“ಪಾಂಗಳ ಜಂಕ್ಷನ್‌ನಲ್ಲಿ ಯೂಟ್ಯೂಬರ್‌ಗಳ ಮೇಲೆ ಅಮಾನವೀಯ ಹಲ್ಲೆ: ಮಾಧ್ಯಮಗಳ ನಿಜ ಮುಖ ಬಯಲು”

ಪಾಂಗಳ ಜಂಕ್ಷನ್‌ನಲ್ಲಿ
ನಡೆದಂತ ಅಮಾನವೀಯ ಘಟನೆ..ನಾಲ್ಕು ಜನ ಯ್ಯೂಟ್ಯೂಬರ್‌ಗಳ ಮೇಲೆ ಮಾರಾಣಾಂತಿಕ ಹಲ್ಲೆ.. ಸ್ನೇಹಿತರೆ.. ಈ ರೀತಿ
ಸೌಜನ್ಯ ಹೋರಾಟದ ಪೋಸ್ಟರ್‌ ಇದ್ದಂತಹ ಸೌಜನ್ಯ ಸೋದರ ಮಾವನ ಕಾರನ್ನು ಜಖಂ ಮಾಡಿ,ಗ್ಲಾಸ್‌ನಾ ಪುಡಿಪುಡಿ
ಮಾಡಿದ್ದು , ಲಕ್ಷ ಬೆಲೆ ಬಾಳುವ ಕ್ಯಾಂಎರಾ ಪುಡಿ ಪುಡಿ ಮಾಡಿ, ವರದಿ ಮಾಢ್ತಿದ್ದ ಕುಡ್ಲಾ ರಾಮ್‌ಪೇಜ್‌ ಅಜಯ್‌
ಅಂಚನ್‌, ಅಭಿಷೇಕ್‌, ಹಾಗೂ ಕ್ಯಾಮೆರಾ ಮ್ಯಾನ್‌, ಸಂಚಾರಿ ಸ್ಟುಡಿಯೋದ ಸಂತೋಷ್‌ ಮೇಲೆ ಹಲ್ಲೆ ನಡೆಸಿರೋ
ಘಟನೆ ಮಾತ್ರವಲ್ಲದೇ, ಪ್ರಾಣ ಬೆದರಿಕೆ ಹಾಕಿದ್ದು, ತಂದೆ ತಾಯಿಯನ್ನು ಕೆಟ್ಟ ಪದಗಳಿಂದ ನಿಂದಿಸಿದ್ದು, ಹೊಡಿ ಬಡಿ ಕಡಿ
ಪದಗಳಿಂದ ನಿಂಧನೆ ಮಾಡಿದ್ದು, ಇಷ್ಟೆಲ್ಲಾ ಗುಂಡಾಗಿರಿ ವರ್ತನೆ ತೋರಿದ್ರು, ನಮ್ಮ ಸೋ ಕಾಲ್ಡ್‌ ಮಾಧ್ಯಮಗಳು
ಮಾತ್ರ, ಯ್ಯೂಟ್ಯೂಬರ್‌ಗಳಿಗೆ ಧರ್ಮದೇಟು ಅನ್ನೋ ಪದಬಳಕೆ, ಹಾಗೂ ಯ್ಯೂಟ್ಯೂಬರ್‌ಗಳಿಗೆ ಗೂಸಾ ಅನ್ನೋ
ಸ್ಲಗ್‌ ಲೈನ್‌ಗಳನ್ನು ಹಾಕಿ ನಾನ್‌ಸೆನ್ಸ್‌ ಜರ್ನಲಿಸಂ ತೋರಿದ್ದು ಮಾತ್ರ ಇದೇನಾ ಪತ್ರಿಕಾ ಧರ್ಮ ಅಂತಾ ನಾಚಿಕೆಗೇಡು

