Karnataka:ಬಾಗಲಕೋಟೆಯಲ್ಲಿ ಭಾರೀ ಮಳೆ.! ಕೊಳೆತ ಹತ್ತಿ ಬೆಳೆ.!ಜನಜೀವನ ಅಸ್ತವ್ಯಸ್ತ.!- Bagalakote,Koppala,Vijayapura
ಭೀಮಾ ನದಿ ಉಕ್ಕಿ ಹರೀತಾ ಇರೋದ್ರಿಂದ ಸಂಪೂರ್ಣ ಉತ್ತರ ಕರ್ನಾಟಕ ಭಾಗ ಮಳೆಗೆ ತತ್ತರಿಸಿ ಹೋಗಿದೆ. ಪ್ರವಾಹ ಭೀತಿ ಎದುರಿಸ್ತಾ ಇದೆ. ಮನೆಗಳು ಮುಳುಗಡೆಯಾಗಿವೆ. ನಜರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಬೆಳೆಗಳು ನಾಶವಾಗಿವೆ. ಭೀಮಾ ತೀರದ ಅನೇಕ ಜಿಲ್ಲೆಗಳಲ್ಲಿ ನೆರೆ ಭೀತಿ ನಿರ್ಮಾಣವಾಗಿದ್ದು ಜನರು ಕಂಗಾಲಾಗಿದ್ದಾರೆ. ಗರ್ಭೀಣಿಯರು, ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಭಾರೀ ಮಳೆಗೆ ಬೆಳೆದು ನಿಂತ ಹತ್ತಿ ಬೆಳೆ ಕೊಳೆತು ಹೋಗಿದೆ.ನಿಲೆಕೇರಿ ಹಳ್ಳಿಯ ರೈತ ನಾಗಪ್ಪ ಸುಮಾರು 1 ಲಕ್ಷ ಖರ್ಚು ಮಾಡಿ ಕಷ್ಟ ಪಟ್ಟು ಬೆಳೆದಿದ್ದ ಹತ್ತಿ ಬೆಳೆ ಸಂಪೂರ್ಣವಾಗಿ ಕೊಳೆತು ಹೋಗಿದೆ. ಸುಮಾರು 5 ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದ ರೈತನ ಅಳಲು ಹೇಳತೀರದಾಗಿದೆ.
ವಿಜಯಪುರದಲ್ಲಿ ಮಳೆ ಅವಾಂತರ..!
ಇನ್ನೂ ವಿಜಯಪುರ ಜಿಲ್ಲೆಯಲ್ಲಿಯು ಮಳೆರಾಯ ಅವಾಂತರಗಳನ್ನೇ ಸೃಷ್ಟಿ ಮಾಡಿದ್ದು, ತೊಗರಿ, ಕಬ್ಬು ಮತ್ತು ಮೆಕ್ಕೆಜೋಳ ಬೆಳೆಗಳು ಜಲಾವೃತವಾಗಿವೆ. ಅಲಮೇಲ ತಾಲೂಕಿನ ಶಂಬೇವಾಡ ಗ್ರಾಮದಲ್ಲಿ ಭೀಮಾ ನದಿಯ ನೀರಿನಲ್ಲಿ ಸಿಲುಕಿದ್ದ ಮೂವರು ಗರ್ಭಿಣಿ, ಇಬ್ಬರು ಬಾಲಕರು, ಒಂದು ಮಗು ಸೇರಿದಂತೆ 10ಕ್ಕು ಹೆಚ್ಚು ಜನರನ್ನು ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ.
ಕೊಪ್ಪಳದಲ್ಲೂ ಮಳೆ ಅವಾಂತರ..!
ಇತ್ತ ಕೊಪ್ಪಳ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಮುಂದುವರೆದಿದೆ, ಮುದ್ಲಾಪುರ ಡ್ಯಾಂ ನಿಂದ ಹಿರೇಹಳ್ಳಕ್ಕೆ ಏಕಾಏಕಿ ನೀರು ಹರಿಸಿದ ಪರಿಣಾಮ, ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮದಲ್ಲಿ ಬೋಜಪ್ಪ ಉಳ್ಳಾಗಡ್ಡಿ ಎಂಬ ವ್ಯಕ್ತಿ ಹಳ್ಳದಲ್ಲಿ ಸಿಲುಕಿದ್ದರು. ನಡು ಬಂಡೆಯ ಮೇಲೆ ಈಜು ಬಾರದೆ ಕುಳಿತಿದ್ದ ಬೊಜಪ್ಪನನ್ನು ಬೋಟ್ ಹಾಗೂ ಹಗ್ಗದ ಮೂಲಕ ಅಗ್ನಿಶಾಮಕ ಸಿಬ್ಬಂದಿಗಳು ಹಾಗು ಪೊಲೀಸರು ಹೊರತಂದಿದ್ದಾರೆ. ಈ ಎಲ್ಲಾ ಅವಾಂತರಗಳು ಉತ್ತರ ಕರ್ನಾಟಕ ಭಾಗವನ್ನು ಕಣ್ಣೀರಲ್ಲೇ ಕೈತೊಳೆಯುವಂತೆ ಮಾಡಿವೆ.