Health Tips Digestion: ದೇಹದಲ್ಲಿ ಜೀರ್ಣಕ್ರಿಯೆಗೆ ಸರಿಯಾದ ಕ್ರಮ ಹಾಗೂ ಸರಿಯಾದ ಆಹಾರ ಏನು.?
ಸೌಂಡ್ ಮೈಂಡ್ ಇನ್ ಎ ಸೌಂಡ್ ಬಾಡಿ ಎನ್ನುತ್ತೇವೆ. ಸದೃಡವಾದ ದೇಹದಲ್ಲಿ ಸದೃಡವಾದ ಮನಸ್ಸಿರುತ್ತದೆ. ಈ ಮಾತು ನೂರಕ್ಕೆ ನೂರು ಸತ್ಯ. ದೇಹದಲ್ಲಿ ಚಾಯಾಪಚಯ ಕ್ರಿಯೆಯಲ್ಲಿರೋ ನಮ್ಮ ಆಹಾರ ನಮ್ಮ ಮನಸ್ಸು ಉಲ್ಲಾಸದಿಂದ ಇರಲು ಕೂಡ ಸಹಾಯ ಮಾಡುತ್ತದೆ. ಜಂಕ್ ಫುಡ್ ಸೇವನೆ ಮಾಡೋದ್ರಿಂದ ಆಲಾಸ್ಯ, ಸೋಂಬೇರಿತನ, ಬೇಜಾವಾಬ್ದಾರಿತನ ರುತ್ತದೆ ಅನ್ನೋದನ್ನು ಡಾಕ್ಟರ್‌ಗಳೇ ಒಪ್ಪುತ್ತಾರೆ. ಆಗಾದ್ರೆ, ದೇಹಕ್ಕೆ ಯಾವ ಆಹಾರ ಉತ್ತಮ.ಜೀರ್ಣಕ್ರಿಯೆ ಸಹಾಯ ಆಗುವ ಅಂಶಗಳೇನು ಅನ್ನೋದನ್ನು ತಿಳಿಯೋಣ.
- ನಮ್ಮ ದೇಹ ಸೇರುವ ಆಹಾರ ಮನಸ್ಸಿಗೆ ಸಂತೃಪ್ತಿ ನೀಡಬೇಕು. ಅದನ್ನು ಅನುಭವಿಸುತ್ತಾ ಸೇವನೆ ಮಾಡಬೇಕು. ನಿಧಾನವಾಗಿ ಸೇವಿಸಬೇಕು.ಚೆನ್ನಾಗಿ ಅಗಿದು ಅಗಿದು ತಿನ್ನಬೇಕು
- ಅತಿಯಾಗಿ ತಿನ್ನಬಾರದು. ದಿನಪೂರ್ತಿ ತಿನ್ನದೇ ಚಿಕ್ಕ ಚಿಕ್ಕ ಆಹಾರವನ್ನೇ 4 ರಿಂದ 5 ಬಾರಿ ತಿನ್ನಬಹುದು. ಅದೂ ಕೂಡ ಕಡಿಮೆ ಪ್ರಮಾಣದಲ್ಲಿ.
- ಮೂರು ಹೊತ್ತಿನ ಊಟದ ಗಾತ್ರ ಅತಿಯಾಗಿರಬಾರದು.
- ಮಲಗುವ ಮುನ್ನ 2 ರಿಂದ ಮೂರು ಗಂಟೆಯ ಮುನ್ನ ಊಟ ಮಾಡಬೇಕು. ತಿಂದ ತಕ್ಷಣ ಮಲಗುವುದು ಅಪಾಯಕಾರಿ.
- ದೇಹದಲ್ಲಿ ಸಾಕಷ್ಟು ನೀರು ಇರಬೇಕು. ಕುಡಿಯಲು ನೀರು ಇಟ್ಟುಕೊಳ್ಳಿ.
ಜೀರ್ಣಕ್ರಿಯೆಗೆ ಧೂಮಪಾನದಿಂದ ಅಡ್ಡಿ.
ಅನೇಕರು ಧೂಮಪಾನಕ್ಕೆ ದಾಸರಾಗಿದ್ದೀರಿ. ಧೂಮಪಾನ ಮಾಡುವುದರಿಂದ, ನಮ್ಮ ಆಹಾರನಾಳದ ಕೆಳಗಿನ ತುದಿಯನ್ನು ಕಂಟ್ರೋಲ್ ಮಾಡುವ ಸ್ನಾಯುಗಳನ್ನು ವೀಕ್ ಮಾಡುತ್ತದೆ. ಇದರಿಂದ ಹೊಟ್ಟೆಯಲ್ಲಿನ ಆಮ್ಲೀಯ ಅಂಶವೂ ತಪ್ಪು ದಿಕ್ಕಿನಲ್ಲಿ ಚಲಿಸಬಹುದು. ಇದ್ರಿಂದ ನಿಮ್ಮ ಜೀರ್ಣಕ್ರಿಯೆಯಲ್ಲಿ ಉರಿ, ಎದೆಉರಿ ಉಂಟಾಗಬಹುದು.
ಅತಿಯಾದ ಮದ್ಯಸೇವನೆಯಿಂದ ಜೀರ್ಣಕ್ರಿಯೆಗೆ ಸಮಸ್ಯೆ.
ಮದ್ಯಪಾನ ಸೇವನೆ ಯಾವುದೇ ಮನುಷ್ಯನ ಜೀರ್ಣಾಂಗ ವ್ಯವಸ್ಥೆಯನ್ನು ಹಾನಿ ಮಾಡುತ್ತದೆ ಎಂದು ಹೇಳಲು ಹೋಗುವುದಿಲ್ಲ. ಆದ್ರೆ. ಅತಿಯಾದ ಕುಡಿತ ಚಟ ಹೊಟ್ಟೆಯಲ್ಲಿ ಆಮ್ಲೀಯ ಯತ್ಪಾದನೆ ಹೆಚ್ಚಾಗುವಂತೆ ಮಾಡುತ್ತದೆ. ಇದ್ರಿಂದ ಎದೆ ಉರಿ ಉಂಟಾಗುತ್ತದೆ. ಅತಿಯಾದ ಕುಡಿತ, ಒಂದೇ ಅವಧಿಯಲ್ಲಿ ಹೆಚ್ಚು ಕುಡಿತವನ್ನು ಮೊದಲು ನಿಲ್ಲಿಸಿ.