ಯೆಮನ್‌ನಲ್ಲಿ ಮರಣದಂಡನೆ ಶಿಕ್ಷೆಯಿಂದ ಪಾರಾದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ – ಕ್ಷಮಾದಾನ ಮತ್ತು ಸುರಕ್ಷಿತ ವಾಪಸ್‌

ಸ್ನೇಹಿತರೆ ಇದೊಂದು ಸ್ಪೋಟಕ ಸುದ್ದಿ.ಕಾರಣ ಯೆಮೆನ್‌ ದೇಶದಲ್ಲಿ ಒಬ್ಬ ವ್ಯಕ್ತಿಯನ್ನು ಧಾರುಣವಾಗಿ ಹತ್ಯೆ ಮಾಢಿ
ಛಿದ್ರ ಛಿದ್ರವಾಗಿ ಕತ್ತರಿಸಿ ಪಾಲಿಥೀನ್‌ ಚೀಲದಲ್ಲಿ ತುಂಬಿ ಮನೆ ಸಮೀಪದ ನೀರಿನ ಟ್ಯಾಂಕರ್‌ಗೆ ಎಸೆದಿದ್ದ ಆರೋಪದಲ್ಲಿ
ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ನಿಮಿಷಾ ಪ್ರಿಯ. ಸದ್ಯ, ಅಚ್ಚರಿಯ ಬೆಳವಣಿಗೆ ಅಂದ್ರೆ, ನಿಮಿಷಾ ಪ್ರಿಯ
ಮರಣದಂಡನೆಯಿಂದ ಪಾರಾಗಿದ್ದಾರೆ.. ಈ ಶಿಕ್ಷೆಯಿಂದ ರಿಲೀಫ್‌ ಸಿಕ್ಕಿರೋ ನಿಮಿಷಾ ಸದ್ಯದಲ್ಲೇ ಜೈಲಿನಿಂದ ರಿಲೀಸ್‌
ಆಗಲಿದ್ದಾರೆ.. ವಾಪಾಸ್‌ ಕೇರಳಕ್ಕೆ ಕರೆತರುವ ಎಲ್ಲಾ ಬೆಳವಣಿಗೆಗಳು ಕೂಡ ನಡೀತಾ ಇವೆ.. ಹಾಗಾದ್ರೆ, ನಿಮಿಷಾ ಪ್ರಿಯ
ರಿಲೀಸ್‌ಗೆ ಮಧ್ಯಸ್ತಿಕೆ ವಹಿಸಿದ್ದು ಯಾರು..? ಕೊಟ್ಟ ದುಬಾರಿ ಹಣ ಎಷ್ಟು..?ಕ್ಷಮದಾನಕ್ಕಾಗಿ ಕೊಟು ಈ ರಕ್ತದ ಹಣ
ಎಂದರೇನು ಎಲ್ಲವನ್ನು ಡಿಟೈಲ್‌ ಆಗಿ ನೋಢ್ಥಾ ಹೋಗೋಣ..
