Supreme Court: ಸುಪ್ರೀಂ ಕೋರ್ಟ್ ಸಿಜೆಐ ಮೇಲೆ ಶೂ ಎಸೆದ ವಕೀಲ
ಸುಪ್ರೀಂ ಕೋರ್ಟ್ ಆವರಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸಿಜೆಐ ಅವರ ಮೇಲೆ ವಕೀಲರೊಬ್ಬರು ಶೂ ಎಸೆದಿರುವ ಕೃತ್ಯ ನಡೆದಿದೆ.
ಸಿಜೆಐ ಅವರು ಕೇಸ್ ವಿಚಾರಣೆ ಆರಂಭ ಮಾಡಿದ ಬೆನ್ನಲ್ಲೆ ಹಿರಿಯ ವಕೀಲ ಕೀಶೋರ್ ರಾಕೇಶ್ ಅವರು ಸನಾತನ ಧರ್ಮಕ್ಕೆ ಅವಮಾನವಾದರೆ ಭಾರತ ಸಹಿಸಲ್ಲ ಎಂದು ಘೋಷಣೆ ಕೂಗುತ್ತಲೇ ಸಿಜೆಐ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದಿದ್ದಾರೆ. ಆದರೆ ವಕೀಲ ಎಸೆದ ಶೂ ಪೀಠದ ತನಕ ತಲುಪುವುದಿಲ್ಲ. ಕೂಡೆಲೇ ಅಲ್ಲೆ ಇದ್ದಂತಹ ಭದ್ರಾತ ಸಿಬ್ಬಂಧಿಗಳು ವಕೀಲರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕುಜರಾಹೋದ ಜವಾರಿ ದೇಗುಲದ ಬಗ್ಗೆ ವಕೀಲ ಕೀಶೋರ್ ಅರ್ಜಿ ಸಿಲ್ಲಿಸಿರುತ್ತಾರೆ. ಮೊಘಲರ ಕಾಲದ 7 ಅಡಿ ಎತ್ತರದ ವಿಷ್ಣು ಮೂರ್ತಿ ವಿರೂಪಗೊಂಡಿದ್ದು, ದೇಗುಲದಲ್ಲಿ ಪೂಜೆ ಮಾಡಲು ಅವಕಾಶ ಮಾಡಿಕೊಡುವಂತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿರುತ್ತಾರೆ. ವಕೀಲನ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನಿಮ್ಮ ಅರ್ಜಿ ಬಗ್ಗೆ ದೇವರೆ ಹೇಳಬೇಕು. ನೀವು ವಿಷ್ಣುವಿನ ಪರಮಭಕ್ತ ಅಂತೀರಿ, ದೇವರನ್ನೆ ಹೋಗಿ ಕೇಳಿ ಎಂದು ಗವಾಯಿ ಎಂದು ಉತ್ತರ ನೀಡಿದ್ದು, ಈ ವೇಳೆ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.