“ಪ್ರೇಮಕ್ಕೆ ಲಿಂಗವಿಲ್ಲ: ಆದ್ಯಾ–ಜಯರಾಮ್ ಪ್ರೀತಿಯ ಸ್ಫೂರ್ತಿದಾಯಕ ಕಥೆ”
ಸ್ನೇಹಿತರೆ ನಮಸ್ಕಾರ.. ಹೇಳಿ ಮಾಡಿಸಿದ ಜೋಡಿ ಸಿಗೋದು ಚಪ್ಪಲಿಗಳಲ್ಲಿ ಮಾತ್ರ.. ಇನ್ನೆಲ್ಲಾ ನಾವೇ ಹೊಂದಾಣಿಕೆ
ಮಾಡಿಕೊಂಡು ಹೋಗಬೇಕು ಅಂತಾ ಯಾರೋ ದೊಡ್ಡೋರು ಹೇಳಿದ ಮಾತು.. ಆದ್ರೆ ಅದು ಇಲ್ಲಿ ಸುಳ್ಳಾಗಿದೆ..
ಬನ್ನಿ ನಿಮಗಿಲ್ಲಿ ವಿಭಿನ್ನ ಜೋಡಿಯನ್ನು ಪರಿಚಯ ಮಾಡಿಕೊಡ್ತೀನಿ.. ಬದುಕನ್ನು ಪ್ರತಿಕ್ಷಣ ಪ್ರೀತಿಸಿದ್ರೆ ಮಾತ್ರ ಹೀಗೆ
ಬದುಕಲಿಕ್ಕೆ ಸಾಧ್ಯ.. ಇದಕ್ಕೆ ಜೀವನ ಪ್ರೀತಿ ಅಂತಾ ಹೇಳ್ತೀವಿ.. ಗಂಡು ಮಗಳಮುಖಿ.. ಕ್ಷಮಿಸಿ.. ವಿಶೇಷ ವನಿತೆ ಅಂತಾ
ಕರೀತಿನಿ… ಅಂತಾ ಹೆಣ್ಣನ್ನು ವರಿಸಿ ಇವತ್ತು ಕೋಟಿಯ ಮನೆಯ ಕಟ್ಟಿದ ಸಕ್ಸಸ್ ಸ್ಟೋರಿಯ ಕಥೆ ಇದು…
ಆದ್ಯಾ ಅನ್ನೋ ಟ್ರಾನ್ಸ್ಜೆಂಡರ್ನಾ ಮನೆಯ ವಿರೋಧ ಕಟ್ಟಿಕೊಂಡು ಮದ್ವೆಯಾದ ಜಯರಾಮ್ ಇವತ್ತು
ಮೂರ್ನಾಲ್ಕು.. ಎಜೆ ಸಲೂನ್ ಅಕಾಡೆಮಿಗಳನ್ನು ಸ್ಥಾಪನೆ ಮಾಡಿ.. ಸೋಶಿಯಲ್ ವರ್ಕ್ ಮೂಲಕ ಗಮನ ಸೆಳೀತಾ
ಇದ್ದಾರೆ.. ಕೇವಲ 5000 ಸಾವಿರಕ್ಕೆ ಎ.ಜೆ ಬ್ಯೂಟಿಶಿಯನ್ ಕೋರ್ಸ್ ಅಕಾಡೆಮಿ ತೆರೆದು..
(ಹೈಡ್ರೋಫೇಶಿಯಲ್+ಹೈಬ್ರೋ+ಹೇರ್ಕಟ್+ಮೇಕ್ ಅಪ್+ನೇಲ್ ಆರ್ಟ್+ಪಾರ್ಟಿ ಮೇಕ್
ಅಪ್+ಮೆನಿಕ್ಯೂರ್+ಪಡಿಕ್ಯೂರ್)