ಯೆಮನ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವ್ರ ಶಿಕ್ಷೆ ರದ್ದುಗೊಂಡಿದೆ ಅಂತಾ
 ಕ್ರಿಶ್ಚಿಯನ್ ಧರ್ಮೋಪದೇಶಕ ಕೆಎ ಪಾಲ್ ಅವ್ರ ವೀಡಿಯೋ ಮೂಲಕ ಸಂದೇಶ ಹರಿಬಿಡ್ತಿದ್ದಂತೆ, ಕೇರಳದಲ್ಲಿದ್ದ ನಿಮಿಷಾ
ಕುಟುಂಬಸ್ಥರು ನಿಟ್ಟುಸಿರು ಬಿಟ್ಟರು.. ನಿಮಿಷಾ ಪ್ರಿಯಾ ಅವರ ಕುಟುಂಬಕ್ಕೆ ಸಹಾಯ ಮಾಡಲು ಕೇಂದ್ರ ಸರ್ಕಾರ ಒಬ್ಬ
ವಕೀಲರನ್ನು ನೇಮಿಸಿದ್ದು ನಿಮಿಷಾ ಪ್ರಿಯಾ ಬಿಡುಗಡೆಗೆ ಸಹಾಯ ಮಾಡಿತು. ಇನ್ನು ಯೆಮೆನ್ ಕಾನೂನಿನ ಪ್ರಕಾರ
ಹತ್ಯೆಗೊಳಗಾದ ಕುಟುಂಬಕ್ಕೆ ಸಹಾಯ ಕೂಡ ಮಾಡಲಾಗ್ತಿದೆ… ಇದರೊಂದಿಗೆ, ಷರಿಯಾ ಕಾನೂನಿನಡಿಯಲ್ಲಿ ನಿಮಿಷಾ
ಅವರಿಗೆ ಕ್ಷಮಾದಾನ ನೀಡಲಾಗ್ತಿದೆ. ಇನ್ನು ನೇರವಾಗಿ ನಿಮಿಷಾ ಪ್ರಿಯಾ ಭಾರತಕ್ಕೆ ಬರೋದಿಲ್ಲ.. ಸದ್ಯ ಯೆಮೆನ್‌ನಾ ಸನಾ
ಜೈಲಿನಲ್ಲಿರೋ ನಿಮಿಷಾ ಪ್ರಿಯಾಳನ್ನು ತಕ್ಷಣಕ್ಕೆ ಓಮನ್‌, ಜೆಡ್ಡಾ, ಇರಾನ್‌ ಅಥವಾ ಟರ್ಕಿಗೆ ಸುರಕ್ಷಿತವಾಗಿ ವಾಪಾಸ್‌
ಕಳಿಸಲಿಕ್ಕೆ ಭಾರತ ಸರ್ಕಾರದೊಂದಿಗೆ ಲಾಜಿಸ್ಟಿಕ್‌ ವ್ಯವಸ್ಥೆ ಮಾಡಬಹುದು ಅನ್ನೋ ನಿರೀಕ್ಷೆಯಲ್ಲಿ ಕ್ಷಿಶ್ಚಿಯನ್‌
ಧರ್ಮಗುರುಗಳು ಇದ್ದಾರೆ..
ಸ್ನೇಹಿತರೆ..ಕ್ಷಮದಾನ ಅಂದ್ರೆ, ಕೇವಲ ಅನುಕಂಪದ ಆಧಾರದಲ್ಲಿ ನೀಡುವಂತದಲ್ಲ.. ಮುಸ್ಲೀಂನಾ ಅನೇಕ
ಧರ್ಮಗುರುಗಳು, ಮುಖಂಡರು ಈ ಕೇಸ್‌ನಲ್ಲಿ ನಿಮಿಷಾ ರಕ್ಷಣೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಿದ್ದಿದೆ..
ಮೋದಿ ಕೂಡ ಈ ಕೇಸ್‌ನಲ್ಲಿ ಮಧ್ಯಸ್ಥಿಕೆ ವಹಿಸಿ ಯೆಮೆನ್‌ ಸರ್ಕಾರ ಹಾಗೂ ಹತ್ಯಗೊಳಗಾದ ತಲಾಲ್‌ ಅಬ್ದೋ ಮಹದಿ
ಕಟುಂಬಕ್ಕೆ ಬರೋಬ್ಬರಿ 18 ಕೋಟಿ ರಕ್ತದ ಹಣ ಸಂಗ್ರಹ ಮಾಢಿತ್ತು.. ಆದ್ರೂ ಆ ಕುಟಂಬ ಮಾತ್ರ ನಿಮಿಷಾಳಿಗೆ
ಕ್ಷಮಾಧಾನ ನೀಡುವ ಕರುಣೆ ತೋರಿರಲಿಲ್ಲ.. ಸ್ನೇಹಿತರೆ ರಕ್ತದ ಹಣ ಅಂದ್ರೆ, ಕ್ಷಮಾದಾನಕ್ಕೆ ಬದಲಾಗಿ ಕೊಲ್ಲಲ್ಪಟ್ಟ
ವ್ಯಕ್ತಿಯ ಕುಟುಂಬಕ್ಕೆ ಪಾವತಿಸುವ ಹಣವನ್ನು ‘ರಕ್ತದ ಹಣ’.. ಷರಿಯಾ ಕಾನೂನಿನಲ್ಲಿರುವ ಈ ಅಂಶವನ್ನು ಯೆಮೆನ್,
ಸೌದಿ ಅರೇಬಿಯಾ, ಇರಾನ್ ಮತ್ತು ಪಾಕಿಸ್ತಾನ ಸೇರಿದಂತೆ ಇತರ ಇಸ್ಲಾಮಿಕ್ ದೇಶಗಳಲ್ಲಿ ಅನುಸರಿಸಲಾಗುತ್ತದೆ.
