Karnataka Census: ಕರ್ನಾಟಕದಲ್ಲಿರೋ ಜಾತಿಗಳ ಸಂಖ್ಯೆ ಎಷ್ಟು ಗೊತ್ತಾ..?ಅಬ್ಬಬ್ಬಾ.! ಬೆಚ್ಚಿ ಬೀಳಬೇಡಿ.!ಈ ಸ್ಟೋರಿ ನೋಡಿ.
ಸೆ.22 ರಿಂದ ಕರ್ನಾಟಕದಾದ್ಯಂತ ಜಾತಗಣತಿ ಶುರುವಾಗ್ತಿದೆ. ರಾಜಕೀಯ ಲಾಭಕ್ಕಾಗಿ ರಾಜ್ಯ ಸರ್ಕಾರ ಈ ಸಮೀಕ್ಷೆ ಮಾಡ್ತಿದೆ ಅಂತಾ ವಿರೋಧ ಪಕ್ಷಗಳು ಟೀಕಿಸ್ತಿವೆ. ಈ ನಡುವೆ ರಾಜ್ಯದಲ್ಲಿ ಅಂದಾಜು ಎಷ್ಟು ಜಾತಿಗಳಿವೆ ಅನ್ನೋ ಪ್ರಾಥಮಿಕ ಮಾಹಿತಿ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಈಗಾಗ್ಲೇ ಸಮೀಕ್ಷೆಯ ಪ್ರಶ್ನೇತ್ತರಗಳಲ್ಲಿ 60 ಪ್ರಶ್ನೆಗಳನ್ನು ಹುಟ್ಟು ಹಾಕಲಾಗಿದ್ದು, ಜಾತಿಗಳು, ಉಪಜಾತಿಗಳು ಎಂಬುದರ ಪಟ್ಟಿಯನ್ನು ಸರ್ಕಾರ ಲಿಸ್ಟ್ ಮಾಡಿದೆ. ಸರ್ಕಾರ ಬಿಡುಗಡೆ ಮಾಡಿದ ಈ ಲಿಸ್ಟ್‌ನಲ್ಲಿ 1500 ಕ್ಕೂ ಹೆಚ್ಚು ಜಾತಿಗಳು ಇರೋದು ಕಂಡು ಬಂದಿದೆ.
ಜಾತಿ ಸಮೀಕ್ಷೆಯ ಆರಂಭಕ್ಕೆ ದಿನಗಣನೆ ಒಂದು ಕಡೆ ಶುರುವಾಗಿದ್ರೆ, ಇನ್ನೊಂದು ಕಡೆ ಹಲವು ಗೊಂದಲಗಳು, ವಿರೋಧಗಳು ಕೇಳಿಬರ್ತಿವೆ. ಮತಾಂತರಗೊಂಡ ಜಾತಿಯನ್ನು ಉಲ್ಲೇಖ ಮಾಡಿರೋ ಬಗ್ಗೆ ಬೊಮ್ಮಾಯಿ ವಿರೋಧ ಮಾಡಿದ್ದಾರೆ. ಇನ್ನೊಂದು ಕಡೆ ಲಿಂಗಾಯುತ ಪ್ರತ್ಯೇಕ ಧರ್ಮ ಕೂಗು ಮತ್ತೆ ಕೇಳಿಬರ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕರ್ನಾಟಕದಲ್ಲಿರೋ ಒಟ್ಟು ಜಾತಿಗಳ ಸಂಖ್ಯೆ 1561(ಜಾತಿ-ಉಪಜಾತಿಗಳು) ಸದ್ಯ, ಕ್ರಿಶ್ಚಿಯನ್ ಜತೆ ಹಿಂದೂ ಉಪಜಾತಿಗಳನ್ನು ಸೇರಿಸಿರೋ ವಿಚಾರವಾಗಿ ಬಿಜೆಪಿ ನಾಯಕರು ಹಲವು ಸ್ವಾಮೀಜಿಗಳ ಸಮ್ಮುಖದಲ್ಲಿ ಸಭೆ ನಡೆಸಿದ್ದು ಪ್ರತ್ಯೇಕ ಹೋರಾಟಕ್ಕೆ ಹಣಿಯಾಗ್ತಿದೆ.
ಹೇಗಿರುತ್ತೆ ಗೊತ್ತಾ ಜಾತಿ ಸಮೀಕ್ಷೆ..?
ಸೆ.22 ರಿಂದ 2 ಕೋಟಿ ಮನೆಗಳುಗೆ ಸ್ಟಿಕ್ಕರ್ ಅಂಟಿಸಲಾಗುತ್ತದೆ. ಮನೆಯಲ್ಲಿ ನೀವಿಲ್ಲದಿದ್ದರೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಕೊಡಿಕೊಡಬೇಕಾಗುತ್ತೆ. ಮೊದಲು ಆಶಾಕಾರ್ಯಕರ್ತರು ಬುಕ್ ಲೆಟ್ ಕೊಡುತ್ತಾರೆ. ಅದ್ರಲ್ಲಿ 60 ಪ್ರಶ್ನೆಗಳಿರೋ ಬುಕ್ ಲೆಟ್ ಇರುತ್ತದೆ. ನಂತರ ಶಿಕ್ಷಕರು ನಿಮ್ಮ ಮನೆಗೆ ಬಂದು ಮಾಹಿತಿ ಕಲೆ ಹಾಕುತ್ತಾರೆ.
ವೆಬ್‌ಸೈಟ್ ಮುಖಾಂತರವೂ ಸರ್ವೆಯಲ್ಲಿ ಪಾಲ್ಗೊಳ್ಳಿ
ಸಹಾಯವಾಣಿ ಸಂಖ್ಯೆ:- 80507 70004
ವೆಬ್ ಸೈಟ್:- kacbckarnataka.govt.in