Hassan Truck Accident: ಹಾಸನದ ಮೊಸಳೆ ಹೊಸಹಳ್ಳಿ ದುರಂತ. 9 ಜನರ ಸಾವು.25 ಮಂದಿಗೆ ಗಂಭೀರ ಗಾಯ
ಇಡೀ ಊರ ತುಂಬಾ ಗಣೇಶನನ್ನು ನೀರಿಗೆ ಬಿಡೋ ಸಂಭ್ರಮ. ಡಿಜೆ ಸೌಂಡಿಗೆ ಡ್ಯಾನ್ಸ್, ಹಾಡು, ಕುಣಿದು ಕುಪ್ಪಳಿಸ್ತಿದ್ದ ಯುವಕರು.ಆದ್ರೆ, ಇದೀಗ ಇಡೀ ಊರೆ ಸ್ಮಶಾನ ಮೌನವಾಗಿದೆ. ಬೈಕ್ ಅಡ್ಡ ಬಂತು ಎಂದು ಆತನ ಪ್ರಾಣ ಉಳಿಸಲು ಹೋಗಿ 9 ಜನ್ರ ಪ್ರಾಣಪಕ್ಷಿಯೇ ಹಾರಿ ಹೋಗಿದೆ. ಕುಟುಂಬಗಳು ಅನಾಥವಾಗಿವೆ. ಊರೇ ಸ್ಮಶಾನಮೌನವಾಗಿದೆ. ಈ ಘಟನೆ ನಡೆದಿದ್ದು, ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮೊಸಳೆಹಳ್ಳಿ ಗ್ರಾಮದಲ್ಲಿ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು. ಯಾರದ್ದು ತಪ್ಪು.! ಏನಾಯ್ತು ಅನ್ನೋದನ್ನು ನೋಡ್ತಾ ಹೋಗೋಣ.
ಪ್ರತಿವರ್ಷದಂತೆ ಈ ಬಾರಿಯೂ ಮೊಸಳೆಹಳ್ಳಿ ಗ್ರಾಮದಲ್ಲಿ ಗಣೇಶನ ಮೆರವಣಿಗೆ ಅದ್ಧೂರಿಯಾಗಿ ನಡೀತಾ ಇತ್ತು. ಅಲ್ಲಿನ ಸ್ಥಳಿಯರು ಇಂತದ್ದೊಂದು ಭೀಕರ ಘಟನೆ ಸಂಭವಿಸಲಿದೆ ಅನ್ನೋ ಪರಿವೇ ಇರಲಿಲ್ಲ. ಆದ್ರೆ, ಯಮಸ್ವರೂಪಿಯಾಗಿ ಬಂದಂತ ಟ್ರಕ್ ಎಲ್ಲರ ನೆಮ್ಮದಿ ಕಿತ್ತುಕೊಂಡಿದೆ. ಗಣೇಶನ ಮೆರವಣಿಗೆ ಮೇಲೆ ಟ್ರಕ್ ನುಗ್ಗಿ ಖುಷಿಯಲ್ಲಿದ್ದ ಗ್ರಾಮಸ್ಥರನ್ನು ಶೋಕದಲ್ಲಿ ಮುಳುಗುವಂತೆ ಮಾಡಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಶುಕ್ರವಾರ ರಾತ್ರಿ ಗಣೇಶ ಚತುರ್ಥಿಯ ಅಂತಿಮ ದಿನವಾದ ಕಾರಣ ವಿಸರ್ಜನೆಗೆ ಭರ್ಜರಿ ಸಿದ್ಧತೆ ಕೂಡ ನಡೆದಿತ್ತು. ಹೊಸಹಳ್ಳಿ-ಮೊಸಳೆ ರಸ್ತೆಯಲ್ಲಿ 200 ಕ್ಕೂ ಅಧಿಕ ಗ್ರಾಮಸ್ಥರು ಫುಲ್ ಜೋಶ್‌ನಲ್ಲಿ ಡಿಜೆ ಸೌಂಡಿಗೆ ತಲೆದೂಗುತ್ತಾ ಸಾಗ್ತಾ ಇದ್ದರು. ಇದೇ ಸಮಯದಲ್ಲಿ ಈ ಮೆರವಣಿಗೆ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ ಆಪೋಸಿಟ್ ರೋಡ್‌ನಿಂದ ಬಂದಂತಹ ಲಾರಿಯೊಂದು ಮೆರವಣಿಗೆ ಮೇಲೆ ನುಗ್ಗಿಬಿಟ್ಟಿತು. ಲಾರಿಯ ಗಾಲಿಗೆ ಸಿಕ್ಕು ನುಜ್ಜುಗೊಜ್ಜಾದವರ ಪಾಡು ಯಾರಿಗೂ ಬೇಡ.