ಕೊಲೆಯಾದ ವ್ಯಕ್ತಿಯ ಕಾನೂನುಬದ್ಧ ಉತ್ತರಾಧಿಕಾರಿಗಳು ಈ ಪರಿಹಾರವನ್ನು ಕೋರುವ ಅಥವಾ ಸ್ವೀಕರಿಸುವ ಹಕ್ಕನ್ನು
ಹೊಂದಿರುತ್ತಾರೆ. ಕುರಾನ್‌ನ ಅಧ್ಯಾಯ 4, ಆಯತ್‌ 92ರಲ್ಲಿ, “ತಪ್ಪಾಗಿ ನಂಬಿಕೆಯುಳ್ಳ ಗುಲಾಮನನ್ನು ಕೊಂದವನು
ನಂಬಿಕೆಯುಳ್ಳ ಗುಲಾಮನನ್ನು ಬಿಡುಗಡೆ ಮಾಡಬೇಕು ಮತ್ತು ಸತ್ತವರ ಕುಟುಂಬಕ್ಕೆ ರಕ್ತದ ಹಣವನ್ನು ಪಾವತಿಸಬೇಕು”
ಎಂದು ಹೇಳುತ್ತದೆ. ಅಲ್ಲದೇ “ಸತತ ಎರಡು ತಿಂಗಳು ಉಪವಾಸ ಮಾಡುವ ಅವಕಾಶವನ್ನೂ ನೀಡಲಾಗಿದೆ. ಆದಾಗ್ಯೂ,
ಎರಡು ತಿಂಗಳು ಉಪವಾಸ ಮಾಡುವ ಅವಕಾಶವು, ಈ ಸಂದರ್ಭದಲ್ಲಿ ನಿಮಿಷಾ ಪ್ರಿಯಾ ಅವರನ್ನು ಉಳಿಸುವುದಿಲ್ಲ.
ಇದೆಲ್ಲದಕ್ಕೂ ಒಪ್ಪಿಕೊಂಡಿದ್ರು, ಜುಲೈ 16 ಕ್ಕೆ ಮರಣದಂಡನೆ ನೀಡಿದ್ದನ್ನು ಮುಂದೂಡಿತ್ತೇ ಹೊರತು ಶಿಕ್ಷೆ ರದ್ದು
ಮಾಡಿರಲಿಲ್ಲ.. ಇದೀಗ ಈ ವೀಡಿಯೋ ಮೂಲಕ ಗುಡ್‌ ನ್ಯೂಸ್‌ ಕೊಟ್ಟಿರೋ ಪೌಲ್‌ ಕೇರಳ ಜನತೆಗೆ ಫಂಡಿಂಗ್‌
ಮಾಡಿದ ಹೋರಾಟಗಾರರಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ.
