Hubballi:ಮಹಿಳೆಯರ ಒಳಉಡುಪು ಕದಿಯೋ ವ್ಯಕ್ತಿ.! ಹುಬ್ಬಳ್ಳಿಯ ಸೈಕೋ ಪಾಥ್ ಲಾಕ್..!
ಕಾಮಕ್ಕೆ ಕಣ್ಣಿಲ್ಲ ಅಂತಾ ಯಾವ ವಾತ್ಸಾಯನದ ಪುಸ್ತಕದಲ್ಲಿ ಬರೆದಿದೆಯೋ ಏನೋ ಗೊತ್ತಿಲ್ಲ. ಆದ್ರೆ, ಇಲ್ಲೊಬ್ಬ ವಿಕೃತ ಕಾಮಿಗೆ ಹೆಣ್ಣು ಯಾವುದು, ಅವ್ರು ಧರಿಸೋ ಬಟ್ಟೆ ಯಾವುದು ಅನ್ನೋದು ಗೊತ್ತಾಗ್ತಿಲ್ಲ. ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಮನೆ ಹೊರಗೆ ಒಣ ಹಾಕಿದ ಒಳಉಡುಪುಗಳನ್ನು ಕದಿಯೋ ಸೈಕೋ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಬೆಂಡಿಗೇರಿ ಠಾಣೆಯ ಪೊಲೀಸರು ಈತನನ್ನು ಬಂಧಿಸಿದ್ದಾರೆ. ರಾತ್ರಿ ಹೊತ್ತಲ್ಲಿ ಯಾವ ಮನೆ ಹೆಣ್ಣು ಮಕ್ಕಳು ಒಳಉಡುಪುಗಳನ್ನು ಮನೆ ಮುಂದೆ ಒಣ ಹಾಕ್ತಾರೋ,ಅಂತಹ ಮನೆ ಮುಂದಿನ ಬಟ್ಟೆಗಳನ್ನು ಹೊಂಚು ಹಾಕಿ ಕದಿಯುತ್ತಿದ್ದ.
ಕದ್ದ ಒಳಉಡುಪುಗಳನ್ನು ಒಂದು ವಾರದ ನಂತ್ರ ಮತ್ತೆ ಅದೇ ಮನೆಮುಂದೆ ಎಸೆದು ಹೋಗುತ್ತಿದ್ದ.
ಕದ್ದ ಒಳಉಡುಪುಗಳನ್ನು ಪ್ಯಾಂಟ್ ಒಳಗೆ ಹಾಕಿಕೊಂಡು ವಿಕೃತಾನಂದ ಪಡುತ್ತಿದ್ದ. ಇದೀಗ ಆರೋಪಿ ಕಾರ್ತಿಕ್ನನ್ನು ಬಂಧಿಸಲಾಗಿದೆ. ಈತ ಹುಬ್ಬಳ್ಳಿಯ ತಂತಿ ನಗರದ ನಿವಾಸಿ, ಸೌಂಡ್ ಸಿಸ್ಟಂ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಕಾರ್ತಿಕ್ ಎಂದು ಗುರುತು ಪತ್ತೆ ಹಚ್ಚಲಾಗಿದೆ. ಎಸ್ಎಸ್ಎಲ್ಸಿ ವರೆಗೂ ಓದಿರೋ ಈ ಹುಡುಗ ಮಾನಸಿಕ ಅಸ್ವಸ್ಥನಂತೆ ವರ್ತನೆ ಮಾಡ್ತಿದ್ದ ಅನ್ನೋದು ಗೊತ್ತಾಗಿದೆ. ಗಾಳಿಗೆ ಹಾರಿ ಹೋಗಿರಬಹುದು ಎಂದುಕೊಂಡಿದ್ದ ಮನೆಯವ್ರಿಗೆ ಮತ್ತೆ ಅದೇ ಜಾಗದಲ್ಲಿ ಬಂದು ಬೀಳೋದನ್ನು ಕಂಡು ಅನುಮಾನ ಬಂದಿದೆ. ನಂತ್ರ ಸಿಸಿಟಿವಿ ಪರಿಶೀಲನೆ ಮಾಡಿದಾಗ ಕಾರ್ತಿಕ್ ನಾ ಈ ಹೇಯ ಚಾಳಿ ಕಂಡು ಸ್ಥಳಿಯರು ಶಾಕ್ ಆಗಿದ್ಧಾರೆ. ಇದೀಗ ಈ ಸೈಕೋಪಾತ್ ಅರೆಸ್ಟ್ ಆಗಿದ್ದು ಕಂಬಿ ಎಣಿಸುತ್ತಿದ್ದಾನೆ.