Chikkamagaluru: ಸಂಸಾರದಲ್ಲಿ ಕಲಹ: ಪತ್ನಿಯನ್ನು ಬರ್ಬರವಾಗಿ ಕೊಂದ ಪತಿ
ಸಂಸಾರದಲ್ಲಿನ ಕಲಹಕ್ಕೆ ಪತ್ನಿಯನ್ನೇ ಪತಿ ಭೀಕರವಾಗಿ ಕೊಚ್ಚಿ ಕೊಂದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಚಿಕ್ಕನಾವಂಗಲ ಗ್ರಾಮದಲ್ಲಿ ನಡೆದಿದೆ.
ತನು (25) ಕೊಲೆಯಾದ ಮಹಿಳೆ, ರಮೇಶ್ ಕೊಲೆಗೈದ ಪತಿ. ಮನೆಯ ರೂಮಿನ ತುಂಬೆಲ್ಲ ರಕ್ತ ಚೆಲ್ಲಿದ್ದು, ರಕ್ತದ ಮಡುವಿನಲ್ಲಿ ಪತ್ನಿಯ ಶವ ಪತ್ತೆಯಾಗಿದೆ.
7 ವರ್ಷದ ಹಿಂದೆ ಮದುವೆಯಾಗಿದ್ದ ಈ ಜೋಡಿಗೆ 6 ವರ್ಷದ ಗಂಡು ಮಗುವಿದೆ. ಕಳೆದ ಎರಡು ಮೂರು ವರ್ಷಗಳಿಂದ ಕಲಹ ಶುರುವಾಗಿತ್ತು. ಇದೇ ಕಾರಣಕ್ಕೆ ತನು ಪತಿಯಿಂದ ದೂರವಾಗಿ ಪ್ರತ್ಯೇಕ ಮನೆಯಲ್ಲಿ ವಾಸ ಮಾಡುತ್ತಿದ್ದಳು ಎನ್ನಲಾಗಿದೆ.
ಬುಧವಾರ ರಾತ್ರಿ ಕುಡಿದು ಬಂದ ರಮೇಶ್ ಪತ್ನಿಯನ್ನ ಕ್ರೂರವಾಗಿ ಕೊಲೆ ಮಾಡಿದ್ದಾರೆ. ಸದ್ಯ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.