ಕೇರಳದ ಪ್ರಭಾವಿ ಸುನ್ನಿ  ಮುಸ್ಲಿಂ ಧಾರ್ಮಿಕ ಗುರು
ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಮಧ್ಯಪ್ರವೇಶಿಸಿದ್ದಾರೆ. ಅವರು ಯೆಮೆನ್‌ನಲ್ಲಿರುವ ಧಾರ್ಮಿಕ

ಮುಖಂಡ ಶೇಖ್ ಹಬೀರ್ ಉಮರ್ ಅವರೊಂದಿಗೆ ಸಭೆ ನಡೆಸಿದ ಪರಿಣಾಮವಾಗಿ ಸೇಫ್‌ ಅಗಿದ್ದ ನಿಮಿಷಾಗೆ ಕಂಪ್ಲೀಟ್‌
ರಿಲೀಫ್‌ ಸಿಕ್ಕಿದೆ.. ಇನ್ನು ಮುಂದೆ, ಕ್ಷಮದಾನದ ರಕ್ತದ ಹಣವನ್ನು ಮೆಹ್ದಿ ಕುಟುಂಬಕ್ಕೆ ಕೊಟ್ಟು ಭಾರತಕ್ಕೆ
ವಾಪಾಸಾಗಬೇಕಾಗಿದೆ..
ಸ್ನೇಹಿತರೆ.. ನಿಮಗೆಲ್ಲಾ ಈ ಕೇಸ್‌ನಾ ಭೀಕರತೆ ಮತ್ತೊಮ್ಮೆ ನೆನಪಿಸಿಬಿಡ್ಥೀನಿ..
ನಿಮಿಷಾ ಪ್ರಿಯಾ ಯೆಮನ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನರ್ಸ್. ಯೆಮನ್ ನಾಗರಿಕ ತಲಾಲ್ ಅಬ್ದೋ ಮೆಹದಿ
ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದಾರೆ. ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾ, 2017 ರಲ್ಲಿ ಕೊಲೆ
ಆರೋಪದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಅದಕ್ಕೂ ಮುನ್ನ ಅವರು ಹಲವಾರು ವರ್ಷಗಳ ಕಾಲ ಆ ದೇಶದಲ್ಲಿ
ನರ್ಸ್ ಆಗಿ ಕೆಲಸ ಮಾಡಿದ್ದರು.
ತಲಾಲ್ ಅವರ ಬೆಂಬಲದೊಂದಿಗೆ, ನಿಮಿಷಾ 2015ರ ಏಪ್ರಿಲ್‌ನಲ್ಲಿ ವಿದೇಶದಲ್ಲಿ ತನ್ನ ಕನಸಿನ ಚಿಕಿತ್ಸಾಲಯವನ್ನು
ತೆರೆದರು. ಅಲ್ಲಿ ಅವರು ಮಾನಸಿಕ, ದೈಹಿಕ ಮತ್ತು ಆರ್ಥಿಕ ಕಿರುಕುಳವನ್ನು ಅನುಭವಿಸಿದ್ದಾರೆಂದು ಆರೋಪಿಸಲಾಗಿದೆ.
ತಲಾಲ್ ಕ್ಲಿನಿಕ್‌ನಲ್ಲಿ ಶೇ.33 ರಷ್ಟು ಪಾಲನ್ನು ಪಡೆಯಲು ಸುಳ್ಳು ದಾಖಲೆ ಸೃಷ್ಟಿಸಿದ್ದ. ಆಕೆಯ ಪಾಸ್‌ಪೋರ್ಟ್
ಅನ್ನು ವಶಪಡಿಸಿಕೊಂಡಿದ್ದ. ಕಾನೂನುಬದ್ಧವಾಗಿ ಮದುವೆಯಾಗಿದ್ದಾವೆಂದು ಸೂಚಿಸಲು ವಿವಾಹ ಪ್ರಮಾಣಪತ್ರವನ್ನು
ಸಹ ನಕಲಿ ಮಾಡಿದ್ದ. ಮಹ್ದಿ ತನ್ನ ಮೇಲೆ ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಿಮಿಷಾ
ಆರೋಪಿಸಿದ್ದರು.