ಲಾರಿ ಚಕ್ರದಲ್ಲೇ ಸಿಕ್ಕು ನರಳಿ ನರಳಿ ಕೆಲವ್ರು ಪ್ರಾಣ ಬಿಟ್ಟರು. ಸ್ಥಳದಲ್ಲೇ 6 ಮಂದಿ ಜೀವ ತೆತ್ತರೆ, ಹಿಮ್ಸ್‌ನಲ್ಲಿ ಇಬ್ಬರು ಪ್ರಾಣ ಕಳೆದುಕೊಂಡ್ರು. ಯಾವುದೇ ಚಿಕಿತ್ಸೆ ಕೊಟ್ಟರು ಅವ್ರ ಪ್ರಾಣ ಮಾತ್ರ ಉಳಿಸಿಕೊಳ್ಳಲು ಆ ಗಣೇಶನಿಂದ್ಲೂ ಸಾಧ್ಯವಾಗಲಿಲ್ಲ. ಕ್ಷಣಮಾತ್ರದಲ್ಲೇ ಇಷ್ಟು ರಭಸವಾಗಿ ಜನ್ರ ಮೇಲೆ ಲಾರಿ ನುಗ್ಗೋಕೆ ಏನಾದ್ರೂ ತಾಂತ್ರಿಕ ದೋಷ ಕಾರಣಾನಾ.?ಏನಾದ್ರೂ ಚಾಲಕನ ಬೇಜವಾಬ್ದಾರಿಯಿಂದ ಇಂದದ್ದೊಂದು ದುರ್ಘಟನೆ ನಡೀತಾ ಅನ್ನೋ ಪ್ರಾಥಮಿಕ ತನಿಖೆಯಿಂದ ಗೊತ್ತಾಗ್ಬೇಕಾಗಿದೆ.
ಗ್ರಾಮದ ಯುವಕರೇ ಹೆಚ್ಚಾಗಿ ಬಲಿಯಾದ್ರಿಂದ ಇಡೀ ಊರೇ ಕಂಗಾಲಾಗಿದೆ. ಮೆನಗೆ ಆಧಾರವಾಗಿದ್ದ ಯುವಕರೇ ಮನೆಯವ್ರನ್ನು ತೊರೆದು ಬಾರದ ಲೋಕಕ್ಕೆ ಹೋಗಿದ್ದಾರೆ. ಇನ್ನು ನಿನ್ನೆಯಷ್ಠೆ 25 ವರ್ಷದ ಮಿಥುನ್ ಎಂಬ ಹೊಸದುರ್ಗದ ಯುವಕ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡು ಗಣೇಶನ ವಿಸರ್ಜನೆ ಸೆಲೆಬ್ರೇಷನ್‌ನಲ್ಲಿ ಎಂಜಾಯ್ ಮಾಡ್ತಿದ್ದ. ಇದೇ ಹೊಳೆನರಸೀಪುರದಲ್ಲಿ ಇಂಜಿನಿಯರಿಂಗ್ ಓದೋ ಸಲುವಾಗಿ ಅಲ್ಲಿ ನೆಲೆಸಿದ್ದ ಮಿಥುನ್ ಬರ್ತ್ ಡೇ ದಿನವೇ ಯಮಧರ್ಮನ ಕರೆಗೆ ಓಗೊಟ್ಟು ಪ್ರಾಣಬಿಟ್ಟಿದ್ದಾನೆ.
ಆದ್ರೆ, ಪ್ರತ್ಯಕ್ಷದರ್ಶಿಗಳು ಹೇಳೋ ಪ್ರಕಾರ, ಅಡ್ಡಾದಿಡ್ಡಿಯಾಗಿ ಎದುರಿಗೆ ಬೈಕ್ ಬಂದಿದ್ದನ್ನು ತಪ್ಪಿಸಲು ಹೋದ ಲಾರಿ ಡ್ರೈವರ್ ಕಂಟ್ರೋಲ್ ತಪ್ಪಿ ಜನರ ಮೇಲೆ ನುಗ್ಗಿಸಿದ. ಇದಕ್ಕೆಲ್ಲಾ ಟ್ರಕ್ ಚಾಲಕನ ನಿರ್ಲ್ಯಕ್ಷವೇ ಕಾರಣ ಅಂತಾ ಅಲ್ಲಿನ ಸ್ಥಳಿಯರು ಚಾಲಕನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ರೊಚ್ಚಿಗೆದ್ದಿದ್ದ ಗ್ರಾಮಸ್ಥರ ಅಕ್ರೋಶಕ್ಕೆ ಹೊಳೆನರಸೀಪುರದ ಕಟ್ಟೆಬೆಳಗುಲಿ ಗ್ರಾಮದ ಡ್ರೈವರ್ ಭುವನೇಶ್ ಕೂಡ ಗಾಯಗೊಂಡಿದ್ದಾನೆ. ವೆಹಿಕಲ್ ಮಹಾರಾಷ್ಟ್ರ ರಿಜಿಸ್ಟ್ರೇಷನ್ ಆಗಿದ್ದು, ಪ್ರಕರಣ ಕೂಡ ದಾಖಲಾಗಿದೆ. ಅತಿ ವೇಗದ ಚಾಲನೆ ಕೂಡ ಇಂತದ್ದೊಂದು ದುರಂತಕ್ಕೆ ಕಾರಣ ಎನ್ನಲಾಗ್ತಿದೆ.