ಅನ್ನಿಸ್ತು.. ಸ್ನೇಹಿತರೆ, ಪತ್ರಿಕಾ ವರದಿ ಮಾಢ್ತಿದ್ದ ಡಿಜಿಟಲ್‌ ಫ್ಲಾಟ್‌ಫಾರ್ಮ್‌ನಾ ವರದಿಗಾರರೇನು ರೌಡಿಗಳಲ್ಲ..
ಕಳ್ಳರಲ್ಲ.. ಯಾವುದೇ ಕ್ರಿಮಿನಲ್‌ ಪ್ರಕರಣಗಳಲ್ಲಿ ಗುರಿತಿಸಿಕೊಂಡವ್ರಲ್ಲ.. ಸಮಾಜ ವಿರೋಧಿಗಳು ಕೂಡ ಅಲ್ಲ.. ಆದ್ರೆ
ಅವ್ರನ್ನು ಕಳ್ಳರಂತೆ ಬಿಂಬಿಸಿ ಗೂಸಾ,, ಧರ್ಮದೇಟು ಅನ್ನೋ ಸಾಲುಗಳು ಮೂಲಕ ನಿಮ್ಮ ನೀಚ ಬುದ್ದಿಯನ್ನು ಸಮಾಜಕ್ಕೆ
ತೋರ್ತಾ ಇದ್ದೀರಿ ಅಷ್ಟೆ… ಖಾಸಗಿ ಮಾಧ್ಯಮದ ರಿಪೋರ್ಟರ್‌ ಮೇಲೆ ಅಲ್ಲಿನ ಸೌಜನ್ಯಾ ಹೋರಾಟಗಾರರು
ಥಳಿಸಿದ್ದಾರೆ ಅನ್ನೋ ಸುದ್ದಿ ಪ್ರಸಾರ ಮಾಡಿದ ಚಾನಲ್‌ ಮುಖ್ಯಸ್ಥರಿಗೆ ರಿಪೋರ್ಟರ್‌ ಮೇಲೆ ಧರ್ಮದೇಟು ಅನ್ನೋ
ಪದಗಳನ್ನು ಬಳಸಲಿಕ್ಕೆ ನಿಮ್ಮ ಪಕ್ಷಪಾತಿ ಬುದ್ದಿ ಒಪ್ಪಲಿಲ್ಲವೇ..?