2017ರ ಜುಲೈನಲ್ಲಿ ನಿಮಿಷಾ ಜೈಲಿಗೆ ಭೇಟಿ ನೀಡಿದಾಗ, ತನ್ನ ಪಾಸ್‌ಪೋರ್ಟ್ ಅನ್ನು ಮರಳಿ ಪಡೆಯಲು ಮಹ್ದಿಗೆ
ನಿದ್ರಾಜನಕ ಇನ್‌ಜೆಕ್ಷನ್ ಚುಚ್ಚಿದರು. ಪ್ರಮಾಣ ಅತಿಯಾದ್ದರಿಂದ ವ್ಯಕ್ತಿ ಮೃತಪಟ್ಟಿದ್ದ. ಮತ್ತೊಬ್ಬ ನರ್ಸ್ ಸಹಾಯ
ಪಡೆದು ಮೃತದೇಹ ವಿಲೇವಾರಿಗೆ ಮುಂದಾಗಿದ್ದರು. ದೇಹವನ್ನು ಕತ್ತರಿಸಿ ನೀರಿನ ಟ್ಯಾಂಕ್‌ನಲ್ಲಿ ಭಾಗಗಳನ್ನು ವಿಲೇವಾರಿ
ಮಾಡುವಂತೆ ಸೂಚಿಸಿದ್ದ. ಇಬ್ಬರೂ ತಲೆಮರೆಸಿಕೊಂಡಿದ್ದರು. ಕೊನೆಗೆ ಅವರನ್ನು ಪೊಲೀಸರು ಬಂಧಿಸಿದರು.
ಕೊಲೆ ಪ್ರಕರಣದಲ್ಲಿ ಪ್ರಿಯಾಳನ್ನು ಬಂಧಿಸಿ ಯೆಮನ್‌ನಲ್ಲಿ ವಿಚಾರಣೆ ನಡೆಸಲಾಯಿತು. 2020 ರಲ್ಲಿ, ಸ್ಥಳೀಯ
ನ್ಯಾಯಾಲಯವು ಆಕೆಗೆ ಒಮ್ಮೆ ಅಲ್ಲ, ಮೂರು ಬಾರಿ ಮರಣದಂಡನೆ ವಿಧಿಸಿತು. ನಂತರ ಮೇಲ್ಮನವಿ ನ್ಯಾಯಾಲಯವು
ಒಂದು ಶಿಕ್ಷೆಯನ್ನು ರದ್ದುಗೊಳಿಸಿತು. ಆದಾಗ್ಯೂ, ದೇಶದ ಸುಪ್ರೀಂ ಕೋರ್ಟ್ ಉಳಿದ ಎರಡು ಶಿಕ್ಷೆಯನ್ನು ಎತ್ತಿಹಿಡಿಯಿತು.
ಯೆಮನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ, ಕಳೆದ ವರ್ಷ ಆಕೆಗೆ ಮರಣದಂಡನೆಯನ್ನು ಅನುಮೋದಿಸಿದರು. ಪ್ರಿಯಾ ಪ್ರಸ್ತುತ
ಸನಾ ಕೇಂದ್ರ ಜೈಲಿನಲ್ಲಿದ್ದಾರೆ. ಈ ವರ್ಷದ ಜನವರಿಯಲ್ಲಿ, ಹೌತಿ ನಿಯಂತ್ರಿತ ಸುಪ್ರೀಂ ಪೊಲಿಟಿಕಲ್ ಕೌನ್ಸಿಲ್‌ನ ಅಧ್ಯಕ್ಷ
ಮಹ್ದಿ ಅಲ್-ಮಶಾತ್ ಅವರು ಮರಣದಂಡನೆಯನ್ನು ಅನುಮೋದಿಸಿದರು.