ಮೃತಪಟ್ಟ ಗ್ರಾಮಸ್ಥರು:-
1.ಪ್ರವೀಣ್ ಕುಮಾರ್, BE ಅಂತಿಮ ವರ್ಷದ ವಿದ್ಯಾರ್ಥಿ, ಬಿಹಾರ
2. ರಾಜೇಶ್ ಬಿನ್ ಮೂರ್ತಿ, (17) ಕೆ.ಬಿ. ಪಾಳ್ಯ, ಹೊಳೆನರಸೀಪುರ
3. ಈಶ್ವರ್ ಬಿನ್ ರವಿಕುಮಾರ್( 17) ಡನಾಯಕನಹಳ್ಳಿ ಕೊಪ್ಪಲು, ಹೊಳೆನರಸೀಪುರ
4. ಗೋಕುಲ್ ಬಿನ್ ಸಂಪತ್ ಕುಮಾರ್( 17 ) ಮುತ್ತಿಗೆ ಹಿರೇಹಳ್ಳಿ
5. ಕುಮಾರ್ ಬಿನ್ ತಿಮ್ಮಯ್ಯ( 25 ) ಕಬ್ಬಿನಹಳ್ಳಿ, ಹಳೆಕೋಟೆ, ಹೊಳೆನರಸೀಪುರ
6. ಪ್ರವೀಣ್ ಬಿನ್ ಹನುಮಯ್ಯ ( 25 ) ಕಬ್ಬಿನಹಳ್ಳಿ, ಹೊಳೆನರಸೀಪುರ
7. ಮಿಥುನ್ ಬಿನ್ ವಿಜಯ್ (23) ಗವಿಗಂಗಾಪುರ, ಹೊಸದುರ್ಗ, ಚಿತ್ರದುರ್ಗ ಜಿಲ್ಲೆ
8. ಪ್ರಭಾಕರ್, ಬಂಟರಹಳ್ಳಿ, ಹೊಳೆನರಸೀಪುರ ತಾಲೂಕು
9. ಮೃತನ ಹೆಸರು, ವಿಳಾಸ ತಿಳಿದು ಬಂದಿಲ್ಲ
ಶುಕ್ರವಾರ ಸರಿಯಾಗಿ 8ಗಂಟೆ 30 ನಿಮಿಷದ ಸುಮಾರಿಗೆ ಹಾಸನ ತಾಲೂಕಿನ ಮೊಸಳೆ ಹೊಸಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಗಣೇಶ ಮೆರವಣಿಗೆ ಹೊರಟಿದೆ. ಹೆದ್ದಾರಿಯ ಒಂದು ಬದಿ ಬಂದ್ ಮಾಡಿದ್ದರಿಂದ ಮತ್ತೊಂದು ಬದಿಯಲ್ಲಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ವಾಹನಗಳು ನುಗ್ಗದಂತೆ ರಸ್ತೆ ಮಧ್ಯೆ ಬ್ಯಾರಿಕೇಡ್‌ಗಳನ್ನೂ ಹಾಕಿದ್ವಿ.ಇದೇ ವೇಳೆಗೆ ಹಾಸನದಿಂದ ಹೊಳೆನರಸೀಪುರಕ್ಕೆ ಹೊರಟಿದ್ದ ಟ್ರಕ್, ಬೈಕ್ ಒಂದಕ್ಕೆ ಡಿಕ್ಕಿ ಹೊಡೆದು ಬಳಿಕ ಗಣೇಶ ಮೆರವಣಿಗೆಯತ್ತ ತಿರುಗಿದೆ. ಡಿಜೆ ಸದ್ದಿಗೆ ಕುಣೀತಿದ್ದವರಿಗೆ ಏನಾಗುತ್ತಿದೆ ಅಂತಾ ಗೊತ್ತಾಗುವಷ್ಟರಲ್ಲೇ ಟ್ರಕ್ ಮೈಮೇಲೆ ಎರಗಿಬಿಟ್ಟಿದೆ ಅಂತಾ ಪೊಲೀಸರು ಸಮರ್ಥನೆ ಕೊಡ್ತಾ ಇದ್ದರು.
ಇತ್ತ ಸರ್ಕಾರ ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ಘೋಷಣೆ. ಹಾಗೂ ಗಾಯಾಳುಗಳಿಗೆ ಚಿಕಿತ್ಸಾ ಸಂಪೂರ್ಣ ವೆಚ್ಚ ಭರಿಸೋದಾಗಿ ಹೇಳಿದೆ.ವಿಧಿಯಾಟದ ಮುಂದೆ ಅಲ್ಲಿ ಕುಣಿತಿದ್ದ ಯುವಕರ ಭಕ್ತಿ, ಭಾವಗಳು ಮೌನತಾಳಿವೆ. ಊರಲ್ಲಿ ಸೂತಕರ ಛಾಯೆ ಆವರಿಸಿದೆ. ಚಾಲಕನ ಎಡವಟ್ಟಿನಿಂದ ಕುಟುಂಬಗಳು ಕೊನೆವರೆಗೂ ನೋವಲ್ಲಿ ದಿನದೂಡುವಂತಾಗಿದೆ.