್ರ ರಕ್ಷಣೆಯಾಗಿದೆ.

ಅತ್ಯಂತ ಗೌರವದಿಂದ, ನಿಮ್ಮ ವಿಶ್ವಾಸಿ, ರೋಹಿತ್‌ ಪಾಂಡೆ ಎಂದು ಪತ್ರದಲ್ಲಿ ದಾಖಲಿಸಲಾಗಿದೆ. ಇನ್ನು ಗಮನಿಸಬೇಕಾದ ಸಂಗತಿ ಏನೆಂದರೆ ಸೌಜನ್ಯಾ ಕಿಡ್ನ್ಯಾಪ್‌ ಮಾಡಿದ್ದನ್ನು ಕಣ್ಣಾರೆ ಕಂಡಿದ್ದೇನೆ ಎಂದು ಮುಂದೆ ಬಂದಿರೋ ಮಹಿಳೆ ಬೆಳ್ತಂಗಡಿಗೆ ಅಗಮಿಸ್ತಾ ಇದ್ದು ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಲಿದ್ದಾರೆ. ಇದರ ಜೊತೆಗೆ ಎಸ್‌ಐಟಿ ಕಛೇರಿಗೆ ಒಡನಾಡಿ ಸಂಸ್ಥೆ ಸೇರಿದಂತೆ ಅನೇಕ ಸಂಘಟನೆಗಳ ಮುಖ್ಯಸ್ಥರು, ಮುಖಂಡರು, ವಕೀಲರು, ಪ್ರೊಪೆಸರ್‌ಗಳು ದೂರನ್ನು ಸಲ್ಲಿಸಲಿದ್ದಾರೆ.ಧರ್ಮಸ್ಥಳ ಸಾಮೂಹಿಕ ಶವ ಹೂತಿಟ್ಟ ಪ್ರಕರಣ ಸುಪ್ರೀಂಗೆ ಮನವಿ ಸಲ್ಲಿಸೋ ಕೆಲಸಗಳಾಗ್ತಿರೋದ್ರಿಂದ ಬೇರೆ ಆಯಾಮವನ್ನು ಭವಿಷ್ಯದಲ್ಲಿ ಪಡೆದುಕೊಳ್ಳಲಿದೆ.

Rakesh arundi

Leave a Reply

Your email address will not be published. Required fields are marked *