ಕೊಚ್ಚಿಯಲ್ಲಿ ಮನೆಕೆಲಸ ಮಾಡುತ್ತಿರುವ ನಿಮಿಷಾಳ ತಾಯಿ ಪ್ರೇಮಾ ಕುಮಾರಿ, ಸಂಘರ್ಷಪೀಡಿತ ಯೆಮನ್‌ಗೆ ಪ್ರಯಾಣ
ನಿಷೇಧದಿಂದ ವಿನಾಯಿತಿ ಪಡೆಯಲು ಕಳೆದ ವರ್ಷ ಡಿಸೆಂಬರ್‌ನಲ್ಲಿ ದೆಹಲಿ ಹೈಕೋರ್ಟ್ ಅನ್ನು ಸಂಪರ್ಕಿಸಿದರು. ಮಹ್ದಿ
ಅವರ ಕುಟುಂಬದೊಂದಿಗೆ ಮನವಿ ಮಾಡಲು ಅವರು 2024 ರಲ್ಲಿ ಅಂತಿಮ ಪ್ರಯತ್ನವಾಗಿ ಯೆಮನ್‌ಗೆ ಪ್ರಯಾಣ
ಬೆಳೆಸಿದರು. ಯೆಮನ್‌ನ ರಾಜಧಾನಿ ಸನಾಗೆ ತೆರಳಿದ್ದು, ಕಳೆದ ವರ್ಷದಿಂದ ಶಿಬಿರದಲ್ಲಿದ್ದಾರೆ. ಜೈಲಿನಲ್ಲಿ ಮಗಳನ್ನು
ಭೇಟಿಯಾಗಿದ್ದಾರೆ. ಮಗಳನ್ನು ಶಿಕ್ಷೆಯಿಂದ ಪಾರು ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ..
2020 ರಲ್ಲಿ ರಚಿಸಲಾದ ಗ್ರೂಪ್ ಇದು. ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್, ನರ್ಸ್ ಜೀವ
ಉಳಿಸುವ ಪ್ರಯತ್ನಗಳನ್ನು ಮುನ್ನಡೆಸಿದೆ. ದೇಣಿಗೆ ಮತ್ತು ಕ್ರೌಡ್‌ಫಂಡಿಂಗ್ ಮೂಲಕ, ಕೌನ್ಸಿಲ್ 1 ಮಿಲಿಯನ್ ಡಾಲರ್

ಸಂಗ್ರಹಿಸಿದೆ. ಮೃತ ವ್ಯಕ್ತಿಯ ಕುಟುಂಬದೊಂದಿಗೆ ಮಾತುಕತೆ ನಡೆಸಲು ಯೆಮನ್ ಮೂಲದ ಸಾಮಾಜಿಕ ಕಾರ್ಯಕರ್ತ
ಸ್ಯಾಮ್ಯುಯೆಲ್ ಜೆರೋಮ್ ಭಾಸ್ಕರನ್ ಅವರನ್ನು ನಾಮನಿರ್ದೇಶನ ಮಾಡಿದೆ. 

ಕಿಸಾಸ್‌ ಕಾನೂನು ಏನು ಹೇಳುತ್ತೆ?

ಯೆಮನ್‌ ದೇಶದಲ್ಲಿ ಇಸ್ಲಾಮಿಕ್‌ ಕಾನೂನು ಇದೆ. ಕಿಸಾಸ್‌ ಎಂದರೆ, ಕೊಲೆಯಾದ ವ್ಯಕ್ತಿಯನ್ನು ಅಪರಾಧಿ
ಸ್ಥಾನದಲ್ಲಿರುವವರು ಯಾವ ರೀತಿ ಕೊಂದಿದ್ದಾರೋ ಅದೇ ರೀತಿಯ ಶಿಕ್ಷೆಯನ್ನು ನೀಡಬೇಕೆಂದು ಹೇಳುತ್ತದೆ.
ಸಾಮಾನ್ಯವಾಗಿ ಇದು ಮರಣದಂಡನೆಯಾಗಿರುತ್ತದೆ.

Rakesh arundi

Leave a Reply

Your email address will not be published. Required fields are marked *

ನೀವು ತಪ್ಪಿಸಿಕೊಂಡಿರಬಹುದು