ಶಾಂತಿಭಂಗ ಮಾದ್ತಿದ್ದಾರೆ..
ಸ್ನೇಹಿತರೆ.ಸತ್ಯಶೋಧನೆ ಅನ್ನೋ ಪದವನ್ನು ನಾನಿಲ್ಲಿ ಬಳಸ್ತಾ ಇದ್ದೀನಿ.ಈಗಾಗ್ಲೇ ಧರ್ಮಸ್ಥಳ ಗ್ರಾಮ ಸೌಜನ್ಯಾ ಕೇಸ್‌
ನಿಂದ ಹಿಡಿದು, ಇಂದಿನ ಈ ಭೀಮನ ಆರೋಪದರೆಗೂ ಮಾಧ್ಯಮಗಳ ಮಾಹಿತಿ ಸ್ಫೋಟದ ಬರದಲ್ಲಿ ಏಕಾಏಕಿಯಾಗಿ
ಅಪಪ್ಪಳಿಸುವ ತಳಬುಡವಿಲ್ಲದ ಸುದ್ದಿಗಳು, ಅವುಗಳನ್ನು ಸುಳ್ಳೆಂದು ಸಾಭೀತುಪಡಿಸುವ, ಇಲ್ಲಾ ಸತ್ಯ ಅಂತಾ
ಅರಚಾಡುವ ,ಯಾವುದು ಸತ್ಯ, ಯಾವುದು ಸುಳ್ಳು ಎಂದು ನಿಖರವಾಗಿ ಜಡ್ಜ್‌ ಮಾಡಲಾಗದ ಸಂಧಿಗ್ಧತೆಯ ನಡುವೆ
ಸತ್ಯದ ಅಸ್ತಿತ್ವಕ್ಕಾಗಿ ನಮ್ಮ ಯುವ ಸಮೂಹ ಒದ್ದಾಡ್ತಿದೆ.. ಆಡಳಿತ ಪಕ್ಷಗಳ ತಪ್ಪನ್ನು ತಿದ್ದೋದಕ್ಕೆ ವಿರೋಧ ಪಕ್ಷಗಳು
ಫಾರ್ಮ್‌ ಆಗೋದು.. ಹಾಗೇ, ಯಾರೇನೇ ವಿರೋಧಿಸಲಿ, ಕ್ಲಿನ್‌ ಚಿಟ್‌ ಪಡೆದ ಅದ್ರಿಂದ ಹೊರಬಂದೆರೆ ಇದಕ್ಕೊಂದು
ತಾತ್ಕಾಲಿಕ ಪರಿಹಾರ.. ಅದನ್ನು ಬಿಟ್ಟು ಈ ರೀತಿ ಗುಂಡಾ ರೌಡಿಸಂ ತೋರೋದಕ್ಕೆ ಇದೇನು ಪಾಕಿಸ್ತಾನ ಅಲ್ಲ.. ಬಿಗ್‌
ಬಾಸ್‌ ರಜತ್‌ ಇದೇ ಧರ್ಮಸ್ಥಳ ಸೌಜನ್ಯ ತಾಯಿಯ ಮನೆಗೆ ಭೇಟಿ ಕೊಟ್ಟರೆ.. ನಿನಗೂ ಅಪ್ಪ ಅಮ್ಮ ಹೆಂಡತಿ
ಮಕ್ಕಳಿದ್ದಾರೆ.. ಇದು ಮಂಡ್ಯ ಅಲ್ಲಾ, ಕರಾವಳಿ ಅನ್ನೋ ಪೋಸ್ಟ್‌ ಹಾಇ ಏನು ಸಾಮಾಜಿಕ ಸ್ವಾಸ್ತ್ಯ ಹಾಳು
ಮಾಡ್ತಿದ್ದೀರಾ..? ಅಥವಾ ಹೋರಾಟಗಾರರನೇನು ನಕ್ಸಲೇಟ್ಸ್‌ಗಳಾ..? ಅವ್ರು ನ್ಯಾಯಯುತವಾಗಿ ಇಲ್ಲಿವರೆಗೂ
ದಂಗೆಯೇಳದೆ ಹೋರಾಟವನ್ನೇ ಮಾಡ್ತಿದ್ದಾರಲ್ಲವಾ.? ಟಿಆರ್‌ಪಿಗೋಸ್ಕರ ಬೇಕಂದಾಗ ಸ್ಟೋರಿಗಳನ್ನು ಮಾಢೋ
ಸ್ಯಾಟಲೈಟ್‌ ಮೀಡಯಾಗಳಲ್ಲೇ ವರ್ಕ್‌ ಮಾಢಿ ಬಂದೋನು ಸ್ವಾಮಿ.. ಯಾವ ರೀತಿ ನಾನ್‌ಸೆನ್ಸ್‌ ಜರ್ನಲಿಸಂ ಇದೆ
ಅನ್ನೋದನ್ನು ನಾನು ಕಂಡಿದ್ದೇನೆ.. ಟಿವಿಯಲ್ಲೇ ಕುಂಟೆಬಿಲ್ಲೆ ಆಡಿದೋರನ್ನು ನೋಡಿದ್ದೇವೆ.. ಇದೇ ಖ್ಯಾತ ನಿರೂಪಕರು,
ಸೌಜನ್ಯ ಕೇಸ್‌ನಾ ಆಳವೇ ಗೊತ್ತಿಲ್ಲದೋರಿಗೆ, ನನ್ನ ಧರ್ಮದ ಬಗ್ಗೆ ಯಾಕೆ ಸಮಾಜದಲ್ಲಿ ಚರ್ಚೆಯಾಗ್ಬೇಕು ಅನ್ನೋ
ಪ್ರಶ್ನೆ ಕೇಳ್ಥಾರೆ.. ಅವ್ರ ಬಗ್ಗೆ ಇದ್ದ ಕಿಂಚಿತ್ತೂ ಗೌರವವೂ ಹೋಗುತ್ತಿದೆ… ಇದೇ ಮಾಧ್ಯಮಗಳಲ್ಲಿ ಆ ಹೀರೋಇನ್‌
ಇವನ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ.. ಈ ಮಹಿಳೆ ಆತನೊಂದಿಗೆ ಸಂಬಂಧ ಇಟ್ಟಿಕೊಂಡು ಪರಾರಿಯಾಗಿದ್ದಾಳೆ
ಅನ್ನೋ ಥರ್ಡ್‌ಗ್ರೇಡ್‌ ನ್ಯೂಸ್‌ ಮಾಡ್ಬೇಕಾದ್ರೆ, ಇನ್ನೊಬ್ಬರ ಖಾಸಗಿ ವಿಷ್ಯಗಳ್ಯಾಕೆ ಪಬ್ಲಿಕ್‌ನಲ್ಲಿ ಚರ್ಚೆಯಾಗ್ಬೇಕು
ಅಲ್ಲವೇ.. ಒಬ್ಬ ಸ್ಟಾರ್‌ ವ್ಯಕ್ತಿ ಸಾಯೋ ಮುನ್ನವೇ ಇಹಲೋಕ ತ್ಯಜಿಸಿದ ಸ್ಟಾರ್‌ ಡ್ಯಾಶ್‌ ಡ್ಯಾಶ್‌ ಅಂತಾ ಬ್ರೇಕಿಂಗ್‌
ಪಾಯಿಂಟ್ಸ್‌ನಾ ಮುಂಚಿತವಾಗಿ ಪ್ಯಾಕೇಜ್‌ ಮಾಡಿ ಇಟ್ಕೊಳ್ಳೋ ಈ ಮಾಧ್ಯಮಗಳಲ್ಲಿ ಎಲ್ಲಿದೆ ಸ್ವಾ,ಮಿ ಪತ್ರಿಕಾ
ಧರ್ಮ.. ನಾನಿಲ್ಲಿ ಯಾರದ್ದೋ ಒಂದ್ಕಡೆ ತಪ್ಪು ಅಂತಾ ಸಮರ್ಥಿಸಿಕೊಳ್ಥಾ ಇಲ್ಲ.. ಆದ್ರೆ, ನೀವೆಲ್ಲರೂ ಸತ್ತಂತೆ
ಬದುಕಿದ್ದಾಗ್ಲೂ ಕೂಡ ಕೆಲವು ಯ್ಯೂಟ್ಯೂಬರ್‌ಗಳು ಪಟ್ಟು ಬಿಡದಂತೆ ಸುದ್ದಿ ಮಾಡಿದ್ದಾರೆ.. ಅವ್ರ ಪರವಾಗಿ ನಿಂತ
ಕೆಲವು ವೀಕ್ಷಕರು, ಒಂದಿಷ್ಟೂ ಅವ್ರಿಗೆ ಅನ್ನದ ರೂಪದಲ್ಲಿ ಸಹಾಯ ಮಾಡಿದ್ದಾರೆ.. ಕೆಲವು ಮಾಧ್ಯಮಗಳು ಈಗ ಬಂದು
ಧರ್ಮ ರಕ್ಷಣೆಯ ಹೆಸ್ರಲ್ಲಿ ಯಾಕೆ ಪರೋಕ್ಷವಾಗಿ ಕಳ್ಳರಂತೆ ಜನ್ರ ಮುಂದೆ ಬೆತ್ತಲಾಗ್ತಾ ಇದ್ದೀರಿ..
ಸ್ನೇಹಿತರೆ.. ಇದೇ ಬೆಳ್ತಂಗಡಿ ಪೊಲೀಸರು 2000 ನೇ ಇಸವಿಯಿಂದ 2015 ವರೆಗೆ ದಾಖಲಾದ ಯುಡಿಆರ್‌.. ಅಪರಿಚಿತ
ಸಾವುಗಳ ದಾಖಲೆಯನ್ನೇ ನಾಶ ಮಾಡಿದ್ದಾರೆ..,ಅಪರಚಿತ ಶವಗಳ ಮರಣೋತ್ತರ ಪರೀಕ್ಷೆಯ ವರದಿಗಳು,

