Kantara Chapter 1: ಕಾಂತಾರ: ಚಾಪ್ಟರ್ 1 ಗ್ರ್ಯಾಂಡ್ ರಿಲೀಸ್ .. ಎಲ್ಲೆಡೆ ಭರ್ಜರಿ ಪ್ರದರ್ಶನ..ಪ್ರಗತಿ ಶಟ್ಟಿ ಅತ್ತದ್ದು ಯಾಕೆ?
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಿದೆ. ಪ್ರಪಂಚದಾದ್ಯಂತ ಬೆಳಗ್ಗೆಯಿಂದಲೇ ಶೋಗಳು ಆರಂಭವಾಗಿದ್ದು, ಪ್ರೀಮಿಯರ್ ಶೋಗಳಿಂದಲೇ ಮೆಚ್ಚುಗೆ ಸಾಗರ ಹರಿದು ಬಂದಿದೆ. ಅಲ್ಲದೆ ಗಲ್ಲಾಪೆಟ್ಟಿಗೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಬಾಚಿಕೊಂಡಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಇಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ. ದೇಶಾದ್ಯಂತ 7000 ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಿದೆ. ವಿದೇಶದಲ್ಲಿನ ಸ್ಕ್ರೀನ್ ಗಳನ್ನು ಸೇರಿಸಿ ಒಟ್ಟು 8000 ಸ್ಕ್ರೀನ್ಗಳಲ್ಲಿ ಕಾಂತಾರ ಬಿಡುಗಡೆ ಆಗಿದೆ. ದುಬಾರಿ ಟಿಕೆಟ್ ಬೆಲೆ ಮತ್ತು ಯಶಸ್ವಿ ಪ್ರೀಮಿಯರ್ ಶೋಗಳಿಂದ ಚಿತ್ರಕ್ಕೆ ಕೋಟಿ ಕೋಟಿ ಹರಿದುಬಂದಿದೆ. ಚಿತ್ರವು ಮೊದಲ ದಿನವೇ ಭಾರಿ ಕಲೆಕ್ಷನ್ ಮಾಡುತ್ತಿದೆ. ಇಂದು ಪ್ರೇಕ್ಷಕರರಿಂದ ಸೋಷಿಯಲ್ ಮೀಡಿಯಾಗಳಲ್ಲಿ ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬಂದಿದೆ.
ಮೊದಲ ಕಾಂತಾರ ಚಿತ್ರದ ಯಶಸ್ಸಿನ ನಂತರ ಹೊಂಬಾಳೆ ಫಿಲ್ಮ್ಸ್ ‘ಕಾಂತಾರ ಚಾಪ್ಟರ್-1’ 2023ರ ಆರಂಭದಲ್ಲಿ ಘೋಷಿಸಿತು. ಇದು ಮೊದಲ ಚಿತ್ರದ ಪ್ರೀಕ್ವೆಲ್ ಆಗಿದೆ. ರಿಷಬ್ ಶೆಟ್ಟಿ ಕಥೆ ಬರೆದು, ನಿರ್ದೇಶಿಸಿ ನಟಿಸಿದ ಈ ಚಿತ್ರ 125 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣಗೊಂಡಿದೆ. ಅರವಿಂದ್ ಕಶ್ಯಪ್ ಕ್ಯಾಮರಾ ವರ್ಕ್ ಹಾಗೂ ಅಜನೀಶ್ ಲೋಕನಾಥ್ ಸಂಗೀತವಿದೆ. ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮತ್ತು ಜಯರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾದವು, ಕ್ರಿ.ಶ.4-5 ಶತಮಾನದ ಕದಂಬರ ಆಳ್ವಿಕೆಯ ಸಮಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಮಾಡಲಾಗಿದೆ. ಅಂದಿನ ಕಾಲದ ಭೂತಕೋಲ ಆಚರಣೆಯನ್ನು ಕಥೆಯಲ್ಲಿ ಹೇಳಲಾಗಿದೆ.
ಸಿನಿಮಾ ನೋಡಿ ಅತ್ತ ಪ್ರಗತಿ ಶಟ್ಟಿ
‘ಕಾಂತಾರ: ಚಾಪ್ಟರ್ 1’ ಚಿತ್ರದ ವಿಶೇಷ ಶೋಗಳನ್ನು ಆಯೋಜನೆ ಮಾಡಲಾಗಿತ್ತು. ಈ ಶೋನಲ್ಲಿ ರಿಷಬ್ ಶೆಟ್ಟಿ ಅವರ ಜೊತೆ ಪತ್ನಿ ಪ್ರಗತಿ ಶೆಟ್ಟಿಯೂ ‘ಕಾಂತಾರ: ಚಾಪ್ಟರ್ 1’ ಸಿನಿಮಾನ ನೋಡಿದ್ದಾರೆ. ಸಿನಿಮಾ ನೋಡಿ ಪ್ರಗತಿ ಅವರು ಖುಷಿಯಿಂದ ಭಾವುಕರಾಗಿದ್ದು, ರಿಷಬ್ನ ತಬ್ಬಿಕೊಂಡು ಅತ್ತಿದ್ದಾರೆ. ರಿಷಬ್ ಅವರು ಈ ವೇಳೆ ಪತ್ನಿಯನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.