Actor Umesh: ಕನ್ನಡದ ಹಿರಿಯ ಹಾಸ್ಯ ನಟ ಎಂ.ಎಸ್. ಉಮೇಶ್ಗೆ ಕ್ಯಾನ್ಸರ್..!
ಕನ್ನಡದ ಹಿರಿಯ ಹಾಸ್ಯ ನಟ ಎಂ.ಎಸ್. ಉಮೇಶ್ ಅವರು ಶುಕ್ರವಾರ ಮನೆಯ ಸ್ನಾನಗೃಹದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿದಾಗ ಕ್ಯಾನ್ಸರ್ ಇರೋದು ದೃಢಪಟ್ಟಿದೆ.
ಉಮೆಶ್ ಅವರು ಮನೆಯ ಸ್ನಾನಗೃಹದಲ್ಲಿ ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಅವರನ್ನು ಬೆಂಗಳೂರಿನ ಶಾಂತಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿನ್ನಲೇಯಲ್ಲಿ ವೈದ್ಯರು ಸ್ಕ್ಯಾನಿಂಗ್ ಮಾಡಿದಾಗ ಉಮೇಶ್ ಅವರಿಗೆ ಕ್ಯಾನ್ಸರ್ ಇರೋದು ತಿಳಿದು ಬಂದಿದೆ. ಕ್ಯಾನ್ಸರ್ ಈಗ ಮೂರನೇ ಸ್ಟೇಜ್ ನಲ್ಲಿದೆ.
ಉಮೇಶ್ ಅವರಿಗೆ ಲಿವರ್ ಕ್ಯಾನ್ಸರ್ ಬಂದಿದೆ. ಕ್ಯಾನ್ಸರ್ ದೇಹದ ಬೇರೆ ಕಡೆಯು ಹರಡಿದೆ. ಕ್ಯಾನ್ಸರ್ ದೇಹಕ್ಕೆ ಹರಡಿರುವ ಕಾರಣ, ದೇಹದ ಗಾಯಕ್ಕೆ ಸರ್ಜರಿ ಮಾಡೋದು ಕಷ್ಟವಾಗಿದೆ. ಆದರೇ, ಚೇತರಿಕೆ ಆಗೋ ಸಾಧ್ಯತೆ ಹೆಚ್ಚಿದೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.
ಸದ್ಯ ಈ ವಿಚಾರ ತಿಳಿದು ಅವರ ಮನೆಯವರ ಜತೆಗೆ ಅಭಿಮಾನಿಗಳಿಗೂ ಆಘಾತವಾಗಿದ್ದು, ಶೀಘ್ರದಲ್ಲೇ ಚೇತರಿಸಿಕೊಳ್ಳುವಂತೆ ಹಾರೈಸುತ್ತಿದ್ದಾರೆ.