ನೋಟೀಸ್‌ಗಳು, ಮೃತ ವ್ಯಕ್ತಿಗಳ ಫೋಟೋಗಳು, ಎಸ್‌ಐಟಿ ನೀಡಬೇಕಿದ್ದ ಬೆಳ್ತಂಗಡಿ ಪೊಲೀಸ್‌ ಸ್ಟೇಷನ್‌ ನಲ್ಲಿ
ಯುಡಿಆರ್‌ ದಾಖಲೆಗಳೇ ಇಲ್ಲ… ಇದೊಂದು ಆಘಾತಕಾರಿ ವಿಷ್ಯ ಕೂಡ ಹೌದು.. ಇದು ನ್ಯಾಷನಲ್‌ ,ಮೀಡಿಯಾದಲ್ಲಿ
ಚರ್ಚೆಯಾಗ್ತಿದೆ. ಆದ್ರೆ. ನಮ್ಮ ಮಾಧ್ಯಮಗಳಿಗೆ ಕಣ್ಣಿಲ್ಲವೇ..? ಪ್ರಶ್ನೆ ಮಾಡುವವರನ್ನು ಧರ್ಮದ ಹೆಸ್ರಲ್ಲಿ
ಹೊರಗಿನವರನ್ನಾಗಿ ಮಾಡ್ತೀರಿ.. ಎಷ್ಟೋ ಧರ್ಮಗುರುಗಳ ಅನಾಚಾರ ಅಕ್ರಮ, ಆಶ್ಲೀಲ ಚುಟುವಟಿಗಳನ್ನು ನಾವೇ ಕೇಳಿ,
ಕಂಡು ಬೆಪ್ಪಾಗಿದ್ದೀವಿ..ನಮಗೆ ಈ ಕ್ಷೇತ್ರದ ಮೇಲೆ ಅಪಾರ ನಂಬಿಕೆ ಇದೆ.. ಆದ್ರೆ., ಈ ಕೇಸ್‌ನಲ್ಲಿ ಯಾವುದು ಸತ್ಯ
ಅನ್ನೋದನ್ನ ಮಾತ್ರ ನಾವು ತಿಳಿಯಬೇಕಿದೆ… ಇಲ್ಲದಿದ್ದರೆ. ಕೇವಲ ಕಣ್ಣುದ್ದು ಕರುಡರಂತೆ ನಾವ್ಯಾಕೆ ಎಲ್ಲವೂ

Rakesh arundi

Leave a Reply

Your email address will not be published. Required fields are marked *

ನೀವು ತಪ್ಪಿಸಿಕೊಂಡಿರಬಹುದು