Karnataka Census: ಜಾತಿಗಣತಿಯಲ್ಲಿ ಭಾಗವಹಿಸಿದ್ರೆ ಅಪಾಯ.! ಹಿರಿಯ ನ್ಯಾಯವಾದಿ ಬಿವಿ ಆಚಾರ್ಯ..!
ಕರ್ನಾಟಕ ಸರ್ಕಾರ ಜಾತಿ ಸಮೀಕ್ಷೆ ನಿರ್ಧಾರ ತೆಗೆದುಕೊಂಡಾಗಿನಿಂದ ಒಂದಿಲ್ಲೊಂದು ಪರ ವಿರೋಧ ಚರ್ಚೆಗಳು ನಡೀತಾನೆ ಇದೆ. ಆದ್ರೆ, ಜಾತಿ ಸಮೀಕ್ಷೆಗೆ ದಾಖಲೆಗಳನ್ನು ನೀಡೋದು ಕಡ್ಡಾಯವಲ್ಲ ಎಂದು ಹೈಕೋರ್ಟ್ ಕೂಡ ಅಭಿಪ್ರಾಯ ಪಟ್ಟಿದೆ. ಈ ನಡುವೆ ಹಿರಿಯ ನ್ಯಾಯವಾದ ಬಿವಿ ಆಚಾರ್ಯ ಕರ್ನಾಟಕದ ಜಾತಿ ಗಣತಿಯಲ್ಲಿ ಪಾಲ್ಗೊಳ್ಳೋದು ಅನಗತ್ಯ ಎಂದಿದ್ದಾರೆ.
ನೀವೇನಾದ್ರೂ ಜಾತಗಣತಿಯಲ್ಲಿ ಭಾಗವಹಿಸಿದ್ರೆ ನಿಮ್ಮ ವೈಯಕ್ತಿಕ ಮಾಹಿತಿ ದುರುಪಯೋಗವಾಗುವ ಅಪಾಯವಿದೆ ಎಂದಿದ್ದಾರೆ. ಹೈಕೋರ್ಟ್ ಆದೇಶದಂತೆ ಇದು ಕೇವಲ ಐಚ್ಛಿಕ. ಆದ್ದರಿಂದ ಜಾತಿಗಣತಿಯಲ್ಲಿ ಭಾಗವಹಿಸದೇ ಇರೋದು ಬೆಸ್ಟ್ ಎಂದ್ದಿದ್ದಾರ
ಬಿ.ವಿ ಆಚಾರ್ಯ ಹೇಳಿದ್ದೇನು.?
ಇದು ಯಾವುದೇ ರೀತಿಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸಂಬಂಧಿಸಿಲ್ಲ ಅಥವಾ ಸಹಾಯ ಕೂಡ ಆಗೋದಿಲ್ಲ. ನಾವು ಭಾಗವಹಿಸಲು ಒಪ್ಪಿದರೆ, ನಮ್ಮ ಆದಾಯ, ಆಧಾರ್ ಇತ್ಯಾದಿ ಹಲವಾರು ವ್ಯಯಕ್ತಿಕ ಮಾಹಿತಿಯನ್ನು ನೀಡಬೇಕಾಗುತ್ತದೆ. ಅದು ಅನಗತ್ಯ ಮತ್ತು ಬ್ರಾಹ್ಮಣ ಸಮುದಾಯಕ್ಕೆ ಉಪಯೋಗವಾಗುವುದಿಲ್ಲ. ಆದ್ದರಿಂದ, ಜಾತಿ ಗಣತಿಯಲ್ಲಿ ಭಾಗವಹಿಸದಿರಲು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ. ಒಂದು ವೇಳೆ ಭಾಗವಹಿಸಿದರೆ, ವೈಯಕ್ತಿಕ ಮಾಹಿತಿ ದುರುಪಯೋಗಪಡಿಸಿಕೊಳ್ಳುವ ಅಪಾಯವಿದೆ ಎಂಬುವುದು ನನ್ನ ಮತ್ತು ಇತರ ಕಾನೂನು ತಜ್ಞರ ಅಭಿಪ್ರಾಯ. ಹೈಕೋರ್ಟ್ ಸ್ಪಷ್ಟವಾಗಿ ಹೇಳುವಂತೆ ಇದು ಐಚ್ಛಿಕ ಮತ್ತು ಬಂಧಮುಕ್ತ, ಯಾರನ್ನೂ ಭಾಗವಹಿಸಲು ಒತ್ತಾಯಿಸಲಾಗುವುದಿಲ್ಲ ಎಂದು ಬಿವಿ ಆಚಾರ್ಯ ತಿಳಿಸಿದ್ದಾರೆ.
in is .! Senior ..!